ಟ್ರೋಲ್‌ ವಿರುದ್ಧ ಪವಿತ್ರಾ, ನರೇಶ್‌ ವಾರ್‌ : ಮಾನನಷ್ಟ ಮೊಕದ್ದಮೆ ದಾಖಲಿಸಿದ ಸ್ಟಾರ್‌ ಜೋಡಿ..!

ಪ್ರಸ್ತುತ ಸೋಷಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಟ್ರೋಲ್‌ ಆಗುತ್ತಿದೆ. ಸ್ಟಾರ್‌ಗಳ ವೈಯಕ್ತಿಕ ಜೀವನಗಳ ಮೇಲೆ ನೆಟಿಜನ್ಸ್‌ ಹೆಚ್ಚಾಗಿ ಫೋಕಸ್ ಮಾಡುತ್ತಿದ್ದಾರೆ. ಇದೀಗ ಟಾಲಿವುಡ್‌ ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌, ಮೆಮ್ಸ್‌ಗಳು ಹರಿದಾಡುತ್ತಿವೆ.

Written by - Krishna N K | Last Updated : Dec 13, 2022, 12:51 PM IST
  • ಸೋಷಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಟ್ರೋಲ್‌ ಆಗುತ್ತಿದೆ
  • ನಟ ನರೇಶ್, ಪವಿತ್ರಾ ಲೋಕೇಶ್ ಅವರ ಕುರಿತು ಟ್ರೋಲ್‌, ಮೆಮ್ಸ್‌ಗಳು ಹರಿದಾಡುತ್ತಿವೆ
  • ಇದೀಗ ನರೇಶ್‌ ಅವರು, ಹನ್ನೆರಡು ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಟ್ರೋಲ್‌ ವಿರುದ್ಧ ಪವಿತ್ರಾ, ನರೇಶ್‌ ವಾರ್‌ : ಮಾನನಷ್ಟ ಮೊಕದ್ದಮೆ ದಾಖಲಿಸಿದ ಸ್ಟಾರ್‌ ಜೋಡಿ..! title=

Pavitra Lokesh Defamation Case : ಪ್ರಸ್ತುತ ಸೋಷಿಯಲ್‌ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚಾಗಿ ಟ್ರೋಲ್‌ ಆಗುತ್ತಿದೆ. ಸ್ಟಾರ್‌ಗಳ ವೈಯಕ್ತಿಕ ಜೀವನಗಳ ಮೇಲೆ ನೆಟಿಜನ್ಸ್‌ ಹೆಚ್ಚಾಗಿ ಫೋಕಸ್ ಮಾಡುತ್ತಿದ್ದಾರೆ. ಇದೀಗ ಟಾಲಿವುಡ್‌ ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌, ಮೆಮ್ಸ್‌ಗಳು ಹರಿದಾಡುತ್ತಿವೆ.

ನರೇಶ್, ಪವಿತ್ರ  ಮದುವೆ ಮ್ಯಾಟರ್‌ ಇಷ್ಟು ವೈರಲ್ ಆಗಲು ಕಾರಣ ರಮ್ಯಾ ರಘುಪತಿ. ಹೌದು ರಮ್ಯಾ ಅವರು ತಾವು ನರೇಶ್‌ ಹೆಂಡತಿ, ನಾವು ಇನ್ನೂ ವಿಚ್ಛೇದನ ಪಡೆದಿಲ್ಲ. ಆದ್ರೂ ಅವರು ಪವಿತ್ರ ಅವರ ಜೊತೆ ಹೇಗೆ ಇರುತ್ತಾರೆ. ಮದುವೆಗೆ ಮಾಡಿಕೊಳ್ಳಲು ಹೇಗೆ ಸಿದ್ಧರಾಗಿದ್ದಾರೆ? ಎಂದು ನಾನಾ ವಿಧವಾಗಿ ರಮ್ಯಾ ರಘುಪತಿ ಮಾಧ್ಯಮಗಳ ಮೂಲಕ ಹಂಗಾಮ ಮಾಡಿದ್ದರು. ಅಲ್ಲದೆ, ನರೇಶ್, ಪವಿತ್ರ ಇದ್ದ ಹೋಟೆಲ್‌ಗೆ ಹೋಗಿ ರಂಪಾಟ ಮಾಡಿದ್ದ ವಿಡಿಯೋ ವೈರಲ್‌ ಆಗಿತ್ತು.

ಇದನ್ನೂ ಓದಿ: ʼಲಿಪ್‌ಸ್ಟಿಕ್ ಮರ್ಡರ್ʼ ಇನ್ವೆಸ್ಟಿಗೇಷನ್ ಥ್ರಿಲ್ಲರ್‌ ಚಿತ್ರ ಈವಾರ ತೆರೆಗೆ

ಈ ಘಟನೆಯ ನಂತರ ನರೇಶ್‌ ಹಾಗೂ ಪವಿತ್ರ ಕುರಿತು ಹೆಚ್ಚಾಗಿ ಟ್ರೋಲ್‌ ಹರಿದಾಡಲು ಪ್ರಾರಂಭವಾದವು. ಇದರಿಂದ ರೋಸಿ ಹೋದ ಪವಿತ್ರಾ ಅವರು ರಮ್ಯಾ ರಘುಪತಿ ಸೇರಿದಂತೆ ಕೆಲವು ವೆಬ್‌ಸೈಟ್‌ ಮತ್ತು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು. ಇದೀಗ ನರೇಶ್ ಅವರು ಸಹ ಹೈದರಾಬಾದ್‌ ನಾಂಪಲ್ಲಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ. ಅಲ್ಲದೆ, ತಮ್ಮ ಗೌರವಕ್ಕೆ ಧಕ್ಕೆಯಾಗಿದೆ ಎಂದು ಹನ್ನೆರಡು ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಕೆಲವು ಯೂಟ್ಯೂಬ್ ಚಾನೆಲ್‌ಗಳಿಗೂ ನೋಟಿಸ್‌ ಕಳುಹಿಸಿದ್ದಾರಂತೆ.

ಒಟ್ಟಿನಲ್ಲಿ ನರೇಶ್ ಮತ್ತು ಪವಿತ್ರಾ ಟ್ರೋಲಿಂಗ್ ಬಗ್ಗೆ ಸೀರಿಯಸ್ ಆಗಿದ್ದಾರೆ. ಇದೀಗ ನ್ಯಾಯಾಲಯ ಮೆಟ್ಟಿಲೇರಿದ್ದು, ಇನ್ನಾದರೂ ಟ್ರೋಲಿಂಗ್ ಕಡಿಮೆಯಾಗುತ್ತಾ ಅನ್ನೋದನ್ನು ಕಾಯ್ದು ನೋಡಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News