Rajinikanth Sonakshi sinha : ರಜನಿಕಾಂತ್ ಭಾರತೀಯ ಸಿನಿ ರಂಗದ ಸೂಪರ್‌ ಸ್ಟಾರ್‌ ನಟ. 47 ವರ್ಷಕ್ಕೂ ಹೆಚ್ಚು ಕಾಲ ಕಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ತಲೈವಾ ಒಮ್ಮೆ ಡೈರೆಕ್ಟರ್‌ ‘ಲೈಟ್ಸ್, ಕ್ಯಾಮೆರಾ ಆ್ಯಕ್ಷನ್’ ಎಂದಾಕ್ಷಣ ತಮ್ಮ ಪಾತ್ರವನ್ನು ಹೀರಿಕೊಂಡು ನಟಿಸಲು ಶುರು ಮಾಡುತ್ತಾರೆ. ಆದರೆ, ಈ ಒಬ್ಬ ನಟಿಯ ಜೊತೆ ಮಾತ್ರ ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸಲು ರಜನಿ ಹೆದರುತ್ತಿದ್ದರು. ಈ ಕುರಿತು ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ..


COMMERCIAL BREAK
SCROLL TO CONTINUE READING

ನಿರ್ದೇಶಕ ಕೆಎಸ್ ರವಿಕುಮಾರ್ ಮತ್ತು ರಜನಿಕಾಂತ್ 15 ವರ್ಷಗಳ ನಂತರ ʼಲಿಂಗಾʼ ಚಿತ್ರದ ಮೂಲಕ ಮತ್ತೆ ಒಂದಾಗಿದ್ದರು. ಈ ಚಿತ್ರದಲ್ಲಿ ರಜನಿಕಾಂತ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ರಜನಿ ಜೊತೆ ಅನುಷ್ಕಾ ಶೆಟ್ಟಿ ಮತ್ತು ಸೋನಾಕ್ಷಿ ಸಿನ್ಹಾ ನಟಿಸಿದ್ದರು.


ಇದನ್ನೂ ಓದಿ:'ಒಂದು ಸರಳ ಪ್ರೇಮಕಥೆ'ಗೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್..! 


ಇತ್ತೀಚೆಗೆ ಲಿಂಗಾ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ತನಗಿಂತ ಚಿಕ್ಕವಳಾದ ಸೋನಾಕ್ಷಿ ಸಿನ್ಹಾ ಅವರೊಂದಿಗೆ ನಟಿಸಿದ ಅನುಭವವನ್ನು ರಜನಿಕಾಂತ್ ಹಂಚಿಕೊಂಡಿದ್ದಾರೆ. ಸದ್ಯ ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 
 
ಹೌದು. ರಜನಿಕಾಂತ್‌ ಮತ್ತು ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅತ್ಯಂತ ಆತ್ಮೀಯ ಸ್ನೇಹಿತರು. ಸೋನಾಕ್ಷಿ ತನಗಿಂತ ಚಿಕ್ಕವಳಾದ ಕಾರಣ ರಜನಿ ʼಲಿಂಗಾʼ ಚಿತ್ರದಲ್ಲಿ ಅವರೊಂದಿಗೆ ರೋಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಹೆದರುತ್ತಿದ್ದರು. ಈ ಕುರಿತು ತಮ್ಮ ಅನುಭವ ಹಂಚಿಕೊಂಡಿರುವ ಅವರು, ‘ಲಿಂಗಾ’ ಚಿತ್ರದಲ್ಲಿ ಫೈಟ್‌ ಸೀನ್‌ಗಳಲ್ಲಿ ನಟಿಸುವಾಗ ರೈಲಿನಲ್ಲಿ ಹತ್ತಿ ಹಾರುವಾಗಲೂ ಇಷ್ಟೊಂದು ಭಯ ಆಗಿರಲಿಲ್ಲ, ಆದರೆ ಸೋನಾಕ್ಷಿ ಜೊತೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಾಗ ತುಂಬಾ ಭಯವಾಗುತ್ತಿತ್ತು ಅಂತ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ:ಥಿಯೇಟರ್‌ನಲ್ಲಿ ನೋಡಿದ್ದು ಜಸ್ಟ್‌ ಸ್ಯಾಂಪಲ್‌..! ಓಟಿಟಿ ʼಅನಿಮಲ್‌ʼನಲ್ಲಿವೆ ರಶ್ಮಿಕಾ ಅನ್‌ಸೀನ್‌ ಹಾಟ್‌ ಸೀನ್ಸ್‌


ಅಲ್ಲದೆ ಸೋನಾಕ್ಷಿ ತಮ್ಮ ಪುತ್ರಿಯರಾದ ಐಶ್ವರ್ಯ ಮತ್ತು ಸೌಂದರ್ಯ ಅವರೊಂದಿಗೆ ಆಟವಾಡುತ್ತಾ ಬೆಳೆದ ಮಗು ಎಂದು ರಜನಿಕಾಂತ್ ಹೇಳಿಕೊಂಡಿದ್ದಾರೆ. ಇನ್ನು ಅನುಷ್ಕಾ ಶೆಟ್ಟಿ ಜೊತೆ ನಟಿಸುವಾಗಲೂ ಇದೇ ರೀತಿಯ ಭಾವನೆ ಮೂಡಿತ್ತು ಎಂದು ತಲೈವಾ ಬಹಿರಂಗಪಡಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.