Mayuri Kyatari: ಚಂದನವನದಲ್ಲಿ 'ಅಶ್ವಿನಿ ನಕ್ಷತ್ರ' ಚೆಲುವೆಯ ಸೆಕೆಂಡ್‌ ಇನ್ನಿಂಗ್ಸ್‌ ಆರಂಭ!

Mayuri Kyatari Comeback: ಕನ್ನಡ ಕಿರುತೆರೆಯ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ  ಪ್ರೇಕ್ಷಕರಿಗೆ ಪರಿಚಯವಾದ ನಟಿ ಮಯೂರಿ ಕ್ಯಾತರಿ, ತದನಂತರ ಸ್ಯಾಂಡಲ್‌ವುಡ್‌ನ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದರು. ಮದುವೆಯ ಬಳಿಕ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದ ನಟಿ, ಇದೀಗ ಸೆಕೆಂಡ್‌ ಇನ್ನಿಂಗ್ಸ್‌ ಪ್ರಾರಂಭಿಸಲು ಸಜ್ಜಾಗಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಸ್ಯಾಂಡಲ್‌ವುಡ್‌ ನಟಿ ಮಯೂರಿ ಕ್ಯಾತರಿ ತಮ್ಮ ಮದುವೆ, ಮಗುವಾದ ನಂತರ ಬಣ್ಣದ ಬದುಕಿನಿಂದ ದೂರ ಉಳಿದವರು, ಈ ಹಿಂದೆ ಬಿಗ್‌ ಬಾಸ್‌ ಹಾಗೂ ಕೆಲವು ಧಾರವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

2 /6

ನಟಿ ಮಯೂರಿ ಕ್ಯಾತರಿ ಇನ್ಮುಂದೆ ಪೂರ್ಣ ಪ್ರಮಾಣದಲ್ಲಿ ಸಿನಿಮಾದಲ್ಲಿ ಗುರುತಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದು, ಶೀಘ್ರದಲ್ಲೇ ಚಂದನವನದಲ್ಲಿ ಕಮಾಲ್‌ ಮಾಡಲಿದ್ದಾರೆ. ಈ ನಟಿ ಇತ್ತೀಚೆಗೆ ನಟನೆಗೆ ಕಂಬ್ಯಾಕ್‌ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.  

3 /6

ಮಯೂರಿ ಕ್ಯಾತರಿ ನಟನೆಗೆ ಕಮ್‌ಬ್ಯಾಕ್‌ ಮಾತನಾಡಿದ್ದು," ಮದುವೆ, ಮಗು ಅಂತಾದ ಮೇಲೆ ನಟಿಯರು ಕಮ್‌ಬ್ಯಾಕ್‌ ಮಾಡುವುದು ಸುಲಭವಲ್ಲ ಎಂಬ ಮಾತಿದೆ. ಆದರೆ ಅದು ಸುಳ್ಳು" ಎಂದಿದ್ದಾರೆ.  

4 /6

ಕನ್ನಡದ ನಟಿ ಮಯೂರಿ ಕ್ಯಾತರಿ ಮಗುವಾದ ಕೆಲವು ವರ್ಷಗಳ ನಂತರ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್‌ ಮಾಡುತ್ತಿರುವುದರ ಬಗ್ಗೆ ಖುಷಿ ಇದೆ. ಯಾವುದೇ ಪಾತ್ರವಾದರೂ ಅದಕ್ಕೆ ನ್ಯಾಯ ಸಲ್ಲಿಸಬಲ್ಲೆಯೆಂಬ ಆತ್ಮವಿಶ್ವಾಸ ಹೆಚ್ಚಿದೆ ಎಂದು ಹೇಳಿದ್ದಾರೆ.  

5 /6

ಚಂದನವನದ ಬೆಡಗಿ ಮಯೂರಿ ಕ್ಯಾತರಿ ಪಾತ್ರಗಳ ಬಗ್ಗೆ ಮಾತನಾಡುತ್ತಾ ನಟಿಸಲು ಸಾಕಷ್ಟು ಪಾತ್ರಗಳು ಇರುತ್ತವೆ. ಪಾತ್ರಕ್ಕೆ ಜೀವ ತುಂಬಲು ವಯಸ್ಸು, ಗಾತ್ರ, ರೂಪ, ಬಣ್ಣ ಮುಖ್ಯವಾಗುವುದಿಲ್ಲ. ಯಾವುದೇ ಸಿನಿಮಾವಾದರೂ ಅಲ್ಲಿ ಬೇರೆ ಬೇರೆ ಬಗೆಯ ಪಾತ್ರಗಳಿರುತ್ತವೆ. ಅದಕ್ಕೆ ತಕ್ಕಂತೆ ಕಲಾವಿದರ ಆಯ್ಕೆ ನಡೆಯುತ್ತದೆ. ಹೀಗಾಗಿ ಅವಕಾಶಗಳು ಕಲಾವಿದರಿಗೆ ಸದಾ ಇರುತ್ತವೆ. ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗಿದೆಂದು ತಿಳಿಸಿದ್ದಾರೆ.  

6 /6

ಕಿರುತೆರೆ ಚೆಲುವೆ ಮಯೂರಿ ಕ್ಯಾತರಿ 'ಅಶ್ವಿನಿ ನಕ್ಷತ್ರ' ಸೀರಿಯಲ್‌ ಮೂಲಕ ಅಭಿನಯ ಪ್ರಾರಂಭಿಸಿ, ತದನಂತರ 'ಕೃಷ್ಣ ಲೀಲಾ', 'ಇಷ್ಟಕಾಮ್ಯ', 'ನಟರಾಜ ಸರ್ವಿಸ್‌', 'ಪೊಗರು', 'ವೀಲ್‌ಚೇರ್ ರೋಮಿಯೋ', 'ರುಸ್ತುಂ', 'ನನ್ನ ಪ್ರಕಾರ', 'ಮೌನ', 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.