2 ಮಕ್ಕಳ ತಾಯಿ, 39 ವಯಸ್ಸು.. ಸೌಂದರ್ಯ ಕೊಂಚವೂ ತಗ್ಗಿಲ್ಲ..! ಪುಷ್ಪಾ ನಟಿಯ ಫೊಟೋ ಕ್ರೇಜ್‌

Anasuya Bharadwaj :  ಇತ್ತೀಚೆಗೆ ನಟಿ ಅನಸೂಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಅನು ಅಪರೂಪದ ಸೌಂದರ್ಯಕ್ಕೆ ದಾಸರಾಗಿದ್ದಾರೆ.. ಅಬ್ಬಾ 39ರಲ್ಲೂ ಎಷ್ಟು ಕ್ಯೂಟ್‌ ಈಕೆ ಅಂತ ಹೊಗಳುತ್ತಿದ್ದಾರೆ... ಫೋಟೋಸ್‌ ಇಲ್ಲಿವೆ.. 

1 /9

ನಾಗ ಚಿತ್ರದ ಮೂಲಕ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಟಾಲಿವುಡ್ ಚಿತ್ರರಂಗಕ್ಕೆ ಪರಿಚಯವಾದ ಅನಸೂಯಾಗೆ ಆಗ ಅಷ್ಟೊಂದು ಮನ್ನಣೆ ಸಿಗಲಿಲ್ಲ.   

2 /9

ಜಬರ್ದಸ್ತ್ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಕಿರುತೆರೆಗೆ ಪ್ರವೇಶಿಸಿದ ನಂತರ, ತಮ್ಮ ಮಾತುಗಾರಿಕೆ ಮೂಲಕ ಜನಪ್ರಿಯತೆಯನ್ನು ಗಳಿಸಿದರು.  

3 /9

ಅದರಲ್ಲೂ ಜಬರ್ದಸ್ತ್ ನಲ್ಲಿ ತನ್ನ ಸುಂದರ ವಾಕ್ಚಾತುರ್ಯದಿಂದ ಎಲ್ಲರ ಮನಸೆಳೆದ ಈ ಮೋಹನಾಂಗಿ ದಶಕಕ್ಕೂ ಹೆಚ್ಚು ಕಾಲ ಆ್ಯಂಕರ್ ಆಗಿ ಮಿಂಚಿದಳು.  

4 /9

ಜಬರ್ದಸ್ತ್ ಮೂಲಕ ಫೇಮಸ್‌ ಅದ ನಂತರ ಚಿತ್ರರಂಗಕ್ಕೆ ಕಾಲಿಟ್ಟ ಅನಸೂಯಾ ರಾಮ್ ಚರಣ್-ಸಮಂತಾ ಅಭಿನಯದ ರಂಗಸ್ಥಳಂ ಮೂಲಕ ಮುನ್ನೆಲೆಗೆ ಬಂದರು.  

5 /9

ಸುಕುಮಾರ್ ನಿರ್ದೇಶನದ ರಂಗಸ್ಥಳಂ ಸಿನಿಮಾದಲ್ಲಿ ರಂಗಮ್ಮ ಅತ್ತೆ ಪಾತ್ರದಲ್ಲಿ ಅದ್ಬುತವಾಗಿ ನಟಿಸಿ ಅಭಿಮಾನಿಗಳ ಮನ ಗೆದ್ದರು ಅನಸೂಯಾ.. ಈ ಚಿತ್ರದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದರು.    

6 /9

ಸಧ್ಯ ಲೇಡಿ ಓರಿಯೆಂಟೆಡ್ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಅನಸೂಯಾ ಸಿನಿಮಾಗಳ ಜೊತೆಗೆ ಸಮಾಜದಲ್ಲಿ ನಡೆಯುವ ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾರೆ. ಕೆಲವೊಮ್ಮೆ ವಿವಾದಕ್ಕೂ ಗುರಿಯಾಗುತ್ತಾರೆ.  

7 /9

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಚೆಲುವೆ ಆಗಾಗ ಫ್ಯಾಮಿಲಿ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಾ ನಡು ನಡುವೆ ತಮ್ಮ ಗ್ಲಾಮರ್ ಶೋ ಮೂಲಕ ರಂಜಿಸುತ್ತಾರೆ.   

8 /9

ಈ ಕ್ರಮದಲ್ಲಿ ಇದೀಗ ಹೊಸದಾಗಿ ಫೋಟೋ ಶೂಟ್ ಮಾಡಿಸಿರುವ ನಟಿ ಎಲ್ಲರ ಮನಗೆದ್ದಿದ್ದಾಳೆ. ಪ್ರಿಂಟೆಡ್ ಗೌನ್ ತೊಟ್ಟು ಕ್ಯೂಟಾಗಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ..  

9 /9

ಸಧ್ಯ ಅನಸೂಯಾ ಹಂಚಿಕೊಂಡಿರುವ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್‌ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ..