War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು!
War 2 Movie Updates: ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ NTR ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ ೨ ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ.
War 2 Movie Updates: ಬಹುನಿರೀಕ್ಷಿತ War 2 ಚಿತ್ರದ ಶೂಟಿಂಗ್ ವೇಳೆ ನಟ ಜ್ಯೂನಿಯರ್ NTRಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಜೂನಿಯರ್ NTR ಮತ್ತು ಹೃತಿಕ್ ರೋಷನ್ ಸೀಕ್ವೆಲ್ War 2ನಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಈ ಮಧ್ಯೆ ಜ್ಯೂನಿಯರ್ NTR ಅವರು ಸೆಟ್‌ನಲ್ಲಿ ಗಾಯಗೊಂಡಿದ್ದು, ಅವರಿಗೆ ವೈದ್ಯರು 2 ತಿಂಗಳ ಬೆಡ್ ರೆಸ್ಟ್‌ಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆ ಜ್ಯೂನಿಯರ್ NTR ಭಾಗದ ಚಿತ್ರೀಕರಣ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಜಾನ್ವಿ ಕಪೂರ್.. ಬೆಲೆ ತಿಳಿದ್ರೆ ತಲೆ ತಿರುಗುತ್ತೆ..! ನಡೆದಾಡುವ ಅರಮೆನೆ ಗುರು..
ಆಕ್ಷನ್ ದೃಶ್ಯಕ್ಕಾಗಿ ಜೂನಿಯರ್ NTR ತಯಾರಿ ನಡೆಸುತ್ತಿದ್ದಾಗ ಅವರ ಕೈಗಳಿಗೆ ಗಾಯವಾಗಿದೆ. ಹೀಗಾಗಿ 2 ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ. ವರದಿಗಳ ಪ್ರಕಾರ, ಶೂಟಿಂಗ್‌ಅನ್ನು ಅಕ್ಟೋಬರ್‌ಗೆ ಮುಂದೂಡಲಾಗಿದೆಯಂತೆ.
ಸುಮಾರು 200 ಕೋಟಿ ರೂ. ವೆಚ್ಚದಲ್ಲಿ War 2 ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಜೂನಿಯರ್ NTR & ಹೃತಿಕ್ ರೋಷನ್ ಜೊತೆಗೆ ಜಾನ್ ಅಬ್ರಹಾಂ, ಕಿಯಾರಾ ಅಡ್ವಾಣಿ, ಶಬೀರ್ ಅಹ್ಲುವಾಲಿಯಾ & ಪಾರ್ಥ ಸಿದ್ಧಪುರ ಸೇರಿದಂತೆ ಹಲವರು ನಟಿಸಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು 2025ರ ಆಗಸ್ಟ್ 14ರಂದು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ಅಂದು ದರ್ಶನ್ ಕೆನ್ನೆಗೆ ಬಾರಿಸಿದ್ದ ಈಕೆ ಇಂದು ಜನಪ್ರಿಯ ನಟಿ... ಯಾರೆಂದು ಗೆಸ್ ಮಾಡಿ ನೋಡೋಣ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.