Kiccha Sudeep: ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ನಟ ಸುದೀಪ್ಗೆ ಬೆದರಿಕೆ ಪತ್ರ!
Kiccha Sudeep received threatening letter: ಸ್ಯಾಂಡಲ್‍ವುಡ್ ನಟ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಪತ್ರ ಬರೆದಿರುವ ಅನಾಮಿಕರು 2 ಪತ್ರಗಳ ಮೂಲ ಬೆದರಿಕೆ ಹಾಕಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಬಂದ ಹಿನ್ನೆಲೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಪತ್ರ ಬರೆದಿರುವ ಅನಾಮಿಕರು 2 ಪತ್ರಗಳ ಮೂಲ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್‌ಗೆ ಎಕೋ ಫ್ರೆಂಡ್ಲಿ ಮೇಸೆಜ್ ಕೊಟ್ಟ ಉರ್ಫಿ, ಇದೊಂದು ಬಾಕಿ ಇತ್ತು ಎಂದ ನೆಟ್ಟಿಗರು..!
ಈ ಕುರಿತಂತೆ ಸುದೀಪ್ ಅವರ ಆಪ್ತ ಜಾಕ್ ಮಂಜು ದೂರು ನೀಡಿದ್ದಾರೆ. ಜಾಕ್ ಮಂಜು ನೀಡಿದ ದೂರಿನನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುತ್ತೇವೆ ಎನ್ನುವುದರ ಜೊತೆಗೆ ಕೆಲ ಅವಾಚ್ಯ ಶಬ್ದಗಳನ್ನು ಸಹ ಪತ್ರದಲ್ಲಿ ದುಷ್ಕರ್ಮಿಗಳು ಬರೆದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನೀಲಿ ಬಿಕಿನಿಯಲ್ಲಿ 'ಸೀತಾ ರಾಮಂ' ಬೆಡಗಿ ಸೀತಾ ಮಹಾಲಕ್ಷ್ಮಿಅಲಿಯಾಸ್ ಮೃಣಾಲ್ ಠಾಕೂರ್..!
ಈ ಪತ್ರವು ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜುಗೆ ಸಿಕ್ಕಿದ್ದು, ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.