Urvashi Rautela : ʼನಟ ಅಖಿಲ್‌ʼನಿಂದ ಕಿರುಕುಳ..? ವಿಮರ್ಶಕನಿಗೆ ಊರ್ವಶಿ ʼಮಾನನಷ್ಟ ನೋಟಿಸ್ʼ..!

Urvashi Rautela Akhil Akkineni : ಅಖಿಲ್ ಅಕ್ಕಿನೇನಿ ಯುರೋಪ್‌ನಲ್ಲಿ ಏಜೆಂಟ್‌ನ ಮಸಿ ಸಮಯದಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಕಿರುಕುಳ ನೀಡಿದ್ದಾರೆ. ಅಖಿಲ್‌ ತುಂಬಾ ಅಪಕ್ವವಾದ ನಟ ಮತ್ತು ಅವರೊಂದಿಗೆ ಕೆಲಸ ಮಾಡಲು ಊರ್ವಶಿ ಅನಾನುಕೂಲತೆ ಅನುಭವಿದ್ದಾಳೆ ಎಂದು ಸಿನಿಮಾ ವಿಮರ್ಶಕ ಎಂದು ಹೇಳಿಕೊಳ್ಳುವ ಯುಎಇ ಮೂಲದ ಉಮೈರ್ ಸಂಧು ಹೇಳಿದ್ದಾರೆ.

Written by - Krishna N K | Last Updated : Apr 23, 2023, 05:51 PM IST
  • ನಟಿ ಊರ್ವಶಿ ರೌಟೇಲಾ ನಟ ಅಖಿಲ್‌ ಕಿರುಕುಳ.
  • ಸುಳ್ಳು ಸುದ್ದಿ ಹಬ್ಬಿಸಿದ ವಿಮರ್ಶಕನ ವಿರುದ್ಧ ಗುಡುಗಿದ ಊರ್ವಶಿ.
  • ಉಮೈರ್‌ ಸಂಧುಗೆ ಮಾನನಷ್ಟ ನೋಟಿಸ್‌ ಕಳುಹಿಸಿದ ಬಿಟೌನ್‌ ನಟಿ.
Urvashi Rautela : ʼನಟ ಅಖಿಲ್‌ʼನಿಂದ ಕಿರುಕುಳ..? ವಿಮರ್ಶಕನಿಗೆ ಊರ್ವಶಿ ʼಮಾನನಷ್ಟ ನೋಟಿಸ್ʼ..! title=

Urvashi Rautela : ಬಿಟೌನ್‌ ಸುಂದರಿ ನಟಿ ಊರ್ವಶಿ ರೌಟೇಲಾ, ಸಿನಿಮಾ ವಿಮರ್ಶಕ ಎಂದು ಹೇಳಿಕೊಳ್ಳುವ ಯುಎಇ ಮೂಲದ ಉಮೈರ್ ಸಂಧುಗೆ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ. ಊರ್ವಶಿ ಮುಂಬರುವ ಚಿತ್ರ ʼಏಜೆಂಟ್‌ʼ ಸೆಟ್‌ನಲ್ಲಿ ನಟ ಅಖಿಲ್ ಅಕ್ಕಿನೇನಿ ನಟಿಗೆ ಕಿರುಕುಳ ನೀಡಿದ್ದಾರೆ ಎಂದು ಸಂಧು ಹೇಳಿಕೆ ನೀಡಿದ ಹಿನ್ನೆಲೆ ಊರ್ವಶಿ ಈ ನಿರ್ಧಾರ ಕೈಗೊಂಡಿದ್ದಾರೆ. ಸಂಧು ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಊರ್ವಶಿ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ನಟಿ ಊರ್ವಶಿ ರೌಟೇಲಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಉಮೈರ್ ಸಂಧು ಟ್ವೀಟ್ ಅನ್ನು ಹಂಚಿಕೊಂಡು ಇದು ಫೆಕ್‌ ಎಂದು ಹೇಳಿದ್ದಾರೆ. ಸಂಧು ಟ್ವಿಟ್‌ನಲ್ಲಿ, "#ಅಖಿಲ್ ಅಕ್ಕಿನೇನಿ ಯುರೋಪ್‌ನಲ್ಲಿ ಏಜೆಂಟ್‌ನ ಮಸಿ ಸಮಯದಲ್ಲಿ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಕಿರುಕುಳ ನೀಡಿದ್ದಾರೆ. ಅಖಿಲ್‌ ತುಂಬಾ ಅಪಕ್ವವಾದ ನಟ ಮತ್ತು ಅವರೊಂದಿಗೆ ಕೆಲಸ ಮಾಡಲು ಊರ್ವಶಿ ಅನಾನುಕೂಲತೆ ಅನುಭವಿದ್ದಾಳೆ ಎಂದು ಆರೋಪಿಸಿ ಬರೆದುಕೊಂಡಿದ್ದರು.

 
 
 
 

 
 
 
 
 
 
 
 
 
 
 

A post shared by Urvashi Rautela (@urvashirautela)

ಇದನ್ನೂ ಓದಿ: ಸೆಟ್ಟೇರಿದ 'ಮಾರ್ಗರೇಟ್​ ಲವರ್​ ಆಫ್​​ ರಾಮಾಚಾರಿ’....ಅಭಿಲಾಶ್​-ಸೋನಲ್​ ಜೋಡಿಗೆ ಡಾಲಿ ಧನಂಜಯ್ ಶುಭ ಹಾರೈಕೆ

ಇದಕ್ಕೆ ಪ್ರತಿಕ್ರಿಯೆಯಾಗಿ ಊರ್ವಶಿ, ʼನನ್ನ ಕಾನೂನು ತಂಡ ದಿಂದ ಮಾನನಷ್ಟ ಮೊಕದ್ದಮೆ ದಾಖಲಿ ನೋಟಿಸ್ ನೀಡಿದೆ. ನಿಮ್ಮ ನಕಲಿ/ಹಾಸ್ಯಾಸ್ಪದ ಟ್ವೀಟ್‌ಗಳಿಂದ ನನಗೆ ಅಸಮಾಧಾನವಿದೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ನೀವು ತುಂಬಾ ಅಪಕ್ವ ಪತ್ರಕರ್ತರು, ಅಲ್ಲದೆ, ನನಗೆ ಮತ್ತು ನನ್ನ ಕುಟುಂಬಕ್ಕೆ (ಅಖಿಲ್‌) ತುಂಬಾ ಅನಾನುಕೂಲವಾಗಿದ್ದಾರೆ ಎಂದು ಹೇಳುವ ಮೂಲಕ ಸಂಧು ವಿರುದ್ಧ ನಟಿ ಗುಡುಗಿದ್ದಾರೆ.

ಸದ್ಯ ಊರ್ವಶಿ ನಡೆಯನ್ನು ಅವರ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಕಾಮೆಂಟ್ ಮಾಡುವ ಮೂಲಕ ತಮ್ಮ ಬೆಂಬಲವನ್ನು ತೋರಿಸಿದ್ದಾರೆ. ದಕ್ಷಿಣ ಏಷ್ಯಾದ ನಂ 1 ಚಲನಚಿತ್ರ ವಿಮರ್ಶಕ ಎಂದು ಹೇಳಿಕೊಳ್ಳುವ ಉಮೈರ್ ಸಂಧು, ಈ ಹಿಂದೆಯೂ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ದ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಅಲ್ಲದೆ, ಪ್ರಭಾಸ್‌ ಮತ್ತು ಅನುಷ್ಕಾ ಸಂಬಂಧ ಸರಿಯಿಲ್ಲ ಎಂದು ರೂಮರ್ಸ್‌ ಹಬ್ಬಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News