IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024

ನೆಕ್ಸಾ ಹಾಗೂ ಮೈಸೂರ್ ಸಹ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಐಫಾ 2024 ಕಾರ್ಯಕ್ರಮದಲ್ಲಿ ಶಂಕರ್-ಎಹ್ಸಾನ್-ಲಾಯ್, ಶಿಲ್ಪಾ ರಾವ್, ಹನಿ ಸಿಂಗ್, ಲುಲಿಯಾ ವಂತೂರ್ ರಂತಹ ದಿಗ್ಗಜ ಸಂಗೀತ ಮಾಂತ್ರಿಕರ ಪ್ರದರ್ಶನಗಳು ನಡೆಯಲಿವೆ.

Written by - Manjunath N | Last Updated : Sep 24, 2024, 09:00 PM IST
  • ಇದೇ ವೇಳೆ ಹನಿ ಸಿಂಗ್, ಅವರ ರಾಪ್ ಮತ್ತು ಬಾಲಿವುಡ್ ನ ಹಾಡುಗಳು ಕಾರ್ಯಕ್ರಮಕ್ಕೆ ಹೊಸ ಹೈ ವೋಲ್ಟೇಜ್ ಎನರ್ಜಿಯನ್ನು ನೀಡುತ್ತವೆ.
  • ಅಷ್ಟೇ ಅಲ್ಲದೆ ಲುಲಿಯಾ ವಂತೂರ್, ಅವರ ಆಕರ್ಷಕ ಉಪಸ್ಥಿತಿ ಮತ್ತು ಗಾಯನ ಸಂಜೆ ಸಹ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸುತ್ತವೆ.
IIFA 2024: ಸ್ಮರಣೀಯ ಸಂಗೀತ ರಸ ಸಂಜೆಗೆ ಸಾಕ್ಷಿಯಾಗಲಿದೆ ಐಫಾ 2024 title=

ಭಾರತೀಯ ಸಿನಿಮಾ ರಂಗದ ಇತಿಹಾಸದಲ್ಲಿ ಐಫಾ ಪ್ರಶಸ್ತಿಯು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ, ಪ್ರತಿವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶಿಯ ಸಿನಿ ಜಗತ್ತಿನ ವೈಶಿಷ್ಟ್ಯವನ್ನು ಈ ಕಾರ್ಯಕ್ರಮವು ಸಾರುತ್ತದೆ. ಅಂತಹ ಕಾರ್ಯಕ್ರಮವು ಈ ಬಾರಿ ಸೆಪ್ಟೆಂಬರ್ 27 ರಿಂದ 29 ರವರೆಗೆ ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯಲಿದೆ.

ನೆಕ್ಸಾ ಹಾಗೂ ಮೈಸೂರ್ ಸಹ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಐಫಾ 2024 ಕಾರ್ಯಕ್ರಮದಲ್ಲಿ ಶಂಕರ್-ಎಹ್ಸಾನ್-ಲಾಯ್, ಶಿಲ್ಪಾ ರಾವ್, ಹನಿ ಸಿಂಗ್, ಲುಲಿಯಾ ವಂತೂರ್ ರಂತಹ ದಿಗ್ಗಜ ಸಂಗೀತ ಮಾಂತ್ರಿಕರ ಪ್ರದರ್ಶನಗಳು ನಡೆಯಲಿವೆ.

ಐಫಾ ಕಾರ್ಯಕ್ರಮವು ಸಂಗೀತ, ಗ್ಲಾಮರ್, ಚಿತ್ರ ತಾರೆಯರ ಸಮ್ಮಿಲನದ ಮೂಲಕ ಹೊಸ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ. ಈ ಬಾರಿ ಸಿದ್ಧಾಂತ್ ಚತುರ್ವೇದಿ ಮತ್ತು ಅಭಿಷೇಕ್ ಬ್ಯಾನರ್ಜಿ, ಶಂಕರ್-ಎಹ್ಸಾನ್-ಲಾಯ್, ಶಿಲ್ಪಾ ರಾವ್, ಹನಿ ಸಿಂಗ್ ಮತ್ತು ಲುಲಿಯಾ ವಂತೂರ್ ಅವರ ಕಾರ್ಯಕ್ರಮಗಳು ಐಫಾದ ಮೆರಗನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿIND vs BAN: ಕಾನ್ಪುರ ಟೆಸ್ಟ್‌ನೊಂದಿಗೆ ʼಈʼ ಲೆಜೆಂಡರಿ ಆಟಗಾರರ ವೃತ್ತಿಜೀವನ ಅಂತ್ಯ... ಮತ್ತೇ ಟೀಂ ಇಂಡಿಯಾಗೆ ಮರಳುವುದಿಲ್ಲವೇ?!  

ಕಾರ್ಯಕ್ರಮದ ಸಂಗೀತ ಸಂಜೆಯು ಶಂಕರ್-ಎಹ್ಸಾನ್-ಲಾಯ್ ಅವರೊಂದಿಗೆ ಪ್ರಾರಂಭವಾಗಲಿದ್ದು, ಅವರ ಭಾವಪೂರ್ಣ ಸಂಯೋಜನೆಗಳು ಕಳೆದ ಮೂರು ದಶಕಗಳಲ್ಲಿ ಬಾಲಿವುಡ್ ಸಂಗೀತದಲ್ಲಿ ಹೊಸ ಭಾಷೆಯನ್ನು ಬರೆದಿವೆ .ಅವರ ಕ್ಲಾಸಿಕ್ ಹಿಟ್‌ಗಳು ಮತ್ತು ಸಮಕಾಲೀನ ಸಂಗೀತದ ಮಿಶ್ರಣದ ಭರವಸೆ ನೀಡುತ್ತದೆ.ಇದರ ಜೊತೆಗೆ ಶಿಲ್ಪಾ ರಾವ್ ಅವರ ಬಹುಮುಖ ಪ್ರತಿಭೆಯು ಅವರನ್ನು ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಿರುವ ಹಿನ್ನೆಲೆ ಗಾಯಕಿಯನ್ನಾಗಿ ಮಾಡಿದೆ.ಅವರ ಅಭಿನಯವು ಸುಮಧುರ ಲಾವಣಿಗಳು ಮತ್ತು ಲವಲವಿಕೆಯ ಹಾಡುಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವುದು ಖಚಿತವೆಂದೇ ಹೇಳಬಹುದು.

ಇದೇ ವೇಳೆ ಹನಿ ಸಿಂಗ್, ಅವರ ರಾಪ್ ಮತ್ತು ಬಾಲಿವುಡ್ ನ ಹಾಡುಗಳು ಕಾರ್ಯಕ್ರಮಕ್ಕೆ ಹೊಸ ಹೈ ವೋಲ್ಟೇಜ್ ಎನರ್ಜಿಯನ್ನು ನೀಡುತ್ತವೆ.ಅಷ್ಟೇ ಅಲ್ಲದೆ ಲುಲಿಯಾ ವಂತೂರ್, ಅವರ ಆಕರ್ಷಕ ಉಪಸ್ಥಿತಿ ಮತ್ತು ಗಾಯನ ಸಂಜೆ ಸಹ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: ಕ್ರಿಕೆಟ್‌ ನಿವೃತ್ತಿಯ ನಂತರ ಬೀದಿಗೆ ಬಿದ್ದ ಕ್ರಿಕೆಟಿಗರು! ಲಾರಿ ಡ್ರೈವರ್‌, ಸೇಲ್ಸ್‌ಮೆನ್‌ಗಳಾಗಿ ಜೀವನ ಸಾಗಿಸುತ್ತಿರುವ ಆಟಗಾರರಿವರು

ಈ ಕಾರ್ಯಕ್ರಮದಲ್ಲಿ ಭಾರತೀಯ ಸಿನಿಮಾದ ಸುದೀರ್ಘ ಇತಿಹಾಸದಲ್ಲಿ ಮೂವತ್ತು ವರ್ಷಗಳ ಸ್ಮರಣೀಯ ಕೊಡುಗೆಯನ್ನು ನೀಡಿರುವ ಶಂಕರ್-ಎಹ್ಸಾನ್-ಲಾಯ್ ಅವರನ್ನು ಗೌರವಿಸಲಾಗುತ್ತದೆ. ಇದೇ ವೇಳೆ ಬಾಲಿವುಡ್ ನಲ್ಲಿ ತಮ್ಮದೇ ಶೈಲಿಯ ಸಂಗೀತ ಮಾಂತ್ರಿಕತೆಯ ಮೂಲಕ ಹೊಸ ಅಲೆಯನ್ನು ಅಸೃಷ್ಟಿಸಿದ ಅವರ ಸಂಗೀತದ ಹಾಡುಗಳನ್ನು ಮತ್ತೊಮ್ಮೆ ಮೆಲುಕು ಹಾಕಲಾಗುತ್ತದೆ.ಜೊತೆಗೆ ಚಿತ್ರರಂಗದಲ್ಲಿ ಛಾಯಾಗ್ರಹಣ, ಚಿತ್ರಕಥೆ, ಸಂಭಾಷಣೆ, ಸಂಕಲನ, ನೃತ್ಯ ಸಂಯೋಜನೆ, ಧ್ವನಿ ವಿನ್ಯಾಸ, ಧ್ವನಿ ಮಿಶ್ರಣ, ಹಿನ್ನೆಲೆ ಸಂಗೀತ ಹೀಗೆ ಹಲವು ರೀತಿಯಲ್ಲಿ ಭಾರತೀಯ ಸಿನಿಮಾ ರಂಗದ ಯಶಸ್ಸಿಯಾಗಿ ತೆರೆಮರೆಯಲ್ಲಿ ದುಡಿದ ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರ ನೀಡುವುದರ ಮೂಲಕ ಅವರನ್ನು ಗೌರವಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

 

 

Trending News