ರಜನಿಕಾಂತ್ ಮಗಳೊಂದಿಗೆ ನಟ ಜಯಂ ರವಿ ಮದುವೆ..? ಶಾಕಿಂಗ್ ವಿಚಾರ ಬಯಲು
Jayam Ravi divorce : ಕಳೆದ ಕೆಲವು ದಿನಗಳಿಂದ ನಟ ಜಯಂ ರವಿ ವಿಚ್ಛೇದನದ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ, ಇದೀಗ ಹೊಸ ನ್ಯೂಸ್ ಒಂದು ಸಿನಿರಂಗದಲ್ಲಿ ಹರಿದಾಡುತ್ತಿದೆ.. ಅದೇನೆಂದರೆ.. ಸೂಪರ್ ಸ್ಟಾರ್ ರಜನಿಕಾಂತ್ ಮಗಳ ಜೊತೆ ಜಯಂ ರವಿ ಮದುವೆ.. ಈ ಸುದ್ದಿ ಎಷ್ಟು ಸತ್ಯ? ಬನ್ನಿ ತಿಳಿಯೋಣ..
Jayam ravi Rajinikanth daughter marriage : ತಮಿಳು ಇಂಡಸ್ಟ್ರಿಯ ಹೊರತಾಗಿ ಸೌತ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿರುವ ಸುದ್ದಿ ಏನೆಂದರೆ ಜಯಂ ರವಿ ವಿಚ್ಛೇದನ ಪಡೆಯಲಿದ್ದಾರೆ ಎಂಬುವುದು. ಆದರೆ ಇದುವರೆಗೂ ರವಿಯಾಗಲಿ, ಅವರ ಪತ್ನಿಯಾಗಲಿ ಈ ವಿಚಾರದಲ್ಲಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿಲ್ಲ. ಹಾಗಾದರೆ ಬೆಂಕಿಯಿಲ್ಲದೆ ಹೊಗೆ ಇಲ್ಲ, ಅಲ್ಲವೇ? ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಎಲ್ಲರೂ ಭಾವಿಸುತ್ತಿರುವಾಗಲೇ, ಮತ್ತೊಂದು ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಹೌದು.. ಸೂಪರ್ ಸ್ಟಾರ್ ರಜನಿಕಾಂತ್ ಮಗಳನ್ನು ಜಯಂ ರವಿ ಮದುವೆ ವಿಚಾರ... ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ತೆಲುಗು ಚಲನಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಸಿನಿ ಲೋಕಕ್ಕೆ ಕಾಲಿಟ್ಟ ರವಿ, ತೆಲುಗಿನ ಜಯಂ ಚಿತ್ರದ ತಮಿಳಿನ ರಿಮೇಕ್‌ನೊಂದಿಗೆ ನಾಯಕ ನಟರಾಗಿ ಗುರುತಿಸಿಕೊಂಡರು. ಈ ಚಿತ್ರದ ಮೂಲಕ ಅವರು ಜನಪ್ರಿಯತೆಯನ್ನು ಗಳಿಸಿದರು.
ಇದನ್ನೂ ಓದಿ:ಸ್ವಂತ ತಮ್ಮನ ಮೇಲೆಯೇ ಕೈ ಮಾಡಿದ ನಟ ಚಿರಂಜೀವಿ..! ರಾಮ-ಲಕ್ಷ್ಮಣರಂತಿದ್ದ ಅಣ್ಣ-ತಮ್ಮಂದಿರ ಮಧ್ಯ ಏನಾಯಿತು..?
ಸಾಕಷ್ಟು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಜಯಂ ರವಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತೀ ಕಡಿಮೆ ಸಮಯದಲ್ಲಿ ತಮಿಳು ಸ್ಟಾರ್ ಹೀರೋಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಿನಿರಂಗದ ಬ್ಯಾಗ್ರೌಂಡ್‌ನಿಂದ ಬಂದರೂ, ಜಯಂ ರವಿ ಸ್ವಂತ ಪರಿಶ್ರಮದಿಂದ ಬೆಳೆದರು.
ಜಯಂ ರವಿ ಅವರು ಖ್ಯಾತ ನಿರ್ಮಾಪಕಿ ಸುಜಾತಾ ಅವರ ಪುತ್ರಿ ಆರತಿಯನ್ನು ಪ್ರೀತಿಸಿ 2009ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಗಂಡುಮಕ್ಕಳಿದ್ದರೆ, ಜಯಂ ರವಿ ಮತ್ತು ಆರತಿ ವಿಚ್ಛೇದನಕ್ಕೆ ವಿವಿಧ ಕಾರಣಗಳಿವೆ. ಆದರೆ ಅಷ್ಟರಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ:ಆ ಜಾಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆನಿಸಿತು.. ಆದರೆ..! ಸೂಪರ್ ಸ್ಟಾರ್ ನಟಿ ಶಾಕಿಂಗ್ ಹೇಳಿಕೆ
ಅದೇನೆಂದರೆ.. ಆರತಿಯನ್ನು ಮದುವೆಯಾಗದೇ ಇದ್ದಿದ್ದರೆ ಜಯಂ ರವಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳನ್ನು ಮದುವೆಯಾಗುತ್ತಿದ್ದರು ಎಂದು ಖ್ಯಾತ ಪತ್ರಕರ್ತೆ ಸಬಿತಾ ಜೋಸೆಫ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಜಯಂ ರವಿ ಹಾಗೂ ಆರತಿ ಪ್ರೀತಿಗೆ ನಟಿ ಖುಷ್ಪು ಕಾರಣ. ಆ ಸಮಯದಲ್ಲಿ ರಜನಿಕಾಂತ್ ಅವರ ಮಗಳು ಜಯಂ ರವಿ ಅವರನ್ನು ಮದುವೆಯಾಗಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ..
ಅಲ್ಲದೆ, ಜಯಂ ರವಿ ಆರತಿಯನ್ನು ಪ್ರೀತಿಸುತ್ತಿದ್ದ ಕಾರಣ, ಆರತಿಯ ತಾಯಿ ಇಬ್ಬರಿಗೂ ಮದುವೆ ಮಾಡುವ ಆತುರದಲ್ಲಿದ್ದರು. ಏಕೆಂದರೆ ಜಯಂ ರವಿಯಂತಹ ಒಳ್ಳೆ ಸ್ಟಾರ್ ನಟ ಸಿಗುವುದು ತುಂಬಾ ಕಷ್ಟ..? ಅದಕ್ಕೇ ತಕ್ಷಣ ಮದುವೆ ಮಾಡಿಕೊಂಡರು ಎಂದು ಸಬಿತಾ ಜೋಸೆಫ್ ಹೇಳಿದ್ದಾರೆ. ಇದೀಗ ಈ ಹೇಳಿಕೆ ಸೌತ್ ಸಿನಿರಂಗದಲ್ಲಿ ಸಂಚಲನ ಮೂಡಿಸುತ್ತಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.