ʻಕನ್ಯಾದಾನʼ ಧಾರವಾಹಿಗೆ ನೀತು ಎಂಟ್ರೀ: 600 ಸಂಚಿಕೆಗಳ ಕಥಾಹಂದರ!

Kanyadana: ಸ್ಯಾಂಡಲ್‌ವುಡ್‌ ನಟಿ ನೀತು ಶೆಟ್ಟಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಕನ್ಯಾದಾನ'ದಲ್ಲಿ ನಟಿಸುತ್ತಿದ್ದಾರೆ. ಈ ನಟಿ ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಧಾರವಾಹಿಯಲ್ಲಿ ಮೆರುಗು ತುಂಬಿಲಿದ್ದಾರೆ.

Written by - Zee Kannada News Desk | Last Updated : Nov 30, 2023, 02:45 PM IST
  • ನಟಿ ನೀತು ಉದಯ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಕನ್ಯಾದಾನ'ದಲ್ಲಿ ನಟಿಸುತ್ತಿದ್ದಾರೆ.
  • ನಟಿ ನೀತು ಶೆಟ್ಟಿ ಕನ್ನಡ ತುಳು ಭಾಷೆಯ ಹಲವು ಸಿನಿಮಾಗಳಲ್ಲಿ ನೀತು ನಟಿಸಿದ್ದು, ಈಕೆ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷಗಳಾಗುತ್ತ ಬಂದಿದೆ.
  • 'ಕನ್ಯಾದಾನ' ಧಾರಾವಾಹಿ ಈಗಾಗಲೇ 600 ಸಂಚಿಕೆಗಳನ್ನು ದಾಟಿ ತನ್ನ ಕಥಾಹಂದರದ ಮೂಲಕ ವೀಕ್ಷಕರ ಗಮನ ಸೆಳೆದಿದೆ.
ʻಕನ್ಯಾದಾನʼ ಧಾರವಾಹಿಗೆ ನೀತು ಎಂಟ್ರೀ: 600 ಸಂಚಿಕೆಗಳ ಕಥಾಹಂದರ! title=

Neethu Shetty In Kanyadana Serial: ಸ್ಯಾಂಡಲ್‌ವುಡ್‌ ನಟಿ ನೀತು ಶೆಟ್ಟಿ ಕನ್ನಡ ತುಳು ಭಾಷೆಯ ಹಲವು ಸಿನಿಮಾಗಳಲ್ಲಿ ನೀತು ನಟಿಸಿದ್ದು, ಈಕೆ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷಗಳಾಗುತ್ತ ಬಂದಿದೆ. ನೀತು ಅಂತ ಹೆಸರು ಹೇಳಿದಾಗ ತಕ್ಷಣ  ನೆನಪಾಗುವುದು 15 ವರ್ಷಗಳ ಹಿಂದೆ ತೆರೆಕಂಡ 'ಗಾಳಿಪಟ' ಸಿನಿಮಾ. ಈಗಲೂ ಆ ಸಿನಿಮಾದ ಪಾತ್ರದಿಂದಲೇ ನೀತು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ ಪ್ರೇಕ್ಷಕರು. ನೀತು ಶೆಟ್ಟಿಗೆ ಕಿರುತೆರೆ ಹೊಸಬರೇನಲ್ಲ. ಹಿರಿತೆರೆಗೆ ಹೆಜ್ಜೆ ಹಾಕುವ ಮುನ್ನ ಕೆಲ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. 

ನಟಿ ನೀತು ಬಿಗ್‌ಬಾಸ್‌ ಕನ್ನಡ ಸೀಸನ್ 2 ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ನೀತು ಕಾಣಿಸಿಕೊಂಡಿದ್ದು, ಇದೀಗ ಉದಯ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಕನ್ಯಾದಾನ'ದಲ್ಲಿ ನಟಿಸುತ್ತಿದ್ದಾರೆ. ತನ್ನ ಐದು ಹೆಣ್ಣು ಮಕ್ಕಳ ಜೀವನ ಸುಂದರವಾಗಿ ಇರಬೇಕು ಎಂದು ಪರಿತಪಿಸೋ ತಂದೆಯ ಭಾವನಾತ್ಮಕ ಹೋರಾಟದ ಕಥೆಯನ್ನು 'ಕನ್ಯಾದಾನ' ಧಾರಾವಾಹಿ ಹೊಂದಿದ್ದು, ಇದೀಗ ಈ ಧಾರಾವಾಹಿಗೆ ನೀತು ಆಗಮನವಾಗಿದೆ.

ಇದನ್ನೂ ಓದಿ: Pooja Gandhi: ಹೇಗಿದೆ ನೋಡಿ ಪೂಜಾ ಗಾಂಧಿ ಮದುವೆ ಸಂಭ್ರಮ.. Exclusive Photos ಇಲ್ಲಿವೆ

'ಕನ್ಯಾದಾನ' ಧಾರಾವಾಹಿ ಈಗಾಗಲೇ 600 ಸಂಚಿಕೆಗಳನ್ನು ದಾಟಿ ತನ್ನ ಕಥಾಹಂದರದ ಮೂಲಕ ವೀಕ್ಷಕರ ಗಮನ ಸೆಳೆದಿದೆ. ಹೆಣ್ಣಿನ ಜೀವನದ ವಿವಿಧ ಮಜಲುಗಳನ್ನು, ಗಂಡನ ಮನೆಯಲ್ಲಿ ಎದುರಿಸಬೇಕಾದ ಸಮಸ್ಯೆಗಳನ್ನು ಈ ಧಾರಾವಾಹಿ ಮೂಲಕ ತುಂಬಾ ಅಚ್ಚುಕಟ್ಟಾಗಿ ಹೇಳಲಾಗುತ್ತಿದೆ. ಈ ಜನಪ್ರಿಯ ಧಾರಾವಾಹಿಯಲ್ಲಿ ವೀಕ್ಷಕರ ಮನರಂಜನೆಗೆ ಮೊದಲ ಆದ್ಯತೆ ನೀಡುವ ವಿಶೇಷ ಸಂಚಿಕೆಗಳ ಪ್ರಯೋಗದಲ್ಲಿ ಈ ಹಿಂದೆ ನಟಿ ಸುಧಾರಾಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು 'ಕನ್ಯಾದಾನ' ಧಾರಾವಾಹಿಗೆ ಮೆರುಗು ತುಂಬಿದ್‌ ಹಾಗೆ, ಇದೀಗ ನೀತು ಸರದಿ ಬಂದಿದೆ. ಸದ್ಯ ನಟಿ ನೀತು ಶೆಟ್ಟಿ  'ಕನ್ಯಾದಾನ' ಧಾರಾವಾಹಿಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅನ್ಯೋನ್ಯವಾಗೇ ಬೆಳೆದ ಅಕ್ಕ-ತಂಗಿಯರಾದ ಅರ್ಚನಾ ಹಾಗೂ ದೀಪು ನಡುವೆ ಪ್ರತಿಷ್ಠೆಯ ಯುದ್ಧ ನಡೆಯುತ್ತಿದ್ದು, ತಮ್ಮ ತಮ್ಮ ಪತಿಗಳ ಸ್ವಾಭಿಮಾನದ ವಿಚಾರವಾಗಿ ಇಬ್ಬರ ನಡುವೆ ಆರಂಭವಾದ ಮನಸ್ತಾಪ, ಈಗ ತಂದೆ ಅಶ್ವತ್ಥನ ದುಃಖಕ್ಕೆ ಕಾರಣವಾಗಿದೆ. ಮಕ್ಕಳಿಬ್ಬರ ನಡುವೆ ಸಂಧಾನ ಮಾಡಲು ಸಾಧ್ಯವಾಗದೇ ಅಶ್ವತ್ಥ ಮನೆ ಬಿಟ್ಟು ಹೋಗಿದ್ದು, ಅನ್ಯೋನ್ಯತೆಯನ್ನೇ ಮರೆತು ಹೋಗಿರುವ ಮಕ್ಕಳ ವರ್ತನೆಯಿಂದ ಅವನು ತೀವ್ರ ದುಃಖಿತನಾಗಿದ್ದಾನೆ. ಇದೀಗ ತನ್ನ ಭಾವನಾತ್ಮಕ ಸಲಹೆಗಳಿಂದ ಅರ್ಚನಾ ಮತ್ತು ದೀಪು ನಡುವಿನ ಮನಸ್ತಾಪವನ್ನ ನೀತು ಹೇಗೆ ಸರಿಪಡಿಸುತ್ತಾರೆ? ಹೆಣ್ಣು-ಗಂಡಿನ ಜೀವನದಲ್ಲಿ ಸಾಮರಸ್ಯದ ಮಹತ್ವವನ್ನು ಹೇಗೆ ಅರ್ಥೈಸುತ್ತಾರೆ ಎಂಬುದೇ ಈ ವಿಶೇಷ ಸಂಚಿಕೆಗಳ ವಿಷಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News