ನವದೆಹಲಿ: ನಟ ಆರ್.ಮಾಧವನ್ ಅವರ ಪೋಸ್ಟ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಬಹುತೇಕ ಎಲ್ಲರಿಗೂ ಸ್ಫೂರ್ತಿಯಾಗಿದೆ. ಪರೀಕ್ಷಾ ಫಲಿತಾಂಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಮಾಧವನ್ ಬುಧವಾರ ಸ್ಪೂರ್ತಿದಾಯಕ ಪೋಸ್ಟ್ ಹಂಚಿಕೊಂಡಿದ್ದಾರೆ. ತನ್ನ ಟ್ವೀಟ್ ನಲ್ಲಿ, ನಟನು ತನ್ನ ಬೋರ್ಡ್ ಪರೀಕ್ಷೆಯಲ್ಲಿ 58% ಅಂಕಗಳನ್ನು ಗಳಿಸಿರುವುದಾಗಿ ಹೇಳಿಕೊಂಡಿದ್ದಾರೆ.



COMMERCIAL BREAK
SCROLL TO CONTINUE READING

'ತಮ್ಮ ಬೋರ್ಡ್ ಫಲಿತಾಂಶಗಳನ್ನು ಪಡೆದ ಎಲ್ಲರಿಗೂ- ಅವರ ನಿರೀಕ್ಷೆಗಳನ್ನು ಮೀರಿದ ಮತ್ತು ಅದನ್ನು ಉತ್ತೇಜಿಸಿದವರಿಗೆ ಅಭಿನಂದನೆಗಳು ಮತ್ತು ಉಳಿದವರಿಗೆ ನನ್ನ ಬೋರ್ಡ್ ಪರೀಕ್ಷೆಯಲ್ಲಿ ನಾನು 58% ಪಡೆದಿದ್ದೇನೆ ಎಂದು ಹೇಳಲು ಬಯಸುತ್ತೇನೆ. ಆಟವು ಇನ್ನೂ ಪ್ರಾರಂಭವಾಗಿಲ್ಲ ಸ್ನೇಹಿತರೇ," ಎಂದು  ಮಾಧವನ್ ಟ್ವೀಟ್ ಮಾಡಿದ್ದಾರೆ.


12ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ಕನಿಷ್ಠ ಅಂಕ ಪಡೆದವರಿಗೆ ನಿಜಕ್ಕೂ ಆರ್,ಮಾಧವನ್ ಪೋಸ್ಟ್ ಸ್ಫೂರ್ತಿ ನೀಡುತ್ತದೆ. ಅಂದರೆ ಕಡಿಮೆ ಅಂಕ ಗಳಿಸಿದ ತಕ್ಷಣ ಜೀವನದಲ್ಲಿ ಎಲ್ಲವೂ ಮುಗಿದು ಹೋಯಿತು ಅಂತ ಅಲ್ಲ ಎನ್ನುವುದನ್ನು ಅವರ ಪೋಸ್ಟ್ ಸಾರುತ್ತದೆ.