ಧರ್ಮ ಕೀರ್ತಿರಾಜ್ ಅಭಿನಯದ "ಬುಲೆಟ್" ಚಿತ್ರ ತೆರೆಗೆ ಬರಲು ಸಿದ್ಧ

Dharma Keerthiraj: ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ನಟಿಸಿರುವ  "ಬುಲೆಟ್" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. 

Written by - YASHODHA POOJARI | Last Updated : Jan 2, 2024, 05:30 PM IST
  • ಧರ್ಮ ಕೀರ್ತಿರಾಜ್ ನಟನೆಯ ಸಿನಿಮಾ
  • ಬುಲೆಟ್ ಸಿನಿಮಾ ರಿಲೀಸ್‌ಗೆ ಸಿದ್ಧ
  • ಹಿರಿಯ ನಟಿ ಭವ್ಯ ಮುಖ್ಯಪಾತ್ರದಲ್ಲಿರುವ ಚಿತ್ರ
ಧರ್ಮ ಕೀರ್ತಿರಾಜ್ ಅಭಿನಯದ "ಬುಲೆಟ್" ಚಿತ್ರ ತೆರೆಗೆ ಬರಲು ಸಿದ್ಧ   title=

Dharma Keerthiraj: ಧರ್ಮ ಕೀರ್ತಿರಾಜ್ ಅವರು ನಾಯಕನಾಗಿ ನಟಿಸಿರುವ  "ಬುಲೆಟ್" ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರು, ಗೋವಾ, ಮಾಲೂರು, ತುಮಕೂರು ಮುಂತಾದ ಕಡೆ  45 ದಿನಗಳ ಚಿತ್ರೀಕರಣ ನಡೆದಿದೆ‌. ಗೋವಾದಲ್ಲಿ ಚಿತ್ರೀಕರಣ ನಡೆದಿದೆ. 

ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸತ್ಯಜಿತ್‌, "ಬುಲೆಟ್" ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲೂ ಸತ್ಯಜಿತ್ ನಟಿಸಿದ್ದಾರೆ. ಕನ್ನಡದಲ್ಲಿ ಅವರಿಗೆ ಮೊದಲ ಚಿತ್ರ. ಇಶಾಕ್ ಕಾಝಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 

ಇದನ್ನೂ ಓದಿ: ಜಪಾನ್​ ಭೂಕಂಪದಲ್ಲಿ ಸಿಲುಕಿದ ಜೂನಿಯರ್​ ಎನ್‌ಟಿಆರ್ ಫ್ಯಾಮಿಲಿ..! 

ಧರ್ಮ ಕೀರ್ತಿರಾಜ್ ಅವರಿಗೆ ನಾಯಕಿಯಾಗಿ ಶ್ರೀಯಾ ಶುಕ್ಲ ಹಾಗೂ ಅಜಿತಾ ಅಭಿನಯಿಸಿದ್ದಾರೆ.  ಹಿರಿಯ ನಟಿ ಭವ್ಯ ಸಹ ಮುಖ್ಯಪಾತ್ರದಲ್ಲಿದ್ದಾರೆ. ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಅಮೀರ್ ಖಾನ್ ಮುಂತಾದವರ ಚಿತ್ರಗಳಲ್ಲಿ ನಟಿಸಿರುವ ಶಿವ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಇಶಾಕ್ ಕಾಝಿ,  ಸತ್ಯಜಿತ್, ಮಾಸ್ಟರ್ ಸಿದ್ ಟೈನ್, ಶಿವ, ರಾಜ ದೀಪ್, ಕಿಲ್ಲರ್ ವೆಂಕಟೇಶ್, ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 "ಬುಲೆಟ್" ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಅವರ ಛಾಯಾಗ್ರಹಣವಿದೆ.  ಮೂರು ಹಾಡುಗಳಿದ್ದು ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ.  ಗುರುಪ್ರಸಾದ್ ಸಂಕಲನ ಹಾಗೂ ಅಲ್ಟಿಮೇಟ್ ಶಿವು, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. "ಬುಲೆಟ್" ಎಂದರೆ ವಾಹನವಲ್ಲ. ಬಂದೂಕಿನ ಒಳಗಿರುವ "ಬುಲೆಟ್" ಇದು ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇದನ್ನೂ ಓದಿ: 2024 ಕ್ಕೆ ನಾನು "ಅಮ್ಮ".. ಹೊಸವರ್ಷಕ್ಕೆ ಸಿಹಿಸುದ್ದಿ ಕೊಟ್ಟ ರಂಗನಾಯಕಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News