Jaggesh health: ನಟ ಜಗ್ಗೇಶ್ಗೆ ಅನಾರೋಗ್ಯ... ಹಾಸಿಗೆ ಹಿಡಿದ ವಿಡಿಯೋ ವೈರಲ್
Jaggesh Health: ಸ್ಯಾಂಡಲ್ವುಡ್ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರಿಗೆ ಅನಾರೋಗ್ಯ ಕಾಡುತ್ತಿದೆ.
Jaggesh Health: ಸ್ಯಾಂಡಲ್ವುಡ್ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರಿಗೆ ಅನಾರೋಗ್ಯ ಕಾಡುತ್ತಿದೆ. ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಳಿಕ ಜಗ್ಗೇಶ್ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ. ರಾಜಕೀಯದ ಕಡೆಗೆ ಹೆಚ್ಚು ಗಮನಹರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಗ್ಗೇಶ್ ತುಂಬಾ ಆಕ್ಟೋವ್ ಆಗಿದ್ದಾರೆ.
ನವರಸ ನಾಯಕ ಜಗ್ಗೇಶ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ವಿಚಾರವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಯಾರೇ ಆಗಲಿ ಆರೋಗ್ಯ ಸರಿಯಿಲ್ಲದೇ ಇದ್ದರೆ ಹೊರಗಡೆ ಬರಬೇಡಿ, ಬೇರೆಯವರಿಗೂ ಅಂಟಿಸಬೇಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಗೋಲ್ಡನ್ ಸ್ಟಾರ್ ಪುತ್ರಿ ಚಾರಿತ್ರ್ಯ ಗಣೇಶ್ ನಿಜವಾದ ವಯಸ್ಸೆಷ್ಟು ಗೊತ್ತೇ!
ಅನಾರೋಗ್ಯದಿಂದ ಬಳಲುತ್ತಿರುವ ಜಗ್ಗೇಶ್, ಹಾಸಿಗೆ ಮೇಲೆಯೇ ಕುಳಿತು ಈ ವಿಡಿಯೋ ಮಾಡಿದಂತಿದೆ. ನನಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಿದೆ. ಹಾಗಾಗಿ ಧೈರ್ಯವಾಗಿ ಹೇಳುವೆ. ಜ್ವರ, ಕೆಮ್ಮು, ನೆಗಡಿ ಬಂದಾಗ ಮಾಸ್ಕ್ ಹಾಕಿ. ಬೇರೆಯವರಿಗೆ ತೊಂದರೆ ಆಗದಂತೆ ಇರಲು ಟ್ರೈ ಮಾಡಿ. ಮಾಮೂಲಿ ಜ್ವರ ನೆಗಡಿ ಕೆಮ್ಮೂ ಇದ್ದರೂ ಅದನ್ನು ಎಲ್ಲರಿಗೂ ಅಂಟಿಸುವ ಕೆಲಸ ಬೇಡಿ. ದಯವಿಟ್ಟು ಮನೆಯಲ್ಲಿ ಇದ್ದು ಚಿಕಿತ್ಸೆ ಪಡೆಯಿರಿ ಎಂದು ಹೇಳಿದ್ದಾರೆ.
ಗೀತಾ ಕಾರ್ಯಕ್ರಮಕ್ಕೆ ಹೋಗಿ ಬಂದ ಬಳಿಕ ಅನಾರೋಗ್ಯ ಎದುರಾಗಿದೆ ಎಂದು ಇದೇ ವಿಡಿಯೋದಲ್ಲಿ ನಟ ಜಗ್ಗೇಶ್ ತಿಳಿಸಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಬೆಡ್ನಿಂದ ಏಳುವುದಕ್ಕೂ ಆಗುತ್ತಿಲ್ಲ. ಮಾತ್ರೆ ತೆಗೆದುಕೊಂಡು ಮಲಗಿದ್ದೇನೆ ಎಂದು ಜಗ್ಗೇಶ್ ಹೇಳಿದ್ದಾರೆ.
ಇದನ್ನೂ ಓದಿ : ಧರ್ಮ ಕೀರ್ತಿರಾಜ್ ಅಭಿನಯದ "ಬುಲೆಟ್" ಚಿತ್ರ ತೆರೆಗೆ ಬರಲು ಸಿದ್ಧ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.