Bollywood: ಸಲ್ಮಾನ್ ಖಾನ್ ಭವಿಷ್ಯವನ್ನೇ ಬದಲಾಯಿಸಿದ ಅಮೀರ್ & ಹೃತಿಕ್ ತಿರಸ್ಕರಿಸಿದ ಚಿತ್ರ!

Bollywood's Bhai Jaan Salman Khan: ವರದಿಗಳ ಪ್ರಕಾರ ಸಲ್ಮಾನ್ ಖಾನ್‍ಗೂ ಮೊದಲು ‘ಬಜರಂಗಿ ಭಾಯಿಜಾನ್’ ಚಿತ್ರವನ್ನು ಅಮೀರ್ ಖಾನ್ ಮತ್ತು ಹೃತಿಕ್ ರೋಷನ್‌ಗೆ ನೀಡಲಾಗಿತ್ತು.

Bollywood's Bhai Jaan Salman Khan: ಬಾಲಿವುಡ್‍ನ ಭಾಯ್ ಜಾನ್ ಅಂದರೆ ಸಲ್ಮಾನ್ ಖಾನ್ ಅವರನ್ನು ಚಿತ್ರೋದ್ಯಮದ ಸೂಪರ್ ಸ್ಟಾರ್ ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ನಿರ್ದೇಶಕ ಮತ್ತು ನಿರ್ಮಾಪಕರ ಮೊದಲ ಆಯ್ಕೆ ಸಲ್ಮಾನ್ ಖಾನ್. ಅವರ ‘ಬಜರಂಗಿ ಭಾಯಿಜಾನ್’ ಚಿತ್ರಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ. ಈ ಚಿತ್ರಕ್ಕೆ ಸಲ್ಮಾನ್ ಖಾನ್ ಮೊದಲ ಆಯ್ಕೆಯಾಗಿರಲಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಬಾಲಿವುಡ್‍ನ ಭಾಯ್ ಜಾನ್ ಅಂದರೆ ಸಲ್ಮಾನ್ ಖಾನ್ ಅವರನ್ನು ಚಿತ್ರೋದ್ಯಮದ ಸೂಪರ್ ಸ್ಟಾರ್ ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ನಿರ್ದೇಶಕರ ಮೊದಲ ಆಯ್ಕೆ ಸಲ್ಮಾನ್. ಅವರ ಹೆಸರಿನಲ್ಲಿಯೇ ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಧೂಳಿಪಟ ಮಾಡುತ್ತವೆ.

2 /6

ಬಾಲಿವುಡ್‍ನ ಬಹುತೇಕ ನಿರ್ದೇಶಕರು ತಮ್ಮ ಚಿತ್ರಗಳಿಗೆ ಸಲ್ಮಾನ್ ಖಾನ್ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಿರುವಾಗ ಅವರ ‘ಬಜರಂಗಿ ಭಾಯಿಜಾನ್’ ಚಿತ್ರಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಸುದ್ದಿಯೊಂದು ಮುನ್ನೆಲೆಗೆ ಬಂದಿದೆ. ಈ ಚಿತ್ರವು ಇಲ್ಲಿಯವರೆಗಿನ ಸಲ್ಮಾನ್ ಅವರ ಅತ್ಯುತ್ತಮ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ.

3 /6

ಸಲ್ಮಾನ್ ಖಾನ್ ಅದ್ಭುತ ನಟನೆಯಿಂದ ಎಲ್ಲರ ಮನ ಗೆದ್ದಿದ್ದರು. ಆದರೆ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಮೊದಲ ಆಯ್ಕೆಯಾಗಿರಲಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ವರದಿಗಳ ಪ್ರಕಾರ ಸಲ್ಮಾನ್ ಖಾನ್‍ಗೂ ಮೊದಲು ಈ ಚಿತ್ರವನ್ನು ಅಮೀರ್ ಖಾನ್ ಮತ್ತು ಹೃತಿಕ್ ರೋಷನ್‌ಗೆ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಇಬ್ಬರೂ ಚಿತ್ರ ಮಾಡಲು ನಿರಾಕರಿಸಿದ್ದರು. ಹೀಗಿರುವಾಗ ಈ ಚಿತ್ರ ಸಲ್ಮಾನ್ ಖಾನ್ ಕೈಗೆ ಸಿಕ್ಕಿತು.

4 /6

ಈ ಹಿಂದೆ ರಾಕೇಶ್ ರೋಷನ್ ‘ಬಜರಂಗಿ ಭಾಯಿಜಾನ್’ ನಿರ್ದೇಶಿಸಲಿದ್ದಾರೆ ಮತ್ತು ಅವರ ಮಗ ಹೃತಿಕ್ ನಟಿಸಲಿದ್ದಾರೆ ಎಂದು ಈ ಚಿತ್ರದ ಬಗ್ಗೆ ಹೇಳಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ರಾಕೇಶ್ ಚಿತ್ರದಿಂದ ಹಿಂದೆ ಸರಿದಿದ್ದು, ಕಬೀರ್ ಖಾನ್ ಈ ಚಿತ್ರವನ್ನು ನಿರ್ದೇಶಿಸಿದ್ದರು.

5 /6

‘ಬಜರಂಗಿ ಭಾಯಿಜಾನ್’ 2015ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಸಕ್ಸಸ್ ಕಂಡು ಅನೇಕ ಪ್ರಶಸ್ತಿಗಳನ್ನು ಗೆದ್ದಿತು. ಈ ಚಿತ್ರದಲ್ಲಿ ಸಲ್ಮಾನ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರದ ಕಥೆಯಿಂದ ಹಿಡಿದು ಒಂದೊಂದು ಪಾತ್ರವೂ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದೆ.

6 /6

ಸಲ್ಮಾನ್ ಖಾನ್‍ಗೆ ಭಾಯಿಜಾನ್ ಎಂಬ ಹೆಸರು ಬಂದಿದ್ದು ಈ ಚಿತ್ರದಿಂದಲೇ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಚಿತ್ರ ಸಲ್ಮಾನ್‌ಗೆ ಅದೃಷ್ಟವನ್ನು ತಂದುಕೊಟ್ಟಿತು.