Actor Nakkhul : ಕಾಲಿವುಡ್‌ ಖ್ಯಾತ ನಟ ನಕುಲ್ ದೀರ್ಘ ಸಮಯದ ನಂತರ ʼವಾಸ್ಕೋ ಡ ಗಾಮಾʼ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು.. ಇದರ ಬೆನ್ನಲ್ಲೆ ಅವರ ಮೇಲೆ ಶಾಕಿಂಗ್‌ ಆರೋಪ ಒಂದು ಕೇಳಿ ಬಂದಿದೆ. ನಟ ಸಹಾಯ ನಿರ್ದೇಶಕರೊಬ್ಬರಿಗೆ ಕಾಂಡೋಮ್‌ ತರಲು ಹೇಳಿದ್ದಾಗಿ ಸುದ್ದಿಯಾಗಿದ್ದೆ.


COMMERCIAL BREAK
SCROLL TO CONTINUE READING

ಹೌದು.. ʼವಾಸ್ಕೋ ಡ ಗಾಮಾʼ ಚಲನಚಿತ್ರ ಸಹಾಯ ನಿರ್ದೇಶಕರಾಗಿ ಎ.ಎಂ. ಚಂದ್ರು ಕೆಲಸ ಮಾಡಿದ್ದಾರೆ. ಇದೀಗ ಚಂದ್ರು ನಟ ನಕುಲ್ ಬಗ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನಟ ಸಿನಿಮಾ ಶೂಟಿಂಗ್‌ ವೇಳೆ ನಿರೋಧ ತರಲು ತಮಗೆ ಹೇಳಿದ್ದಾಗಿ ಹೇಳಿಕೊಂಡಿದ್ದಾರೆ..


ಇದನ್ನೂ ಓದಿ:ವಿಕ್ಕಿ ವರುಣ್‌ - ಧನ್ಯಾ ರಾಮಕುಮಾರ್ ನಟನೆಯ ʻಕಾಲಾಪತ್ಥರ್ʼ ರಿಲೀಸ್‌ ಡೇಟ್‌ ಅನೌನ್ಸ್‌


ತಮಿಳು ಸಿನೆಮಾ ಜಗತ್ತಿನಲ್ಲಿ ಜನಪ್ರಿಯ ನಟರಲ್ಲಿ ನಕುಲ್ ಕೂಡ ಒಬ್ಬರು. ಬಾಯ್ಸ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ತಮ್ಮ ಮೊದಲ ಸಿನಿಮಾದಲಲ್ಲೇ ಯಶಸ್ಸು ಕಂಡರು. ಆದರೆ ಕಳೆದ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದರು.


ಸಿನಿಮಾ ಅವಕಾಶಗಳ ಕೊರತೆಯಿಂದ ಕಿರುತೆರೆಯಲ್ಲಿ ನೃತ್ಯ ಕಾರ್ಯಕ್ರಮವೊಂದರ ತೀರ್ಪುಗಾರರಾಗಿದ್ದರು. ಬಹಳ ಗ್ಯಾಪ್ ನಂತರ ನಕುಲ್ ವಾಸ್ಕೋ ಡಿ ಗಾಮಾ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಆರ್‌ಜಿ ಕೃಷ್ಣನ್ ನಿರ್ದೇಶನದ ಈ ಚಿತ್ರದಲ್ಲಿ ವಂಶಿ ಕೃಷ್ಣ, ಕೆಎಸ್ ರವಿಕುಮಾರ್, ಮುನಿಷ್ಕಾಂತ್ ಸೇರಿದಂತೆ ಹಲವು ನಟರು ನಟಿಸಿದ್ದಾರೆ. ಆದರೆ ಈ ಚಿತ್ರವೂ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ.


ಇದನ್ನೂ ಓದಿ:'ಆ ನಟನೊಂದಿಗಿನ ಬ್ರೇಕಪ್ ನನಗೆ ದೇವರ ಆಶೀರ್ವಾದ...' ನಟಿ ಕತ್ರಿನಾ ಕೈಫ್‌ ಶಾಕಿಂಗ್‌ ಹೇಳಿಕೆ!


ಈ ಸಂದರ್ಭದಲ್ಲಿ ಈ ಚಿತ್ರದ ಸಹಾಯಕ ನಿರ್ದೇಶಕ ಎ.ಎಂ. ಚಂದ್ರು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಕುಲ್ ಬಗ್ಗೆ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ. ವಾಸ್ಕೋಡಗಾಮಾ ಚಿತ್ರದಲ್ಲಿ ಎರಡು ವರ್ಷ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆದರೆ ಕಳೆದ 10 ದಿನಗಳಿಂದ ನನ್ನನ್ನು ಶೂಟಿಂಗ್ ಸ್ಪಾಟ್‌ಗೆ ಕರೆಯಲೇ ಇಲ್ಲ. ನನಗೆ ಕೆಲಸ ಮಾಡಲು ಬಿಡಲಿಲ್ಲ. ಅದೇ ರೀತಿ ಮ್ಯೂಸಿಕ್ ಲಾಂಚ್ ಪಾರ್ಟಿಗೂ ಕರೆಯಲಿಲ್ಲ. ಸಿನಿಮಾ ರಿಲೀಸ್ ಆದ ನಂತರ ಸಿನಿಮಾದಲ್ಲೂ ನನ್ನ ಹೆಸರು ಬರಲಿಲ್ಲ. ಇದಕ್ಕೆಲ್ಲ ನಕುಲ್ ಕಾರಣ ಎಂದು ಆರೋಪಿಸಿದ್ದಾರೆ.


2 ಮಕ್ಕಳ ತಾಯಿ, 39 ವಯಸ್ಸು.. ಸೌಂದರ್ಯ ಕೊಂಚವೂ ತಗ್ಗಿಲ್ಲ..! ಪುಷ್ಪಾ ನಟಿಯ ಫೊಟೋ ಕ್ರೇಜ್‌


ಆದರೆ ನಟ ಇದನ್ನೆ ತಲೆಯಲ್ಲಿ ಇಟ್ಟುಕೊಂಡು ನಕುಲ್‌ ನನಗೆ ತೊಂದರೆ ಕೊಟ್ಟರು.. ಚಿತ್ರೀಕರಣ ಸೇರಿದಂತೆ ಸಿನಿಮಾದ ಯಾವುದೇ ಕೆಲಸಕ್ಕೂ ಬಾರದಂತೆ ನನನ್ನು ತಡೆದ. ಚಿತ್ರ ಬಿಡುಗಡೆಯಾದ ನಂತರ ಚಿತ್ರದಲ್ಲಿ ನನ್ನ ಹೆಸರು ಸಹ ಕಾಣಿಸಲಿಲ್ಲ. ನನ್ನ ಎರಡು ವರ್ಷಗಳ ಕೆಲಸ ವ್ಯರ್ಥವಾಯಿತು ಎಂದು ಚಂದ್ರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.