ಅಪ್ಪುವಿನ ನಗು ನನ್ನನ್ನು ಯಾವಾಗಲೂ ಆಕರ್ಷಿಸಿತ್ತು- ಅಮಿತಾಬ್ ಬಚ್ಚನ್

ಪುನೀತ ಪರ್ವ ಕಾರ್ಯಕ್ರಮದಲ್ಲಿ ಗಂಧದ ಗುಡಿ ಚಿತ್ರಕ್ಕೆ ಭಾರತೀಯ ಚಿತ್ರರಂಗದ ಹೆಸರಾಂತ ನಟ ಅಮಿತಾಬ್ ಬಚ್ಚನ್ ಅವರ ವಿಡಿಯೋ ಸಂದೇಶದ ಸಾರಾಂಶ ಇಲ್ಲಿದೆ

Written by - Zee Kannada News Desk | Last Updated : Oct 22, 2022, 01:47 AM IST
  • ಅಪ್ಪು ಅವರ ಬಗ್ಗೆ ಪಾಸ್ಟ್ ಟೆನ್ಸ್ ನಲ್ಲಿ ಮಾತನಾಡುವುದು ಕಷ್ಟಕರವಾಗುತ್ತದೆ.
  • ನಾವು ಅವರನ್ನು ತುಂಬಾ ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡೆವು.
  • ನನಗೆ ಅವರ ಸಾವಿನ ಸುದ್ದಿಯನ್ನು ತಿಳಿದ ತಕ್ಷಣ ವೈಯಕ್ತಿಕವಾಗಿ ನಷ್ಟವಾದ ಬಗ್ಗೆ ವಿವರಿಸಲು ಪದಗಳೇ ಸಿಗಲಿಲ್ಲ
ಅಪ್ಪುವಿನ ನಗು ನನ್ನನ್ನು ಯಾವಾಗಲೂ ಆಕರ್ಷಿಸಿತ್ತು- ಅಮಿತಾಬ್ ಬಚ್ಚನ್  title=
screengrab

ಬೆಂಗಳೂರು: ಅಪ್ಪುವಿನ ನಗು ನನ್ನನ್ನು ಯಾವಾಗಲೂ ಆಕರ್ಷಿಸಿತ್ತು ಎಂದು ಭಾರತೀಯ ಚಿತ್ರರಂಗದ ಹೆಸರಾಂತ ನಟ ಅಮಿತಾಬ್ ಬಚ್ಚನ್ ಅವರು ಇಂದು ಪುನೀತ್ ರಾಜ್ ಕುಮಾರ್ ಅವರ ' ಗಂಧದ ಗುಡಿ ' ಚಿತ್ರ ಬಿಡುಗಡೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪುನೀತ ಪರ್ವಕ್ಕೆ ಕಳುಹಿಸಿದ ವಿಡಿಯೋ ಸಂದೇಶದಲ್ಲಿ ಅವರನ್ನು ಸ್ಮರಿಸಿದ್ದಾರೆ.

ಪುನೀತ ಪರ್ವ ಕಾರ್ಯಕ್ರಮದಲ್ಲಿ ಗಂಧದ ಗುಡಿ ಚಿತ್ರಕ್ಕೆ ಭಾರತೀಯ ಚಿತ್ರರಂಗದ ಹೆಸರಾಂತ ನಟ ಅಮಿತಾಬ್ ಬಚ್ಚನ್ ಅವರ ವಿಡಿಯೋ ಸಂದೇಶದ ಸಾರಾಂಶ ಇಲ್ಲಿದೆ

"ನಾನು ಇಲ್ಲಿ ಈಗ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡುತ್ತಿದ್ದೇನೆ, ಅವರನ್ನು ನಾವೆಲ್ಲಾ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತೇವೆ. ಅಪ್ಪು ಅವರ ಬಗ್ಗೆ ಪಾಸ್ಟ್ ಟೆನ್ಸ್ ನಲ್ಲಿ ಮಾತನಾಡುವುದು ಕಷ್ಟಕರವಾಗುತ್ತದೆ. ಆದರೆ ನಾವು ಅವರನ್ನು ತುಂಬಾ ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡೆವು. ನನಗೆ ಅವರ ಸಾವಿನ ಸುದ್ದಿಯನ್ನು ತಿಳಿದ ತಕ್ಷಣ ವೈಯಕ್ತಿಕವಾಗಿ ನಷ್ಟವಾದ ಬಗ್ಗೆ ವಿವರಿಸಲು ಪದಗಳೇ ಸಿಗಲಿಲ್ಲ. ಅದು ನಿಜಕ್ಕೂ ದುಃಖಕರ ಸಂಗತಿ, ಅದನ್ನು ಇಂದಿಗೂ ಕೂಡ ನಂಬಲಿಕ್ಕೆ ಆಗುತ್ತಿಲ್ಲ.ಡಾ ರಾಜಕುಮಾರ್ ಅವರು ನಮ್ಮ ಕುಟುಂಬಕ್ಕೆ ಹತ್ತಿರದ ಸ್ನೇಹಿತರಾಗಿದ್ದರು. ಅವರ ಕುಟುಂಬ ಹಾಗೂ ನಮ್ಮ ಕುಟುಂಬದ ನಡುವೆ ಪರಸ್ಪರ ಸಾಕಷ್ಟು ಗೌರವಾದಾರವಿತ್ತು,1982 ರಲ್ಲಿ ನಾನು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಅವರು ನನಗೋಸ್ಕರ ಪ್ರಾರ್ಥನೆ ಮಾಡಿದ್ದರು.ಅಂತಹ ಸಂಗತಿಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.ಇದೆ ವೇಳೆ ಅಪ್ಪು ಅವರ ಉಪಸ್ಥಿತಿಯನ್ನು ಕೂಡ ನಾನು ಮರೆಯಲಸಾಧ್ಯ.ನಾನು ಅಪ್ಪುನನ್ನು ಚಿಕ್ಕವನಿದ್ದಾಗ ಭೇಟಿ ಮಾಡಿದ್ದೆ, ಆದರೆ ನನಗೆ ಅವರಿಗೆ ಸಂಬಂಧಿಸಿದಂತೆ ಅತಿಯಾಗಿ ಆಕರ್ಷಣೆಯಾದ ಸಂಗತಿ ಏನೆಂದರೆ ಅವರು ಯಾವಾಗಲೂ ನಗುತ್ತಿದ್ದರು, ಪ್ರತಿಯೊಂದು ಸಂದರ್ಭದಲ್ಲಿ,ಅವರ ಮುಖದ ಮೇಲೆ ವಿಶಿಷ್ಟ ಕಳೆ ಕಟ್ಟಿರುತ್ತಿತ್ತು, ಇದರಿಂದಾಗಿ ಅವರು ನಮಗೆ ಮತ್ತು ಅವರ ಅಭಿಮಾನಿಗಳಿಗೆ ಅಷ್ಟು ಹತ್ತಿರದವರಾಗಿದ್ದರು,ಆದ್ದರಿಂದ ಅಪ್ಪು ಅವರ ಬಗ್ಗೆ ಪಾಸ್ಟ್ ಟೆನ್ಸ್ ನಲ್ಲಿ ಮಾತನಾಡುವುದು ಕಷ್ಟಕರವಾಗುತ್ತದೆ” ಎಂದು ಅಮಿತಾಬ್ ಬಚ್ಚನ್ ಪುನೀತ ಪರ್ವ ಕಾರ್ಯಕ್ರಮದಲ್ಲಿ ಗಂಧದ ಗುಡಿ ಚಿತ್ರಕ್ಕೆ ವಿಡಿಯೋ ಸಂದೇಶದ ಮೂಲಕ ಶುಭಹಾರೈಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

 

 

Trending News