ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಭಾವಿಸಿದ್ದರು : ʼಕಾಸ್ಟಿಂಗ್ ಕೌಚ್‌ʼ ಬಗ್ಗೆ ಇಶಾ ಶಾಕಿಂಗ್‌ ಹೇಳಿಕೆ

Esha gupta about casting couch : ಬಾಲಿವುಡ್‌ ನಟಿ ಇಶಾ ಗುಪ್ತಾ ಕಾಸ್ಟಿಂಗ್ ಕೌಚ್ ಭಯಾನಕ ಅನುಭವಗಳ ಕುರಿತು ಬಹಿರಂಗ ಪಡಿಸಿದ್ದಾರೆ. ಹಿಂದಿ ಚಲನಚಿತ್ರರಂಗದ ಇನ್ನೊಂದು ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತು ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ ನೋಡಿ..

Written by - Krishna N K | Last Updated : Sep 30, 2023, 03:10 PM IST
  • ಕಾಸ್ಟಿಂಗ್ ಕೌಚ್ ಭಯಾನಕ ಅನುಭವ ಕುರಿತು ನಟಿ ಇಶಾ ಮಾತು.
  • ಎರಡು ಬಾರಿ ಭಯಾನಕ ಕಾಸ್ಟಿಂಗ್ ಎದರಿಸಿದ ನಟಿ ಇಶಾ.
  • ಜನ್ನತ್ 2 ಮತ್ತು ರಾಝ್‌ 3 ಚಿತ್ರಗಳೊಂದಿಗೆ ಖ್ಯಾತಿ ಗಳಿಸಿದ ಇಶಾ.
ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಭಾವಿಸಿದ್ದರು : ʼಕಾಸ್ಟಿಂಗ್ ಕೌಚ್‌ʼ ಬಗ್ಗೆ ಇಶಾ ಶಾಕಿಂಗ್‌ ಹೇಳಿಕೆ title=

Esha gupta : ನಟಿ ಇಶಾ ಗುಪ್ತಾ ಬಾಲಿವುಡ್‌ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮೌನ ಮುರಿದಿದ್ದಾರೆ. ಇಶಾ ಇತ್ತೀಚಿನ ಸಂದರ್ಶನದಲ್ಲಿ ತಮಗಾದ ಕಹಿ ಅನುಭವದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. ನಿರ್ಮಾಪಕರ ಮಾತು ಕೇಳದ್ದಕ್ಕೆ ತಮ್ಮನ್ನು ಸಿನಿಮಾದಿಂದ ಹೊರ ಹಾಕಿದ ಬಗ್ಗೆ ತಿಳಿಸಿದ್ದಾರೆ.

ಹೌದು... ಇಮ್ರಾನ್ ಹಶ್ಮಿ ಅಭಿನಯದ ಜನ್ನತ್ 2 ಮತ್ತು ರಾಝ್‌ 3 ಚಿತ್ರಗಳೊಂದಿಗೆ ಖ್ಯಾತಿ ಗಳಿಸಿದ ಇಶಾ, ಸೈನಿಕ ಕುಟುಂಬದ ಹಿನ್ನೆಲೆಯಿಂದ ಬಂದವರು. ಆಕೆಯ ತಂದೆ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ, ಮತ್ತು ಆಕೆಯ ತಾಯಿ ಗೃಹಿಣಿ. ಸಧ್ಯ ನಟಿ ಬಾಲಿವುಡ್‌ 'ಕಾಸ್ಟಿಂಗ್ ಕೌಚ್' ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ:ಎಂಗೇಜ್‌ಮೆಂಟ್‌ ಸುದ್ದಿ ಹಂಚಿಕೊಂಡ ಕಿರುತೆರೆ ನಟಿ...! ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿದ್ದೇಕೆ?   

ಸ್ಪಾಟ್‌ಬಾಯ್‌ಗೆ ನೀಡಿದ ಸಂದರ್ಶನದಲ್ಲಿ ಇಶಾ ತಮ್ಮ ಸಿನಿ ವೃತ್ತಿಜೀವನದಲ್ಲಿ ಎರಡು ಬಾರಿ ಎದುರಿಸಿದ ಭಯಾನಕ ಕಾಸ್ಟಿಂಗ್ ಕೌಚ್ ಅನುಭವಗಳ ಬಗ್ಗೆ ಮಾತನಾಡಿದರು. ʼʼ ಸಹ-ನಿರ್ಮಾಪಕರ ಮಾತನ್ನು ನಾನು ನಿರಾಕರಿಸಿದಾಗ ನನ್ನನ್ನು ಸಿನಿಮಾದಿಂದ ಹೊರ ಹಾಕಿದರು. ಇದಾದ ನಂತರ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ನನಗೆ ಅವಕಾಶ ನೀಡಲಿಲ್ಲ. ಏಕೆಂದರೆ ನನ್ನಿಂದ ಅವರಿಗೆ ಏನ್‌ ಪ್ರಯೋಜನ ಅಂತ ಅವರು ಹೇಳುತ್ತಿದ್ದರು. ಇಬ್ಬರು ಕಾಸ್ಟಿಂಗ್ ಕೌಚ್‌ನ ಬಲೆಗೆ ನನ್ನನ್ನು ದೂಕಲು ಪ್ರಯತ್ನಿಸಿದರು. ಅವರ ಯೋಜನೆ ನನಗೆ ಅರ್ಥವಾಗಿತ್ತು. ನಾನು ಅವರ ಬಲೆಗೆ ಬೀಳುತ್ತೇನೆ ಎಂದು ಅವರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅವರಿಂದ ಬಚಾವ್‌ ಆಗಲು ನಾನು ನನ್ನ ಮೇಕಪ್ ಆರ್ಟಿಸ್ಟ್‌ನನ್ನು ನನ್ನ ಕೋಣೆಯಲ್ಲಿ ಮಲಗಲು ಕರೆದೆ ಎಂದು ಹೇಳಿದರು. 

ಅಲ್ಲದೆ, ಸ್ಟಾರ್ ಮಕ್ಕಳ ಜೊತೆ ಅವರು ಈ ರೀತಿ ಮಾಡಲ್ಲ ಏಕೆಂದರೆ ಅವರ ಪೋಷಕರು ಇಂತಹವರನ್ನು ಕೊಲ್ಲುತ್ತಾರೆ. ನಾವು ಕೆಲಸ ಬೇಕಾದರೆ ಏನ್‌ ಬೇಕಾದರೂ ಮಾಡುತ್ತೇವೆ ಅಂತ ಇಂತಹವರು ಭಾವಿಸುತ್ತಾರೆ ಎಂದು ನಟಿ ಇಶಾ ಬೇಸರ ವ್ಯಕ್ತಪಡಿಸಿದರು. ಆದ್ರೆ ಇಶಾ ಎಲ್ಲಿಯೂ ತಮಗೆ ಕಿರುಕುಳ ನೀಡಿದವರ ಹೆಸರು ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ: ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೋ ನೋಡಿ ಶಾಕ್‌ ಆಯ್ತು : ನಟಿ ಜಾನ್ವಿ ಬೇಸರ

ಇಶಾ 2007 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಿಸ್ ಇಂಡಿಯಾ ಇಂಟರ್‌ನ್ಯಾಶನಲ್‌ನಲ್ಲಿಯೂ ಸಹ ಸ್ಪರ್ಧಿಸಿದ್ದಾರೆ. ಇಶಾಗೆ ದೇಸಿ ಏಂಜಲೀನಾ ಜೋಲಿ ಎಂದು ಕರೆಯಲಾಗುತ್ತದೆ. ಜನ್ನತ್ 2 ಮತ್ತು ರಾಝ್ 3 ರಲ್ಲಿ ಇಮ್ರಾನ್ ಜೊತೆಗೆ ಬೋಲ್ಡ್ ಪಾತ್ರಗಳಲ್ಲಿ ನಟಿಸಿ ಬಿಟೌನ್‌ನಲ್ಲಿ ಸದ್ದು ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News