Actor Darshan tattoo : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರೆಲ್ಲ ದಾಸನನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ಆರಾಧನೆ ಮಾಡ್ತಾರೆ. ಕೆಲವು ಅಭಿಮಾನಿಗಳು ಅವರ ಫೋಟೋ ಮತ್ತು ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಸಧ್ಯ ದಚ್ಚು ಫ್ಯಾನ್‌ ಒಬ್ಬ ತುಂಬಾ ಡಿಫ್ರೆಂಟ್‌ ಆಗಿ ಅಭಿಮಾನ ಮೆರೆದಿದ್ದಾನೆ. 


COMMERCIAL BREAK
SCROLL TO CONTINUE READING

ಹೌದು.. ಸ್ಯಾಂಡಲ್‍ವುಡ್‍ನ ಬಾಕ್ಸಾಫಿಸ್ ಸುಲ್ತಾನ್ ದರ್ಶನ್‌ ಅವರಿಗೆ ಸಾಕಷ್ಟು ಡೈ ಹಾರ್ಡ್‌ ಫ್ಯಾನ್ಸ್‌ಗಳಿದ್ದಾರೆ. ಡಿಬಾಸ್‌ ಅಂದ್ರೆ ಅವರಿಗೆ ಪಂಚಪ್ರಾಣ. ದಚ್ಚು ಹುಟ್ಟು ಹಬ್ಬದಿಂದ ಹಿಡಿದು ಅವರ ಸಿನಿಮಾ ರಿಲೀಸ್‌ ಆಗುವವರೆಗೂ ಆ ದಿನವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಸಧ್ಯ ಅಭಿಮಾನಿಯೊಬ್ಬ ತನ್ನ ಬೆನ್ನಮೇಲೆ ದರ್ಶನ್‌ ಅವರ ಸಿನಿಮಾಗಳ ಹೆಸರು ಬರೆಸಿಕೊಂಡು ವಿಶಿಷ್ಟವಾಗಿ ಅಭಿಮಾನ ತೋರಿದ್ದಾನೆ.


ಇದನ್ನೂ ಓದಿ: ʻಕನ್ಯಾದಾನʼ ಧಾರವಾಹಿಗೆ ನೀತು ಎಂಟ್ರೀ: 600 ಸಂಚಿಕೆಗಳ ಕಥಾಹಂದರ!


ಅಭಿಮಾಯಿಯೊಬ್ಬ ತನ್ನ ಬೆನ್ನ ಮೇಲೆ ಟ್ಯಾಟು ರೂಪದಲ್ಲಿ ದರ್ಶನ್ ನಟನೆಯ ಸುಮಾರು 45 ಚಿತ್ರಗಳ ಹೆಸರನ್ನು ಬರೆಯಿಸಿಕೊಂಡಿದ್ದಾನೆ. ಇದೀಗ ಈ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಅಲ್ಲದೆ, ಡಿಬಾಸ್‌ ಅಭಿಮಾನಿಗಳು ಸಹ ಈ ಪೋಸ್ಟ್‌ನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.


ಇನ್ನು ದರ್ಶನ್ ಅಭಿಮಾನಿಗಳು ಟ್ಯಾಟು ಹಾಕಿಸಿಕೊಳ್ಳೋ ಮೂಲಕ ತಮ್ಮ ಅಭಿಮಾನ ಮೆರೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೆಲ ದಚ್ಚು ಅಭಿಮಾನಿಗಳು ಬೆನ್ನ ಮೇಲೆ ದರ್ಶನ್‌ ಸಂಗೊಳ್ಳಿ ರಾಯಣ್ಣನ ಲುಕ್‌, ಅವರ ಹೆಸರು, ಹೀಗೆ ವಿಭಿನ್ನವಾಗಿ ಅಭಿಮಾನ ಮೆರೆದಿದ್ದರು. 


ಇದನ್ನೂ ಓದಿ: Never.. Ever.. Give up.. ಕೇವಲ ಪದಗಳಲ್ಲ.. ಪರಿಶ್ರಮದ ಮೂಲಕ ಗೆದ್ದ ಖ್ಯಾತನಾಮರು -ಹಿಟ್ ಲಿಸ್ಟ್ ಇಲ್ಲಿದೆ!


ಒಟ್ಟಾರೆಯಾಗಿ ಹೇಳುವುದಾದರೆ ನಿಮ್ಮ ಪ್ರೀತಿ ವಿಶ್ವಾಸ ಹೃದಯದಲ್ಲಿ ಇರಲಿ ಅಂತ ಸ್ಟಾರ್ ನಟರು ತಮ್ಮ ಅಭಿಮಾನಿಗಳಲ್ಲಿ ಆಗಾಗ ಕೇಳಿಕೊಳ್ಳುತ್ತಲೇ ಇರುತ್ತಾರೆ. ಆದರೂ ಈ ರೀತಿ ಹುಚ್ಚು ಅಭಿಮಾನ ತೋರಿಸೋ ಸಾಹಸಕ್ಕೆ ಅಭಿಮಾನಿಗಳು ಇಳಿಯೋದು ಮಾತ್ರ ಮುಂದುವರೆಯುತ್ತಲೇ ಇದೆ. ಸಧ್ಯ ದರ್ಶನ್‌ ನಟನೆಯ ಕಾಟೇರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಡಿಸೆಂಬರ್ 29ರಂದು ತೆರೆಗೆ ಬರಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.