Jr.NTR and Kalyan Ram mother : ಜೂ. ಎನ್‌ಟಿಆರ್.. ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ತಮ್ಮ ನಟನೆ ಮತ್ತು ವ್ಯಕ್ತಿತ್ವದಿಂದ ಭಾರತ ಸೇರಿದಂತೆ ವಿದೇಶದಲ್ಲಿಯೂ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟ. ಅಂದಹಾಗೆ ಜೂ.ಎನ್‌ಟಿಆರ್ ಅವರ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಹೇಳಬೇಕಿಲ್ಲ.. ಮುಖ್ಯ ವಿಚಾರ ಅಂದ್ರೆ, ಇವರಿಬ್ಬರ ಹೆತ್ತ ತಾಯಂದಿರು ಬೇರೆ ಬೇರೆ.. ಯಾರವರು..? ಬನ್ನಿ ನೋಡೋಣ..
ಹೌದು.. ಜೂ.ಎನ್‌ಟಿಆರ್ ಮತ್ತು ಕಲ್ಯಾಣ್ ರಾಮ್ ಅವರು ಸಹೋದರರು.. ಇವರು ನಂದಮೂರಿ ರಾಮಕೃಷ್ಣ ಅವರ ಮಕ್ಕಳು.
ನಂದಮೂರಿ ರಾಮಕೃಷ್ಣ ತೆಲುಗು ಸಿನಿರಂಗದ ಸೂಪರ್ ಸ್ಟಾರ್ ಹಿರಿಯ ನಟ ಅಲ್ಲದೆ, ನಂದಮೂರಿ ಬಾಲಕೃಷ್ಣ ಅವರ ಅಣ್ಣ.
ತೆಲುಗು ಚಿತ್ರರಂಗದ ಹಿರಿಯ ನಟ ಮತ್ತು ತೆಲುಗು ದೇಶಂ ಪಕ್ಷ ಸಂಸ್ಥಾಪಕ, ಅಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ನಂದಮೂರಿ ತಾರಕ ರಾಮಾರಾವ್ ಅವರ ಮಕ್ಕಳೇ ರಾಮಕೃಷ್ಣ ಮತ್ತು ಬಾಲಕೃಷ್ಣ..
ಇನ್ನು ಜೂ.ಎನ್‌ಟಿಆರ್ ಅವರ ತಂದೆ ರಾಮಕೃಷ್ಣ ಅವರಿಗೆ ಶಾಲಿನಿ ನಂದಮೂರಿ ಮತ್ತು ಲಕ್ಷ್ಮಿ ಹರಿಕೃಷ್ಣ ಇಬ್ಬರು ಹೆಂಡತಿಯರು.
ಶಾಲಿನಿ ನಂದಮೂರಿ ಅವರ ಏಕೈಕ ಪುತ್ರ ನಂದಮೂರಿ ತಾರಕ ರಾಮಾರಾಮ್ ಅಂದ್ರೆ ಜೂ.ಎನ್‌ಟಿಆರ್.
ಲಕ್ಷ್ಮಿ ಹರಿಕೃಷ್ಣ ಅವರಿಗೆ ನಂದಮೂರಿ ಕಲ್ಯಾಣ್ ರಾಮ್, ನಂದಮೂರಿ ಸುಹಾಸಿನಿ, ಜಾನಕಿ ರಾಮ್ ನಂದಮೂರಿ ಎಂಬ ಮೂವರು ಮಕ್ಕಳಿದ್ದಾರೆ.
ಕಲ್ಯಾಣ್ ರಾಮ್ ಮತ್ತು ಜೂ.ಎನ್‌ಟಿಆರ್ ಬೇರೆ ಬೇರೆ ತಾಯಿಯ ಮಕ್ಕಳಾದರೂ ಸಹ ಇವರಿಬ್ಬರೂ ರಾಮಲಕ್ಷ್ಮಣರಂತಿದ್ದಾರೆ..
ಜೂ.ಎನ್‌ಟಿಆರ್ ತಮ್ಮ ಕಲ್ಯಾಣ್ ರಾಮ್ ಅವರನ್ನು ತಂದೆಯ ಸ್ಥಾನದಲ್ಲಿಟ್ಟಿದ್ದಾರೆ ಎನ್ನುವ ವಿಚಾರ ಇವರಿಬ್ಬರ ನಡುವಿನ ಸಂಬಂಧ ಎಂತಹುದ್ದು ಎನ್ನುವುದನ್ನ ತಿಳಿಸುತ್ತದೆ..
ಕಲ್ಯಾಣ್ ರಾಮ್ ಸಹ ಜೂನಿಯರ್ ಎನ್‌ಟಿಆರ್ ಅವರ ಪ್ರತಿಯೊಂದು ಕೆಲಸಕ್ಕೂ ಬೆನ್ನೆಲುಬಾಗಿ ನಿಲ್ಲುತ್ತಾರೆ..