Actor Nagabhushana: ನಟ ನಾಗಭೂಷನ ಇತ್ತೀಚಿಗಷ್ಟೇ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆ ನಟಿಸಿ ಅಭಿಮಾನಿಗಳ ಗಮನ ಸೆಳೆದಿದ್ದರು. ಇದೀಗ ನಟ ನಾಗಭೂಷನ್‌ ವಿರುದ್ಧ ಹಿಟ್ & ರನ್ ಆರೋಪ ಕೇಳಿಬರುತ್ತಿದೆ. 


COMMERCIAL BREAK
SCROLL TO CONTINUE READING

ನಟ ಖಾಸಗಿ ವಾಹಿನಿಯ ಕಾರ್ಯಕ್ರಮ ಮುಗಿಸಿ ಉತ್ತರಹಳ್ಳಿಯಿಂದ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ಸಂಚರಿಸುವಾಗ ಈ ಅಪಘಾತ ನಡೆದಿದ್ದು, ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬರಿಗೆ ಗಂಭಿರ ಗಾಯವಾಗಿದೆ. ಶನಿವಾರ ಅಕ್ಟೋಬರ್ 30ರಂದು ರಾತ್ರಿ  ಈ ಘಟನೆ ನಡೆದಿದೆ. 


ಇದನ್ನೂ ಓದಿ-ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಭಾವಿಸಿದ್ದರು : ʼಕಾಸ್ಟಿಂಗ್ ಕೌಚ್‌ʼ ಬಗ್ಗೆ ಇಶಾ ಶಾಕಿಂಗ್‌ ಹೇಳಿಕೆ


ನಾಗಭೂಷನ್‌ ಕಾರನ್ನು ವೇಗವಾಗಿ ಡ್ರೈವ್ ಮಾಡಿಕೊಂಡುಬಂದು ಫುಟ್​ಪಾತ್​ನಲ್ಲಿ ಹೋಗುತ್ತಿದ್ದ ಶ್ರೀ ಕೃಷ್ಣ ಬಿ (58) ಹಾಗೂ  ಪ್ರೇಮ. ಎಸ್(48) ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತಕ್ಕೀಡಾದ ಗಾಯಾಳುಗಳನ್ನು ನಾಗಭೂಷನ್‌ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಪ್ರೇಮ. ಎಸ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 


ಸದ್ಯ ಈ ಬಗ್ಗೆ ಕುಮಾರಸ್ವಾಮಿ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪಾರ್ಥ ಎಂಬುವವರಿಂದ ಕೇಸ್ ದಾಖಲಾಗಿದೆ. ಇನ್ನೂ ಇತ್ತೀಚೆಗಷ್ಟೇ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದ ನಟ ಆದರೆ ಅದರ ಬೆನ್ನಲೇ ಈ ಅಪಘಾತವಾಗಿದ್ದು ದುರದೃಷ್ಟಕರ.


ಇದನ್ನೂ ಓದಿ-ನಟರಾಗಿ ಪ್ರಸಿದ್ಧರಾಗುವ ಮೊದಲು ಈ ಸೌತ್‌ ಸ್ಟಾರ್‌ಗಳು ಮಾಡುತ್ತಿದ್ದ ಕೆಲಸಗಳೇನು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.