ಬೆಂಗಳೂರು: ‘ಕೇಡಿ’ ಚಿತ್ರದ ಶೂಟಿಂಗ್ ಶುರು ಮಾಡಲು ತಯಾರಿ ನಡಿತಿದ್ರು, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾತ್ರ ಇನ್ನೂ ಸಹ ‘ಮಾರ್ಟಿನ್’ ಅಡ್ಡದಲ್ಲೇ ಇದ್ದಾರೆ‌‌‌. ಇದಲ್ಲದೆ ಸದ್ದಿಲ್ಲದೆ ಮತ್ತೆ ಕಣಿವೆ ರಾಜ್ಯ ಕಾಶ್ಮೀರಕ್ಕೆ ಹಾರಿದ್ದಾರೆ. ಅಷ್ಟಕ್ಕೂ ‘ಮಾರ್ಟಿನ್’ ಧ್ರುವ ಸಡನ್ ಆಗಿ ಕಾಶ್ಮೀರದ ಕಣಿವೆ ಕಡೆ ಮುಖ ಮಾಡಿದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

‘ಪೊಗರು’ ಚಿತ್ರದ ನಂತರ ಧ್ರುವ ಸರ್ಜಾ ‘ಮಾರ್ಟಿನ್’ ಚಿತ್ರದಲ್ಲಿ ಬ್ಯಸಿಯಾಗಿದ್ದಾರೆ. ನಿರ್ದೇಶಕ ಎ.ಪಿಅರ್ಜುನ್ ಜೊತೆ ‘ಅದ್ದೂರಿ’ ನಂತರ ‘ಮಾರ್ಟಿನ್’ಗಾಗಿ ಮತ್ತೆ ಒಂದಾಗಿರುವುದು ಧ್ರುವನ ಅಭಿಮಾನಿಗಳಲ್ಲಿ ಕಾತರ ಮತ್ತು ಸಿನಿಮಾ ನೋಡುವ ಆತುರ ಎರಡು ಪಟ್ಟು ಜಾಸ್ತಿಯಾಗಿದೆ. ಅದರೆ ಅದ್ಯಾಕೋ ಗೊತ್ತಿಲ್ಲ ಈ ಸಿನಿಮಾದ ಶೂಟಿಂಗ್ ಮಾತ್ರ ಇನ್ನು ಮುಗೀತಾನೇ ಇಲ್ಲ.


ಇದನ್ನೂ ಓದಿ: ಸಡನ್ ಆಗಿ ಕಿಚ್ಚನ ಮನೆಗೆ ಭೇಟಿ ಕೊಟ್ಟಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ... ಯಾಕೆ ಗೊತ್ತಾ..?


130ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಿರುವ ಚಿತ್ರತಂಡ ಇನ್ನು ಕುಂಬಳಕಾಯಿ ಹೊಡೆದಿಲ್ಲ. ಬದಲಿಗೆ ಕೊರೆಯುವ ಚಳಿಯಲ್ಲೂ ಹಿಮನಗರಿ, ಇಂಡಿಯಾದ ಸ್ವಿಜರ್ಲ್ಯಾಂಡ್ ಕಾಶ್ಮೀರದಲ್ಲಿ ‘ಮಾರ್ಟಿನ್’ ಧ್ರುವನ ಜೊತೆ ಬೀಡು ಬಿಟ್ಟಿದ್ದಾರೆ. ಹೌದು..‘ಮಾರ್ಟಿನ್’ ಚಿತ್ರತಂಡ ಈಗ ಕೊನೆಯ ಹಂತದ ಶೂಟಿಂಗ್‌ಗಾಗಿ ಇಂಡಿಯಾದ ಸ್ವಿಜರ್ಲ್ಯಾಂಡ್ ಎನಿಸಿಕೊಂಡಿರೋ ಕಾಶ್ಮೀರಕ್ಕೆ ಹಾರಿದೆ. ಅರೆರೇ, ಇದೇನು ಕಳೆದ ಮಾರ್ಚ್ ನಲ್ಲೇ ಕಾಶ್ಮೀರದಲ್ಲಿ ಶೂಟಿಂಗ್ ಮಾಡಿದ್ರಲ್ಲ ಮತ್ತೆ ಯಾಕೆ ‘ಮಾರ್ಟಿನ್’ ಬಳಗ ಕಾಶ್ಮೀರದ ಕಡೆ ಹೊರಟ್ರಪ್ಪ ಅನ್ನೋ ಪ್ರಶ್ನೆ ಮೂಡೊದಂತೂ ಗ್ಯಾರಂಟಿ.


ಅದರೂ ‘ಮಾರ್ಟಿನ್’ ಬಳಗ ಸೋಮವಾರ(ಡಿ.12)ದಿಂದ ಕಾಶ್ಮೀರದಲ್ಲಿ ಶೂಟಿಂಗ್ ಮಾಡ್ತಿದ್ದಾರೆ ಅನ್ನೊದನ್ನು ನೀವು ನಂಬಲೇಬೇಕು. ಯಾಕಂದ್ರೆ  ಧ್ರುವ ‘ಮಾರ್ಟಿನ್’ ಅವತಾರದಲ್ಲಿ ಪಾಕಿಸ್ತಾನದಿಂದ ಎಸ್ಕೇಪ್ ಅಗಿ ಬರೋ ಸನ್ನಿವೇಶವನ್ನು ಚಿತ್ರೀಕರಿಸಲು ಚಿತ್ರತಂಡ ಮತ್ತೆ ಕಾಶ್ಮೀರಕ್ಕೆ ಹಾರಿದೆ. ಅಲ್ಲದೆ ಇ‌ನ್ನು ಮೂರ್ನಾಲ್ಕು ದಿನ ಕಾಶ್ಮೀರದಲೇ ಶೂಟಿಂಗ್ ನಡೆಸಿ ನಂತರ ಬೆಂಗಳೂರಿನ ಕಡೆ ಪ್ರಯಾಣ ಮಾಡಲಿದೆ.


ಇದನ್ನೂ ಓದಿ: ಆಸ್ಕರ್‌ನಷ್ಟೇ ಪ್ರತಿಷ್ಠಿತ ʼಗೋಲ್ಡನ್‌ ಗ್ಲೋಬ್‌ʼ ಪ್ರಶಸ್ತಿಗೆ RRR ನಾಮಿನೇಟ್‌..!


ಇನ್ನು ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಡ್ಯುಯೇಲ್ ರೋಲ್‍ನಲ್ಲಿ ಕಾಣಿಸಿದ್ದಾರೆ ಅನ್ನೋ ಮಾತಿದೆ. ಒಂದು ಗ್ಯಾಂಗ್ ಸ್ಟರ್ ‘ಮಾರ್ಟಿನ್’ ಅವತಾರವಾದ್ರೆ, ಮತ್ತೊಂದು ಸೋಲ್ಜರ್ ಗೆಟಪ್‍ನಲ್ಲಿ ಧ್ರುವ ಕಾಣಿಸಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಸಿಕ್ಕಿದೆ. ಒಂದು ವೇಳೆ ಧ್ರುವ ಡಬಲ್ ರೋಲ್ ನಲ್ಲಿ ಕಾಣಿಸಿದರೆ ಅವರ ಅಭಿಮಾನಿಗಳಿಗೆ ಭರ್ಜರಿ ಬಾಡೂಟ ಫಿಕ್ಸ್. ಇನ್ನು ಕಾಶ್ಮೀರದಲ್ಲಿ ಬಾಕಿ ಇರೋ ಶೂಟಿಂಗ್ ಮುಗಿದ್ರೆ ‘ಮಾರ್ಟಿನ್’ ಚಿತ್ರದ ಶೂಟಿಂಗ್ ಬಹುತೇಕ‌ ಕಂಪ್ಲೀಟ್ ಆಗಲಿದ್ದು, ಉಳಿದಿರೋ ಇನ್ನೆರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಿ ಕುಂಬಳಕಾಯಿ ಒಡೆಯಲು ಚಿತ್ರತಂಡ ಪ್ಲಾನ್ ಮಾಡಿದೆ. ಮುಂದಿನ ವರ್ಷ ಮಾರ್ಚ್ ಇಲ್ಲ ಏಪ್ರಿಲ್ ನಲ್ಲಿ ‘ಮಾರ್ಟಿನ್’ ಚಿತ್ರವನ್ನು ರಿಲೀಸ್ ‌ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.