Actor Darshan : ಸ್ಯಾಂಡಲ್‌ವುಡ್‌ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅವರ ಕೈಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ತಿಳಿದು ಬಂದಿದೆ. ಇನ್ನು ಡಿಬಾಸ್‌ ಆದಷ್ಟು ಬೇಗ ಗುಣಮುಖರಾಗಲಿ ಅಂತ ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ʼಡೆವಿಲ್ʼ ದಚ್ಚು ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರದ ಶೂಟಿಂಗ್ ವೇಳೆ ಡಿಬಾಸ್‌ ಅವರ ಕೈಗೆ ಪೆಟ್ಟಾಗಿತ್ತು. ಆದರೆ, ಅವರು, ಕೆಲವೊಂದಿಷ್ಟು ಸಿನಿಮಾ ಪ್ರಮೋಶನ್‌ ಮತ್ತು ಸಂಸದೆ ಸುಮಲತಾ ಅವರ ರಾಜಕೀಯ ಕಾರಣದಿಂದಾಗಿ ಕೈ ಆಪರೇಷನ್‌ ಅನ್ನು ಮುಂದೂಡಿದ್ದರು.


ಇದನ್ನೂ ಓದಿ:  ಚಂದನವನದಲ್ಲಿ 'ಅಶ್ವಿನಿ ನಕ್ಷತ್ರ' ಚೆಲುವೆಯ ಸೆಕೆಂಡ್‌ ಇನ್ನಿಂಗ್ಸ್‌ ಆರಂಭ!


ಇಂದು ದರ್ಶನ್‌ ಅವರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಮಂಡ್ಯದಲ್ಲಿ ನಡೆದ ಸುಮಲತಾ ಅಂಬರೀಶ್ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡುವಾಗ, ಅವರು ಆಸ್ಪತ್ರೆಗೆ ಅಡ್ಮಿಟ್‌ ಆಗುವುದಾಗಿ ತಿಳಿಸಿದ್ದರು. 


ಘಟನೆ ಹಿನ್ನೆಲೆ : ಡೆವಿಲ್ ಸಿನಿಮಾದ ಸಾಹಸ ದೃಶ್ಯ ಶೂಟಿಂಗ್‌ ಸಮಯದಲ್ಲಿ, ದರ್ಶನ್‌ ಅವರ ಕೈಗೆ ಪೆಟ್ಟಾಗಿತ್ತು. ಕೈಗೆ ಬೆಲ್ಟ್ ಕಟ್ಟಿಕೊಂಡೇ ದಾಸ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ನಿನ್ನೆ ಮ್ಯಾಟ್ನಿ, ಜಾಜಿ ಸಿನಿಮಾಗಳ ಕಾರ್ಯಕ್ರಮದ ವೇಳೆ ದಚ್ಚು ತಮ್ಮ ಕೈಗೆ ಬೆಲ್ಟ್ ಕಟ್ಟಿಕೊಂಡಿದ್ದ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.