ಬೆಂಗಳೂರು: ‘ಗಂಧದಗುಡಿ’ ಸಾಕ್ಷ್ಯಚಿತ್ರ ಇದೇ ಅಕ್ಟೋಬರ್ 28ಕ್ಕೆ ದೀಪಾವಳಿ ಹಬ್ಬದಂತೆ ಭರ್ಜರಿಯಾಗಿ ರಿಲೀಸ್ ಆಗಲಿದೆ. ‘ಅಪ್ಪು’ ಡ್ರೀಮ್ ಪ್ರಾಜೆಕ್ಟ್ ಅನ್ನು ಕೋಟ್ಯಂತರ ಅಭಿಮಾನಿಗಳು ಅಪ್ಪಿ ಒಪ್ಪಿದ್ದಾಗಿದೆ. ಇನ್ನೇನು ದೇವರ ದರ್ಶನ ಮಾತ್ರ ಬಾಕಿಯಿದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಇರೋ ಪವರ್ ಅಂತಹದ್ದು. ಅಬ್ಬಾ..! ‘ಪುನೀತ ಪರ್ವ’ಕ್ಕೆ ಸಾಕ್ಷಿಯಾದ ಜನಸಾಗರವನ್ನು ನೋಡಿ ನಿಜಕ್ಕೂ ಆ ದೇವರಿಗೂ ಅಸೂಯೆಯಾಗಿರಬಹುದು.


COMMERCIAL BREAK
SCROLL TO CONTINUE READING

‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಬರೀ ಸ್ಯಾಂಡಲ್‍ವುಡ್‍ ಮಾತ್ರವಲ್ಲದೇ ಇಡೀ ಎಲ್ಲಾ ಚಿತ್ರರಂಗದ ಸ್ಟಾರ್‍ಗಳು ಸಾಕ್ಷಿಯಾಗಿದ್ದರು. ‘ಅಪ್ಪು’ ಬಗ್ಗೆ ಎಲ್ಲಾ ಸ್ಟಾರ್‍ಗಳು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಪ್ರಕಾಶ್ ರೈ ಮಾತಾಡಿರೋ ಮಾತು ಪ್ರತಿಯೊಬ್ಬರ ಮನಸ್ಸಿಗೆ ನಾಟಿದೆ. ‘ಅಪ್ಪು’ ಮಾಡಿದ ಸಹಾಯ ಕಾರ್ಯವನ್ನು ತಾವು ಮುಂದುವರಿಸಬೇಕು ಅನ್ನೋದು ಇದೀಗ ಎಲ್ಲಾ ತಾರೆಯರ ಆಸೆಯಾಗಿದೆ.


ಇದನ್ನೂ ಓದಿ: Puneetha Parva: ಅಪ್ಪುವನ್ನು ಮುದ್ದಾಗಿ ಯಾರೂ ಕರೆಯದ ಹೆಸರಿನಿಂದ ಕರಿತಿದ್ರು ಸುಧಾಮೂರ್ತಿ!! ಯಾವ ಹೆಸರು ಗೊತ್ತಾ?


ಅಂತೆಯೇ ಬಹುಭಾಷಾ ನಟ ಪ್ರಕಾಶ್ ರೈಯವರು ‘ಅಪ್ಪು ಎಕ್ಸ್​ಪ್ರೆಸ್​ ಆಂಬುಲೆನ್ಸ್’ ಬಗ್ಗೆಒಂದಷ್ಟು ಮಾತನಾಡಿ ಎಲ್ಲಾರ ಕಣ್ಣಲ್ಲಿ ನೀರು ತರಿಸಿದ್ರು. ‘ಅಪ್ಪು’ ಹೆಸರಿನಲ್ಲಿ ಕರ್ನಾಟಕದ 30 ಜಿಲ್ಲೆಗೂ ಆಂಬುಲೆನ್ಸ್ ಸೇವೆ ಒದಗಿಸೋ ಬಗ್ಗೆ ಮಾತನಾಡಿ ನನ್ನ ಜೊತೆ ನಟ ಸೂರ್ಯ, ಚಿರಂಜೀವಿ ಸೇರಿದಂತೆ ಎಲ್ಲರೂ ಕೂಡ ಸಾಥ್ ಕೊಟ್ಟಿದ್ದಾರೆ. ಇವರೆಲ್ಲಾ ‘ಅಪ್ಪು’ ಹೆಸರಿನಲ್ಲಿ ಆಂಬುಲೆನ್ಸ್ ಕೊಡಲು ನಿರ್ಧಾರ ಮಾಡಿದರು ಅನ್ನೋದನ್ನು ವೇದಿಕೆ ಮೇಲೆ ಭಾವುಕರಾಗಿ ತಿಳಿಸಿದರು.


ನಾನು ‘‘ಅಪ್ಪು ಎಕ್ಸ್​ಪ್ರೆಸ್​ ಆಂಬುಲೆನ್ಸ್’ನ ಕರ್ನಾಟಕದ 30 ಜಿಲ್ಲೆಗಳಿಗೂ ಒದಗಿಸುವುದು ಪಕ್ಕಾ. ಎಷ್ಟೇ ಕಷ್ಟ ಆದ್ರೂ ಈ ಸೇವೆ ನೀಡ್ತೀನಿ ಅನ್ನೋ ಭರವಸೆಯನ್ನು ಪ್ರಕಾಶ್ ರೈ ನೀಡಿದ್ರು. ‘ಅಪ್ಪು’ಗೆ ಇದ್ದ ನಿಸರ್ಗ ಪ್ರೀತಿ ಮೆಚ್ಚುವಂತದ್ದು. 1 ವರ್ಷ ಅವರು ಕಾಡು ಸುತ್ತಿದ್ದಾರೆ, ಇದು ಸುಲಭ ಅಲ್ಲ’ ಅಂತಾ ಇದೇ ವೇಳೆ ಪ್ರಕಾಶ್ ರೈ ತಿಳಿಸಿದರು.


ಇದನ್ನೂ ಓದಿ: ಅಪ್ಪುವಿನ ನಗು ನನ್ನನ್ನು ಯಾವಾಗಲೂ ಆಕರ್ಷಿಸಿತ್ತು- ಅಮಿತಾಬ್ ಬಚ್ಚನ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ