ನವದೆಹಲಿ: ನೀವು ದೃಶ್ಯಂ ಸಿನಿಮಾ ನೋಡಿರಬೇಕು. ಇದರಲ್ಲಿ ಬಾಲಕನ ಮೃತ ದೇಹವನ್ನು ನೆಲದಡಿ ಹೂಳಲಾಗಿರುತ್ತದೆ. ಇದೇ ರೀತಿಯ ಅಚ್ಚರಿಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಸುಮಾರು 4 ತಿಂಗಳಿನಿಂದ ನಾಪತ್ತೆಯಾಗಿದ್ದ ನಟನ ಶವ ಪತ್ತೆಯಾಗಿದೆ. ಆತನನ್ನು ಮರದ ಪೆಟ್ಟಿಗೆಯಲ್ಲಿ ನೆಲದಿಂದ 6 ಅಡಿ ಕೆಳಗೆ ಹೂಳಲಾಗಿತ್ತು. ಶವ ಹೂತ ಜಾಗದಲ್ಲಿ ಕಾಂಕ್ರೀಟ್‍ ಮಾಡಿ ಮುಚ್ಚಲಾಗಿತ್ತು. ಪೊಲೀಸರು ನೆಲವನ್ನು ಒಡೆದ ನಂತರ ನಟನ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ವೇಳೆ ನಟನ ಕುತ್ತಿಗೆಯಲ್ಲಿ ಹಗ್ಗದ ಗುರುತುಗಳಿದ್ದು, ಆತನ ಎರಡೂ ಕೈಗಳನ್ನು ಕಟ್ಟಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸೆನ್ಸೇಷನಲ್ ಕೇಸ್ ಬ್ರೆಜಿಲ್ ನದ್ದು. ಈ ನಟನ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಪಕ್ಕದ ಮನೆಯಲ್ಲಿ ಶವ ಪತ್ತೆ!


ವಾಸ್ತವವಾಗಿ 4 ತಿಂಗಳ ಹಿಂದೆ ಅಂದರೆ ಜನವರಿಯಲ್ಲಿ 44 ವರ್ಷದ ನಟ ಜೆಫರ್ಸನ್ ಮಚಾಡೊ ಮನೆಯಿಂದ ನಾಪತ್ತೆಯಾಗಿದ್ದರು. ಸೋಮವಾರ ಪಕ್ಕದ ಮನೆಯ ಆವರಣದಲ್ಲಿ ಅವರ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ನಟನ ಸಾವಿನ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪತ್ರಿಕೋದ್ಯಮ ಮತ್ತು ಸಿನಿಮಾದಲ್ಲಿ ಪದವಿ ಪಡೆದ ಮಚಾಡೊ ಹಲವಾರು ಟಿವಿ ಶೋಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ರಂಗಸಜ್ಜಿಕೆ, ನಿರ್ಮಾಣ, ಸ್ಟೇಜ್ ಶೋಗಳಲ್ಲಿಯೂ ಸಾಕಷ್ಟು ಖ್ಯಾತಿ ಗಳಿಸಿದ್ದರು.


ಇದನ್ನೂ ಓದಿ: Bollywood: ಸಲ್ಮಾನ್ ಖಾನ್ ಭವಿಷ್ಯವನ್ನೇ ಬದಲಾಯಿಸಿದ ಅಮೀರ್ & ಹೃತಿಕ್ ತಿರಸ್ಕರಿಸಿದ ಚಿತ್ರ!


ಪೊಲೀಸರು ವಿಡಿಯೋ ಕೂಡ ಬಿಡುಗಡೆ ಮಾಡಿದ್ದು, ಮಚಾಡೋ ಶವವನ್ನು ಅಗೆದು ಹೊರತೆಗೆದಿದ್ದು ಹೇಗೆ ಎಂಬುದು ಬಹಿರಂಗವಾಗಿದೆ. ಮೃತದೇಹದ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅದನ್ನು ಮರದ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಫೋರೆನ್ಸಿಕ್ ತಜ್ಞರು ಮಚಾಡೋ ಅವರ ದೇಹವನ್ನು ಅವಶೇಷಗಳ ಮೂಲಕ ಗುರುತಿಸಿದ್ದಾರೆ.


ನೆಲ ಅಗೆದ ಬಳಿಕ ಮೃತದೇಹ ಪತ್ತೆ!


ವರದಿಗಳ ಪ್ರಕಾರ, ಕಾಂಕ್ರೀಟ್ ತೆಗೆದ ನಂತರ ನೆಲವನ್ನು ಅಗೆಯಲಾಗಿದೆ. ನಂತರ ನಟ ಮೃತದೇಹವನ್ನು ಹೊರತೆಗೆಯಲಾಗಿದೆ. ಮೃತದೇಹದ ಕೈಗಳನ್ನು ಹಗ್ಗದಿಂದ ಬಿಗಿದು ಕುತ್ತಿಗೆಗೆ ತಂತಿ ಸುತ್ತಲಾಗಿತ್ತು ಎಂದು ಮಚಾಡೊ ಅವರ ಕುಟುಂಬದ ವಕೀಲ ಜೈರೊ ಹೇಳಿದ್ದಾರೆ. ನಟನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ನಂಬಲಾಗಿದೆ. ಸದ್ಯ ಕುಟುಂಬದವರು ಅಂತಿಮ ವರದಿಗಾಗಿ ಕಾಯುತ್ತಿದ್ದಾರೆ.


ಇದನ್ನೂ ಓದಿ: Viral Video : ಇದೊಂದು ಬಾಕಿ ಇತ್ತು ನೋಡಿ: ಹಣೆ ಮೇಲೆ ಪತಿಯ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಪತ್ನಿ !


ನಟನ ಮೃತ ದೇಹವು ಕೊಳೆತೆ ಸ್ಥಿತಿಗೆ ತಲುಪಿತ್ತು ಎಂದು ಜಿರೊ ಹೇಳಿದರು. ದುರ್ವಾಸನೆ ಬರದಿರಲು ಮೃತದೇಹದ ಮೇಲೆ ಒಂದು ರೀತಿಯ ದ್ರವವನ್ನು ಸುರಿದಿದ್ದಾರೆ. ಜೆಫರ್ಸನ್ ಅವರ ಶವ ಪತ್ತೆಯಾದ ಮನೆಯ ಮಾಲೀಕರು ಬಹಳ ಹಿಂದೆಯೇ ಆ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಿದ್ದರು. ಈಗ ಆ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಈಗ ಪೊಲೀಸರು ಆ ಬಾಡಿಗೆದಾರನನ್ನು ಹುಡುಕುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.