Actor Darshan health report : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಲಾಕ್ ಆಗಿದ್ದ ನಟ ದರ್ಶನ್ ಈಗ ಆಸ್ಪತ್ರೆ ಪಾಲಾಗಿದ್ದಾರೆ. ಬೆನ್ನು ನೋವು ಅಂತಾ ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಸನಿಗೆ ಆಗಿರೋ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ವೈದ್ಯರು ಸಾಲುಸಾಲು ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ನಿನ್ನೆಯಿಂದಲೂ ಅನೇಕ ಸ್ಕ್ಯಾನಿಂಗ್, ಟೆಸ್ಟ್ ನಡೆಸುತ್ತಿದ್ದು ಅದರ ರಿಪೋರ್ಟ್‌ಗಳು ಕೂಡ ಒಂದೊಂದಾಗಿ ವೈದ್ಯರ ಕೈ ಸೇರ್ತಿವೆ..
 
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿರೋ ದರ್ಶನ್ ಗೆ ನಿನ್ನೆ ಮತ್ತು ಇಂದು ಬ್ಲಡ್ ಟೆಸ್ಟ್ ಸೇರಿ ಕೆಲ ಸ್ಕ್ಯಾನಿಂಗ್ ಮಾಡಲಾಗಿದ್ದು ಅದರ ರಿಪೋರ್ಟ್ ಕೂಡ ಬಂದಿದೆ.‌ ಆದರೆ ಇನ್ನೂ ಅನೇಕ ಪರೀಕ್ಷೆಗಳು ನಡೆಯುತ್ತಿದ್ದು, ಎಲ್ಲದರ ವರದಿ ಭಾನುವಾರ ಸಂಜೆ ಒಳಗೆ ಡಾ.ನವೀನ್ ನೇತೃತ್ವದ ತಜ್ಞ ವೈದ್ಯರ ತಂಡದ ಕೈ ಸೇರಲಿದೆ. ಒಮ್ಮೆ ದರ್ಶನ್‌ಗೆ ಸಂಬಂಧಪಟ್ಟ ವೈದ್ಯಕೀಯ ವರದಿಗಳು ವೈದ್ಯರ ಕೈ ಸೇರಿದ್ರೆ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧಾರವಾಗಲಿದೆ.ಹಾಗೆ ಯಾವಾಗ ಚಿಕಿತ್ಸೆ ಪ್ರಾರಂಭಿಸಬೇಕು. ಯಾವ ರೀತಿ ಚಿಕಿತ್ಸೆ, ವಿಶ್ರಾಂತಿ ಎಷ್ಟು ದಿನ ಬೇಕು ಎಂಬ ಬಗ್ಗೆ ವೈದ್ಯರು ತಯಾರಿಸೋ ವರದಿಯನ್ನ ಕೋರ್ಟ್ ಗೆ ಸಲ್ಲಿಸಲಾಗುತ್ತೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʼಬಘೀರʼನ ಭುಜ ತಟ್ಟಿದ ರೆಬಲ್‌ ಸ್ಟಾರ್‌..! ಶ್ರೀಮುರಳಿ ಚಿತ್ರಕ್ಕೆ ಪ್ರಭಾಸ್‌ ಫಿದಾ


ಇದಿಷ್ಟು ಒಂದು ಕಡೆಯಾದ್ರೆ ಮತ್ತೊಂದು ಕಡೆ ದರ್ಶನ್ ನೋಡಲು ಏಳು ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ಯಂತೆ. ಆಪ್ತರಾಗಿದ್ದ ಹುಡುಗರೇ ಆಸ್ಪತ್ರೆಯಲ್ಲಿ ದರ್ಶನ್ ಆಗುಹೋಗುಗಳನ್ನ ನೋಡಿಕೊಳ್ತಿದ್ದಾರೆ. ಒಟ್ನಲ್ಲಿ ನಾಳೆ ಸಂಜೆಯ ಒಳಗೆ ಬರುವ ದರ್ಶನ್ ವೈದ್ಯಕೀಯ ವರದಿ ಕುತೂಹಲ ಹೆಚ್ಚಿಸಿದ್ದು, ದರ್ಶನ್‌ಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತೆ, ಎಷ್ಟು ದಿನ ಆಸ್ಪತ್ರೆಯಲ್ಲಿ ಇರಲಿದ್ದಾರೆ ನಿರ್ಧಾರವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ