ಸಣ್ಣ ವಿಚಾರಕ್ಕೆ ʼಪವನ್ ಕಲ್ಯಾಣ್ʼ ಅಭಿಮಾನಿ ಕೊಂದ ʼಪ್ರಭಾಸ್ʼ ಫ್ಯಾನ್..!
Prabhas fan killed Pawan Kalyan fan : ಕ್ಷುಲ್ಲಕ ವಿಚಾರಕ್ಕೆ ನಟ ಪ್ರಭಾಸ್ ಅಭಿಮಾನಿಯೊಬ್ಬ ನಟ ಪವನ್ ಕಲ್ಯಾಣ್ ಅಭಿಮಾನಿಯನ್ನು ರಾಡ್‌ನಿಂದ ಹೊಡೆದು ಕೊಂದಿರುವ ಘಟನೆ ಆಂಧ್ರದಲ್ಲಿ ನಡೆದಿದೆ. ಅಭಿಮಾನ ಎನ್ನುವುದು ಸಿನಿಮಾ ಮತ್ತು ಮನರಂಜನೆಯ ಮಟ್ಟಿಗೆ ಇರಬೇಕು, ಇಲ್ಲದಿದ್ದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಇದು ಉದಾರಣೆಯಂತಿದೆ.
Pawan Kalyan fan killed : ಅಭಿಮಾನ ಅತಿರೇಕಕ್ಕೆ ಹೋದ್ರೆ ಏನೇಲ್ಲಾ ದುರಂತಗಳು ಜರುಗುತ್ತವೆ ಎನ್ನುವುದಕ್ಕೆ ಆಂಧ್ರಪ್ರದೇಶದಲ್ಲಿ ನಡೆದ ಘಟನೆಯೊಂದು ಪ್ರತ್ಯಕ್ಷ ಸಾಕ್ಷಿಯಂತಾಗಿದೆ. ಕ್ಷುಲ್ಲಕ ವಿಚಾರಕ್ಕೆ ನಟ ಪ್ರಭಾಸ್ ಅಭಿಮಾನಿಯೊಬ್ಬ ನಟ ಪವನ್ ಕಲ್ಯಾಣ್ ಅಭಿಮಾನಿಯನ್ನು ರಾಡ್‌ನಿಂದ ಹೊಡೆದು ಕೊಂದಿರುವ ಘಟನೆ ಭೀಕರ ಘಟನೆ ನಡೆದಿದೆ.
ಕಿಶೋರ್ ಮತ್ತು ಹರಿ ಕುಮಾರ್ ಎಂಬ ಇಬ್ಬರು ಯುವಕರು ಮನೆ ಪೇಂಟಿಂಗ್ ಕೆಲಸಕ್ಕಾಗಿ ಆಂಧ್ರದ ಅತ್ತಿಲಿ ಎಂಬ ಊರಿಗೆ ಹೋಗಿದ್ದರು. ಕಿಶೋರ್ ಪವನ್ ಕಲ್ಯಾಣ್ ವಿಡಿಯೋ ಒಂದನ್ನು ವಾಟ್ಸಾಪ್ ಸ್ಟೇಟಸ್ ಹಾಕಿದ್ದ, ಅದಕ್ಕೆ ಪ್ರಭಾಸ್ ವಿಡಿಯೋ ಹಾಕುವಂತೆ ಹರಿಕುಮಾರ್ ಒತ್ತಾಯಿಸಿದ್ದ. ಮೊದಲು ಮಾತಿನಲ್ಲಿ ಪ್ರಾರಂಭವಾದ ಜಗಳ ನಂತರ ಗಂಭೀರ ಸ್ವರೂಪಕ್ಕೆ ತಿರುಗಿದೆ.
ಇದನ್ನೂ ಓದಿ: Urvashi Rautela : ʼನಟ ಅಖಿಲ್ʼನಿಂದ ಕಿರುಕುಳ..? ವಿಮರ್ಶಕನಿಗೆ ಊರ್ವಶಿ ʼಮಾನನಷ್ಟ ನೋಟಿಸ್ʼ..!
ತನ್ನ ನೆಚ್ಚಿನ ನಟನ ವಿಡಿಯೋ ಹಾಕಿಕೊಳ್ಳದ್ದಕ್ಕೆ ರೊಚ್ಚಿಗೆದ್ದ ಪ್ರಭಾಸ್ ಪ್ಯಾನ್ ಹರಿಕುಮಾರ್, ತಾಳ್ಮೆ ಕಳೆದುಕೊಂಡು ರಾಡ್‌ನಿಂದ ಪವನ್ ಕಲ್ಯಾಣ್ ಅಭಿಮಾನಿ ಕಿಶೋರ್ ತಲೆಗೆ ಅನೇಕ ಬಾರಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಕಿಶೋರ್‌ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ. ಅಭಿಮಾನ ಎನ್ನುವುದು ಸಿನಿಮಾ ಮತ್ತು ಮನರಂಜನೆಯ ಮಟ್ಟಿಗೆ ಇರಬೇಕು, ಇಲ್ಲದಿದ್ದರೆ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಇದು ಉದಾರಣೆಯಂತಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ