ನಟ ದರ್ಶನ್‌ಗೆ ಮಧ್ಯಂತರ ಬೇಲ್ ಆಯ್ತು.. ಚಾಲೆಂಜಿಗ್ ಸ್ಟಾರ್ ಮುಂದಿರುವ ದೊಡ್ಡ ಚಾಲೆಂಜ್ ಯಾವುದು?
Darshan Gets Interim Bail: ದರ್ಶನ್ ಅವರಿಗೆ ಜಾಮೀನು ಸಿಕ್ಕಾಯಿತು… ಇದೀಗ ಚಾಲೆಂಜಿಗ್ ಸ್ಟಾರ್ ಮುಂದಿರುವ ದೊಡ್ಡ ಚಾಲೆಂಜ್ ಯಾವುದು?
Darshan Gets Interim Bail: ಕೊಲೆ ಕೇಸ್ ಒಂದರಲ್ಲಿ ಬರೋಬ್ಬರಿ 142 ದಿನ ಜೈಲಿನಲ್ಲಿ ಇದ್ದು ಆರು ವಾರಗಳ ಕಾಲದ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದೆ ಸಾಕಷ್ಟು ಚಾಲೆಂಜ್ ಗಳು ಇವೆ. ಆರು ವಾರಗಳ ಕಡಿಮೆ ಅವಧಿಯಲ್ಲಿ ‘ಡಿ ಬಾಸ್’ ಮಾಡಬೇಕಾಗಿರುವ ಕೆಲಸ ಸಾಕಷ್ಟಿವೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ಬಹಳ ಸ್ಪಷ್ಟವಾಗಿ ‘ಬೆನ್ನು ನೋವಿನ ಚಿಕಿತ್ಸೆಗಾಗಿ ಜಾಮೀನು’ ಎಂದು ಹೇಳಿದ್ದಾರೆ. ಹಾಗಾಗಿ ಆರು ವಾರುಗಳ ಅವಧಿಯಲ್ಲಿ ದರ್ಶನ್ ತಮ್ಮ ಬೆನ್ನು ನೋವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ಮಧ್ಯಂತರ ಜಾಮೀನು ಆದೇಶ ಪ್ರಕಟವಾದ ಬಳಿಕ ನಿನ್ನೆ (ಅಕ್ಟೊಬರ್ 30) ಸಂಜೆ ಬಳ್ಳಾರಿ ಜೈಲಿನಿಂದ ಹೊರಟ ದರ್ಶನ್ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಇರುವ ಪತ್ನಿ ವಿಜಯಲಕ್ಷ್ಮೀ ಅವರ ಮನೆಗೆ ಬಂದಿದ್ದಾರೆ. ಇಂದು ಅಲ್ಲಿ ಪುತ್ರ ವಿನೀಶ್ ಹುಟ್ಟುಹಬ್ಬವನ್ನು ಆಚರಿಸಿ ಬಳಿಕ ಮಧ್ಯಾಹ್ನವೇ ಆಸ್ಪತ್ರೆಗೆ ದಾಖಲಾಗುತ್ತಾರೆ.
ಇದನ್ನೂ ಓದಿ- ದೀಪಾವಳಿಯಲ್ಲಿ ದರ್ಶನ್‌ಗೆ ಡಬಲ್ ಖುಷಿ... ಮಗನಿಗಾಗಿ ಹೊರಬಂದೇ ಬಿಟ್ಟ 'ಡಿ ಬಾಸ್'!
ನ್ಯಾಯಾಲಯ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲೆಂದೇ ಮಧ್ಯಂತರ ಜಾಮೀನು ನೀಡಿರುವುದರಿಂದ ಹಾಗೂ ಸಹಿಸಲು ಸಾಧ್ಯವಿಲ್ಲದಷ್ಟು ಬೆನ್ನು ನೋವು ಇರುವುದರಿಂದ ದರ್ಶನ್ ಇಂದೇ ಅನಿವಾರ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಕಿದೆ. ಬೆನ್ನು ನೋವು ಸುಧಾರಿಸಿದರಷ್ಟೇ ದರ್ಶನ್ ಮುಂದಿನದನ್ನು ಯೋಚಿಸಲು ಸಾಧ್ಯ.
ವಿಪರೀತ ಬೆನ್ನು ನೋವು ಇರುವುದರಿಂದ ದರ್ಶನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆಗಳು ಕೂಡ ಇವೆ. ಶಸ್ತ್ರಚಿಕಿತ್ಸೆ ಮಾಡಿದರೆ ಆಗ ದರ್ಶನ್ ಅವರು ಕನಿಷ್ಠ ತಿಂಗಳು ಮಟ್ಟಿಗಾದರೂ ರೆಸ್ಟ್ ತೆಗೆದುಕೊಳ್ಳಬೇಕಾಗುತ್ತದೆ. ಈ ನಡುವೆ ಹೆಚ್ಚಿನ ಚಿಕಿತ್ಸೆ ಅಗತ್ಯವೆನಿಸಿದರೆ ಅವರು ನ್ಯಾಯಾಲಯಕ್ಕೆ ಜಾಮೀನು ಅವಧಿ ವಿಸ್ತರಣೆಗೆ ಮನವಿ ಮಾಡಿಕೊಳ್ಳಬೇಕಾಗುತ್ತದೆ.
ಬೆನ್ನು ನೋವಿನ ಚಿಕಿತ್ಸೆಯನ್ನು ಹೊರತುಪಡಿಸಿಯೂ ದರ್ಶನ್ ಅವರು ತಮಗೆ ಸಿಕ್ಕಿರುವ ಆರು ವಾರಗಳ ಕಾಲದ ಮಧ್ಯಂತರ ಜಾಮೀನು ಅವಧಿಯ ವಿಸ್ತರಣೆಗೆ ಕಾನೂನು ಹೋರಾಟ ಮಾಡಬೇಕಾಗಿದೆ. ಜೊತೆಗೆ ಇಡೀ ಪ್ರಕರಣದಿಂದ ಹೊರಬರುವ ಕುರಿತಾಗಿಯೂ ಮುಂದಿನ ಕಾನೂನು ಹೋರಾಟದ ತಯಾರಿ ನಡೆಸಬೇಕಾಗಿದೆ.
ಇದನ್ನೂ ಓದಿ- ಡಿ ಬಾಸ್ ಜೈಲಿಂದ ಹೊರಬಂದ ಬೆನ್ನಲ್ಲೇ ‘ಕಾಲಾಯ ತಸ್ಮೈ ನಮಃ’ ಎಂದ ರಚಿತಾ ರಾಮ್: ವಿಡಿಯೋ ವೈರಲ್
ಬೆನ್ನು ನೋವಿನ ಬಾಧೆಯಿಂದ ಪಾರಾಗದೆ ದರ್ಶನ್ ಮತ್ತೇನನ್ನೂ ಮಾಡಲಾರದ ಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ, ಅಲ್ಲಿಂದಲೇ ಕಾನೂನು ಹೋರಾಟದ ತಯಾರಿ ಮಾಡಬೇಕಾಗಿದೆ. ಅಲ್ಲೇ ವಕೀಲರ ಜೊತೆ ಸಮಾಲೋಚನೆ ನಡೆಸಬೇಕಿದೆ. ಅಲ್ಲೇ ಆಪ್ತರನ್ನು ಭೇಟಿಮಾಡಬೇಕಿದೆ. ಎಲ್ಲವನ್ನೂ ಆಸ್ಪತ್ರೆಯಿಂದಲೇ ನಿಭಾಯಿಸಬೇಕಾಗಿದೆ.
ಅಭಿಮಾನಿಗಳ ಪಾಲಿನ ಡಿ ಬಾಸ್ ಕನ್ನಡದಲ್ಲಿ ಅತ್ಯಂತ ಬೇಡಿಕೆ ಇರುವ ನಾಯಕ ನಟ. ಕನ್ನಡ ಮಾರುಕಟ್ಟೆಯ ಮಟ್ಟಿಗೆ ಯಶ್, ಸುದೀಪ್ ಅವರಿಗಿಂತಲೂ ಫ್ಯಾನ್ ಫಾಲೋಯಿಂಗ್ ಇರುವ ನಾಯಕ ನಟ. ಹಾಗಾಗಿ ‘ಡೆವಿಲ್’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ಚಿತ್ರೀಕರಣ ಆಗಬೇಕಿದೆ. ಅದಕ್ಕಾಗಿಯೂ ಅಗತ್ಯ ತಯಾರಿ ನಡೆಸಬೇಕಾಗಿದೆ. ಎಲ್ಲದಕ್ಕೂ ಮೊದಲು ಕೊಲೆ ಪ್ರಕರಣದಿಂದ ಮುಕ್ತಿ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರು ಹಲವಾರು ಚಾಲೆಂಜ್ ಗಳು ಇವೆ. ಆದುದರಿಂದ ಮಧ್ಯಂತರ ಜಾಮೀನು ಸಿಕ್ಕಿರುವ ಈ ಆರು ವಾರಗಳು ದರ್ಶನ್ ಪಾಲಿಗೆ ಬಹಳ ಪ್ರಮುಖವಾದವಾಗಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.