Defamation Case: ಹೈಕೋರ್ಟ್ ಗೆ ಮೊರೆಹೋದ ನಟಿ ಕಂಗನಾ ರನೌತ್
ಜಾವೇದ್ ಅಖ್ತರ್ ಸಲ್ಲಿಸಿದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ಕ್ರಿಮಿನಲ್ ಮಾನಹಾನಿ ವಿಚಾರಣೆಯನ್ನು ಪ್ರಶ್ನಿಸಿ ನಟ ಕಂಗನಾ ರನೌತ್ ಬಾಂಬೆ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ.
ನವದೆಹಲಿ: ಜಾವೇದ್ ಅಖ್ತರ್ ಸಲ್ಲಿಸಿದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ಕ್ರಿಮಿನಲ್ ಮಾನಹಾನಿ ವಿಚಾರಣೆಯನ್ನು ಪ್ರಶ್ನಿಸಿ ನಟ ಕಂಗನಾ ರನೌತ್ ಬಾಂಬೆ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ.
ಜಾವೇದ್ ಅಖ್ತರ್ ಅವರ ದೂರಿನ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ಪ್ರಾರಂಭಿಸಿದ ಸಂಪೂರ್ಣ ವಿಚಾರಣೆಯನ್ನು ರನೌತ್ (Kangana Ranaut) ರದ್ದುಗೊಳಿಸಬೇಕೆಂದು ಹೈಕೋರ್ಟ್ ಮೊರೆಹೋಗಿದ್ದಾರೆ.
ಕಳೆದ ವರ್ಷ ಸಲ್ಲಿಸಿದ ತನ್ನ ದೂರಿನಲ್ಲಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದೂರದರ್ಶನದಲ್ಲಿ ರನೌತ್ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು, "ಸಾಮಾನ್ಯ ಜನರ ದೃಷ್ಟಿಯಲ್ಲಿ ದೂರುದಾರರ ಪ್ರತಿಷ್ಠೆಯನ್ನು ಕೆಡಿಸುವ ಮತ್ತು ಕಳಂಕ ತರುವ ಸ್ಪಷ್ಟ ಅಭಿಯಾನವೆಂದು ತೋರುತ್ತದೆ" ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು 'ಜಾತ್ಯತೀತ ನಾಯಿ' ಎಂದ ಕಂಗನಾ ರನೌತ್
ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಜಾಮೀನು ವಾರೆಂಟ್ ಹೊರಡಿಸಿದ ನಂತರ, ರನೌತ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದ ವಿರುದ್ಧ ರನೌತ್ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ವರ್ಷದ ಏಪ್ರಿಲ್‌ನಲ್ಲಿ ದಿಂಡೋಶಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಇಲ್ಲಿಯವರೆಗೆ ಹೊರಡಿಸಲಾದ ಎಲ್ಲಾ ಆದೇಶಗಳು ಮತ್ತು ಸಮನ್ಸ್ ಸೇರಿದಂತೆ ಮ್ಯಾಜಿಸ್ಟ್ರೇಟ್ ಪ್ರಾರಂಭಿಸಿದ ಸಂಪೂರ್ಣ ವಿಚಾರಣೆಯನ್ನು ರನೌತ್ ಅವರ ಮನವಿಯು ಪ್ರಶ್ನಿಸಿತು ಮತ್ತು ಮ್ಯಾಜಿಸ್ಟ್ರೇಟ್, ಜುಹು ಪೊಲೀಸರಿಗೆ ವಿಚಾರಣೆ ನಡೆಸಲು ನಿರ್ದೇಶಿಸುವ ಬದಲು, ಅಖ್ತರ್ ಮತ್ತು ಹೆಸರಿಸಲಾದ ಸಾಕ್ಷಿಯನ್ನು ಪರೀಕ್ಷಿಸಬೇಕಾಗಿರುವುದು ಮೊದಲ ಕರ್ತವ್ಯ ಎನ್ನುವುದನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ನಟಿ ಕಂಗನಾ ರನೌತ್ ಮೇಲೆ ಕಾಪಿರೈಟ್ ಉಲ್ಲಂಘನೆ ಪ್ರಕರಣ ದಾಖಲು
ಮ್ಯಾಜಿಸ್ಟ್ರೇಟ್ ನಿರ್ದೇಶನದ ಮೇರೆಗೆ ಪೊಲೀಸರು ಸಂಗ್ರಹಿಸಿದ ಸಾಕ್ಷಿ ಹೇಳಿಕೆಯನ್ನು ಕಾನೂನುಬಾಹಿರ ಎಂದು ಘೋಷಿಸಲು ಹೈಕೋರ್ಟ್‌ನಿಂದ ಮನವಿ ಕೋರಿದೆ.ಈ ಅರ್ಜಿಯನ್ನು ಹೈಕೋರ್ಟ್ ಜುಲೈ 26 ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ