ಜಾಹೀರಾತಿನಲ್ಲಿ ಕಾಣಿಸಿಕೊಂಡ ಡಿವೈನ್ ಸ್ಟಾರ್: ಪಂಚೆಯುಟ್ಟು ತುಳುನಾಡ ಸಂಸ್ಕೃತಿ ಬಿಂಬಿಸಿದ ರಿಷಬ್!
Divine Star Rishab Shetty: ಸ್ಯಾಂಡಲ್ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ನಂತರ ಇದೀಗ ಜಾಹಿರಾತಿನ ಜಗತ್ತಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ನಟ ಸೋಷಿಯಲ್ ಮಿಡಿಯಾದಲ್ಲಿ ತಾವು ಪಂಚೆಯುಟ್ಟು ತುಳುನಾಡ ಸಂಸ್ಕೃತಿ ಬಿಂಬಿಸುವ ಜಾಹಿರಾತು ಮಾಡಿದನ್ನು ಹಂಚಿಕೊಂಡಿದ್ದಾರೆ.
Rishab Shetty In Advertisement: ಚಂದನವನದಲ್ಲಿ ಡಿವೈನ್ ಸ್ಟಾರ್ ಎಂದೇ ಪ್ರಖ್ಯಾತಿ ಪಡೆದಿರುವ ನಟ ರಿಷಬ್ ಶೆಟ್ಟಿ, ಅಭಿನಯ ಹಾಗೂ ನಿರ್ದೇಶನದ ಬಳಿಕ, ಇದೀಗ ಜಾಹೀರಾತಿಗೂ ಕಾಲಿಟ್ಟಿದ್ದಾರೆ. ರಿಷಬ್ ಶೆಟ್ಟಿ ಜಾಹಿರಾತಿನಲ್ಲಿ ತುಳುನಾಡ ಸಂಸ್ಕೃತಿ ಬಿಂಬಿಸೋ ಪಂಚೆಯನ್ನು ಉಟ್ಟುಕೊಂಡು ಎಲ್ಲೆಡೆ ಕಾಣಿಸಿಕೊಂಡು, ಕಲೆ-ಸಂಸ್ಕೃತಿ ಸೇರಿದಂತೆ ಭಾಷೆ ಹೀಗೆ ಹತ್ತು ಹಲವು ವಿಚಾರಗಳನ್ನ ನಿರೂಪಿಸುವುದರ ಜೊತೆಗೆ, ಹಲವು ವಿಶೇಷತೆಗಳನ್ನೂ ಕೂಡ ಈ ಜಾಹೀರಾತಿನಲ್ಲಿ ಹೇಳಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಎಲ್ಲೆಡೆ ತಮ್ಮ ಕಾಂತಾರದ ಮೂಲಕ ತುಳುನಾಡಿನ ಸಂಸ್ಕೃತಿ ಬಿಂಬಿಸಿದ್ದು, ಅಲ್ಲಿಯ ಪ್ರದೇಶದಲ್ಲಿರೋ ಪಂಚೆ ಧರಿಸೋ ಪದ್ಧತಿಯನ್ನು ಸದಾ ಫಾಲಿಸಿಕೊಂಡು ಬಂದಿದ್ದಾರೆ. ಈ ಮೂಲಕ ತಮ್ಮ ಸಂಸ್ಕೃತಿಯನ್ನ ಎಲ್ಲೆಡೆ ಬಿಂಬಿಸುತ್ತಲೇ ಇದ್ದು, ಇದೀಗ ಈ ಒಂದು ಜಾಹೀರಾತಿನಲ್ಲಿ ಕಲೆ ಮತ್ತು ಸಂಸ್ಕೃತಿಯ ನಿರೂಪಣೆ ಮಾಡಿದ್ದಾರೆ.
ಇದನ್ನೂ ಓದಿ: Padma Awards 2024: ಒಂದಕ್ಕಿಂತ ಹೆಚ್ಚು 'ಪದ್ಮ' ಪ್ರಶಸ್ತಿಗಳನ್ನು ಪಡೆದ ಸೆಲೆಬ್ರಿಟಿಗಳು ಇವರೇ!
ಪ್ರತಿ ನೂರ ಕಿಲೋಮೀಟರ್‌ಗೆ ಭಾಷೆ ಬದಲಾಗುತ್ತದೆ, ಹಾಗೆ ಸಾಗಿದಂತೆ ಸಂಸ್ಕೃತಿ ಕೂಡ ಬದಲಾಗುತ್ತದೆ ಎಂದು ಹೇಳುತ್ತಾರೆ. ಹೀಗೆ ನಮ್ಮ ದೇಶದಲ್ಲಿರೋ ವಿವಿಧ ಭಾಷೆ ಮತ್ತು ಕಲ್ಚರ್ ಕುರಿತು ಡಿವೈನ್ ಸ್ಟಾರ್ ಹೇಳಿಕೊಂಡಿದ್ದಾರೆ. ಈ ಒಂದು ಜಾಹೀರಾತಿನಲ್ಲಿ ಮೊದಲು ರಾಕಿಂಗ್ ಸ್ಟಾರ್ ಯಶ್ ಮಾಡಿದ್ದು, ಬಳಿಕ ದರ್ಶನ್, ಕಿಚ್ಚ ಸುದೀಪ್, ಶ್ರೀಮುರಳಿ, ಪುನೀತ್ ರಾಜಕುಮಾರ್ ಹೀಗೆ ಎಲ್ಲರೂ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನ ಈ ಎಲ್ಲಾ ನಟರಾದಮೇಲೆ, ಇದೀಗ ರಿಷಬ್ ಶೆಟ್ಟಿ ಈ ಒಂದು ಜಾಹೀರಾತು ಮಾಡಿ, ತಮ್ಮ ಈ ಜಾಹೀರಾತಿನ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಸದ್ಯ ಈ ನಟ ಕಾಂತಾರ ಚಾಪ್ಟರ್-1 ಕೆಲಸದಲ್ಲಿಯೇ ಬ್ಯುಸಿ ಆಗಿದ್ದು, ಮೊನ್ನೆ ಅಯೋಧ್ಯೆಗೂ ಸಹ ಭೇಟಿ ನೀಡಿ, ಬಾಲ ರಾಮನ ಪ್ರಾಣ ಪ್ರತಿಷ್ಠಾಪಣೆಯನ್ನ ಕಣ್ತುಂಬಿಕೊಂಡು ಬಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ