Darshan case updates : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ A2 ಆರೋಪಿಯಾಗಿರುವ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಬೆಳಗ್ಗೆ 9 ಗಂಟೆ ಸುಮಾರಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ , ಪುತ್ರ ವಿನೀಶ್, ಆಪ್ತ ಧನ್ವೀರ್ ಆಸ್ಪತ್ರೆಗೆ ಆಗಮಿಸಿದ್ರು. ಕೆಲ ಹೊತ್ತಿನಲ್ಲಿ ಡಿಸ್ಚಾರ್ಜ್ ಪ್ರೊಸಿಜರ್ ಮುಗಿಸಿ ಆಸ್ಪತ್ರೆಯಿಂದ 11.30 ರ ಸುಮಾರಿಗೆ ಹೊರಟರು. 


COMMERCIAL BREAK
SCROLL TO CONTINUE READING

ಬಳ್ಳಾರಿಯಿಂದ ಕಾರು ಓಡಿಸಿಕೊಂಡು ಬಂದಿದ್ದ ನಟ ಧನ್ವೀರ್ ಇಲ್ಲಿಯೂ ಕಾರು ಓಡಿಸಿಕೊಂಡು ಹೊಸಕೆರೆಹಳ್ಳಿಯ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ ಗೆ ನಟ ದರ್ಶನ್ ಕರೆತಂದರು. ಅಭಿಮಾನಿಗಳು ಆರ್ ಆರ್ ನಗರದ ಮನೆಗೆ ಹೆಚ್ಚಾಗಿ ಬರುವ ಸಾಧ್ಯತೆ ಹಿನ್ನೆಲೆ ದರ್ಶನ್ ಪತ್ನಿಯ ಮನೆಯಲ್ಲೇ ರೆಸ್ಟ್ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ:ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿದ ದೊಡ್ಮನೆ ಹಿರಿಮಗ ಶಿವರಾಜ್‌ ಕುಮಾರ್‌ ಮತ್ತು ಹಿರಿಸೊಸೆ ಗೀತಾ... ಇವರ ಹೆಸರಲ್ಲಿರೋ ಒಟ್ಟು ಆಸ್ತಿ ಎಷ್ಟು ಗೊತ್ತಾ?


ಕೊಲೆ ಮಾಡಿದ ಆರೋಪದಲ್ಲಿ ಬಳ್ಳಾರಿ ಜೈಲಲ್ಲಿ ಕಂಬಿ ಎಣಿಸುತ್ತಿದ್ದ ಡೆವಿಲ್ ಗೆ ಮಧ್ಯಂತರ ಜಾಮೀನು ಸಿಗಲು ಪ್ರಮುಖ ಕಾರಣ ಬೆನ್ನು ನೋವು.‌ಈ ನೋವಿಗೆ ಸರ್ಜರಿ ಮಾಡಿಲ್ಲ ಅಂದ್ರೆ ದರ್ಶನ್ ಗೆ ಸ್ಟ್ರೋಕ್ ಆಗುತ್ತೆ ಅಂತಾ ಹಿರಿಯ ವಕೀಲ ಸಿವಿ ನಾಗೇಶ್ ಪ್ರಬಲ ವಾದ ಮಂಡಿಸಿದ್ರು. ಈ ಹಿನ್ನೆಲೆ ದರ್ಶನ್ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು  ಕೋರ್ಟ್ ಬೇಲ್ ನೀಡಿತ್ತು. ಆದರೆ ಬಿಜಿಎಸ್ ಆಸ್ಪತ್ರೆ ಸೇರಿ ಒಂದೂವರೆ ತಿಂಗಳು ಕಳೆದ್ರು ಸಹ ದರ್ಶನ್ ಗೆ ಸರ್ಜರಿ ಆಗ್ಲೇ ಇಲ್ಲಾ ಅನ್ನೋದು ಗಮನಾರ್ಹ. ‌


ಬಿಪಿ ವೇರಿಶಿಯನ್ ಇದೆ ಅಂತಾ ಹೇಳಿ ಸರ್ಜರಿ ಮುಂದಕ್ಕೆ ಹಾಕಲಾಗಿತ್ತು. ಯಾವಾಗ ರೆಗ್ಯುಲರ್ ಬೇಲ್ ಸಿಕ್ತೋ ದರ್ಶನ್ ವರಸೆ ಬದಲಾಯಿಸಿದ್ರು ಎನ್ನಬಹುದು. ನನಗೆ ಸರ್ಜರಿ ಬೇಡ, ಫಿಜಿಯೋಥೆರಫಿ ಮೂಲಕ ನೋವು ವಾಸಿ ಮಾಡಿ ಅಂತಾ ವೈದ್ಯರನ್ನ ಕೇಳಿಕೊಂಡು ಯಾವುದೇ ಸರ್ಜರಿ ಮಾಡಿಸಿಕೊಳ್ಳದೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದರ್ಶನ್ ಈ ನಡೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಜೈಲಿಂದ ಹೊರಬರಲು ಕರಿಯ ಈ ರೀತಿ ನಾಟಕಾವಾಡಿದ್ರ ಎಂಬ ಅನುಮಾನಗಳು ಹುಟ್ಟಿಕೊಳ್ಳುವಂತೆ ಮಾಡಿದೆ.


ಇದನ್ನೂ ಓದಿ:ಬಿಗ್ ಬಾಸ್‌ನಿಂದ ಹೊರಬರಲು ಇದೇ ಮುಖ್ಯ ಕಾರಣ: ಜೀ ಕನ್ನಡ ನ್ಯೂಸ್‌ಗೆ ಗೋಲ್ಡ್ ಸುರೇಶ್ ಸ್ಪಷ್ಟನೆ


ಇನ್ನೂ ನಟ ದರ್ಶನ್ ಗೆ ಸದ್ಯ ರಿಲೀಫ್ ಸಿಕ್ಕಿರಬಹುದು. ಆದರೆ ಪೊಲೀಸರು ಕೊಲೆ ಆರೋಪಿ ದರ್ಶನ್ ಗೆ ಬೇಲ್ ಕೊಟ್ಟಿರುವುದನ್ನು ಪ್ರಶ್ನಿಸಿ ಸುಪ್ರೀಂಗೆ ಹೋಗಲು ನಿರ್ಧರಿಸಿ ಚರ್ಚೆ ನಡೆಸಿದ್ದಾರೆ. ಹೀಗಾಗಿ ದರ್ಶನ್ ಅಡಕತ್ತರಿಯಲ್ಲೇ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ. ಒಟ್ಟಾರೆಯಾಗಿ ಒಬ್ಬ ಸ್ಟಾರ್ ನಟನಾಗಿ‌ ಕೋಪದ ಕೈಗೆ ಬುದ್ದಿಕೊಟ್ಟು ದರ್ಶನ್ ಜೈಲು ಸೇರಿ ಈಗ ಜಾಮೀನು ಪಡೆದು ಹೊರಗಡೆ ಇರುವುದು ಅವರ ಕುಟುಂಬ, ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿರುವಂತು ಸುಳ್ಳಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.