ಥಿಯೇಟರ್‌ನಲ್ಲಿ ನೋಡಿದ್ದು ಜಸ್ಟ್‌ ಸ್ಯಾಂಪಲ್‌..! ಓಟಿಟಿ ʼಅನಿಮಲ್‌ʼನಲ್ಲಿವೆ ರಶ್ಮಿಕಾ ಅನ್‌ಸೀನ್‌ ಹಾಟ್‌ ಸೀನ್ಸ್‌

Animal OTT : ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ʼಅನಿಮಲ್ʼ ಬ್ಲಾಕ್ಬಸ್ಟರ್‌ ಹಿಟ್‌ ಆಗಿದೆ. ಮೊದಲಿಗೆ ಸಾಕಷ್ಟು ಟೀಕೆಗಳನ್ನು ಎದುರಿಸಿದ ಚಿತ್ರ ನಂತರದ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಮೂಡಿಸಿತು. ಇದೀಗ ಈ ಸಿನಿಮಾ ಕೆಲವು ಹೆಚ್ಚುವರಿ ದೃಶ್ಯಗಳೊಂದಿಗೆ ಶೀಘ್ರದಲ್ಲೇ OTT ಗೆ ಬರಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jan 19, 2024, 05:54 PM IST
  • ಸಂದೀಪ್ ರೆಡ್ಡಿ ವಂಗಾ ಮತ್ತ ಬಿಟೌನ್‌ ನಟ ರಣಬೀರ್ ಕಪೂರ್ ಅಭಿನಯದ ಅನಿಮಲ್ ಸಿನಿಮಾ.
  • ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ʼಅನಿಮಲ್ʼ ಬ್ಲಾಕ್ಬಸ್ಟರ್‌ ಹಿಟ್‌ ಆಗಿದೆ.
  • ಇದೀಗ ಈ ಚಿತ್ರ ಜನವರಿ 26 ರಂದು OTT ನಲ್ಲಿ ಬಿಡುಗಡೆಯಾಗುತ್ತಿದೆ.
ಥಿಯೇಟರ್‌ನಲ್ಲಿ ನೋಡಿದ್ದು ಜಸ್ಟ್‌ ಸ್ಯಾಂಪಲ್‌..! ಓಟಿಟಿ ʼಅನಿಮಲ್‌ʼನಲ್ಲಿವೆ ರಶ್ಮಿಕಾ ಅನ್‌ಸೀನ್‌ ಹಾಟ್‌ ಸೀನ್ಸ್‌ title=

Animal movie ott release date : ಟಾಲಿವುಡ್‌ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತ ಬಿಟೌನ್‌ ನಟ ರಣಬೀರ್ ಕಪೂರ್ ಅಭಿನಯದ ಅನಿಮಲ್ ಸುಮಾರು 800 ಕೋಟಿ ಕಲೆಕ್ಷನ್‌ಗಳೊಂದಿಗೆ ಬ್ಲಾಕ್‌ಬಸ್ಟರ್ ಆಯಿತು. ಮೊದಲ ಮೊದಲು ಈ ಚಿತ್ರಕ್ಕೆ ಹಲವಾರು ಟೀಕೆಗಳು ವ್ಯಕ್ತವಾದವು ಆಲ್ಲದೆ, ಕೆಲವು ಪ್ರೇಕ್ಷಕರಿಂದ ಅದೇ ಮಟ್ಟದ ಮೆಚ್ಚುಗೆಯನ್ನು ಸಹ ಪಡೆಯಿತು. ಇದೀಗ ಈ ಚಿತ್ರ ಜನವರಿ 26 ರಂದು OTT ನಲ್ಲಿ ಬಿಡುಗಡೆಯಾಗುತ್ತಿದೆ.

ಹೌದು.. ಈ ಚಿತ್ರ ಡಿಜಿಟಲ್ ಸ್ಟ್ರೀಮಿಂಗ್ ಕುರಿತು ಕೆಲವು ಸಮಸ್ಯೆಗಳನ್ನು ಎದುರಿಸಿದ ಬಳಿಕ ಸಧ್ಯ ಜನವರಿ 26ಕ್ಕೆ ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಆಗುವುದು ಖಚಿತವಾಗಿದೆ. ನೆಟ್‌ಫ್ಲಿಕ್ಸ್ ಸುಮಾರು ನೂರು ಕೋಟಿಗೆ ಅನಿಮಲ್ ಒಟಿಟಿ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಥಿಯೇಟರ್ ಆವೃತ್ತಿಗಿಂತ ಒಟಿಟಿ ಆವೃತ್ತಿಯಲ್ಲಿ ಹೆಚ್ಚಿನ ದೃಶ್ಯಗಳು ಇರಲಿದೆ ಎಂದು ಸಂದೀಪ್ ರೆಡ್ಡಿ ವಂಗ ತಿಳಿಸಿದ್ದಾರೆ.́

ಇದನ್ನೂ ಓದಿ:ರಾಮ ಮಂದಿರಕ್ಕೆ ನಟ ಪ್ರಭಾಸ್‌ 50 ಕೋಟಿ ರೂ. ದೇಣಿಗೆ ಕೊಟ್ರಾ..? ಈ ಸುದ್ದಿಯ ಸತ್ಯಾಂಶ ಇಲ್ಲಿದೆ

ಥಿಯೇಟ್ರಿಕಲ್ ಆವೃತ್ತಿಗೆ ಹೋಲಿಸಿದರೆ ಅನಿಮಲ್ OTT ಆವೃತ್ತಿಯಲ್ಲಿ ಹಲವು ಬದಲಾವಣೆಗಳಿವೆಯಂತೆ. ಥಿಯೇಟ್ರಿಕಲ್ ಆವೃತ್ತಿಯು 3 ಗಂಟೆ 21 ನಿಮಿಷ ಇದ್ರೆ, OTT ನಲ್ಲಿ, ಅನಿಮಲ್‌ ಸಿನಿಮಾ ಮೂರೂವರೆ ಗಂಟೆಗೂ ಹೆಚ್ಚು ಅವಧಿಯೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. 

ಇನ್ನು ಕುತೂಹಲಕಾರಿ ಸಂಗತಿಯೆಂದರೆ, ಓಟಿಟಿ ಆವೃತ್ತಿಯಲ್ಲಿ ರಶ್ಮಿಕಾ ಮಂದಣ್ಣ ಅವರ ಅನ್‌ಸೀನ್‌ ದೃಶ್ಯಗಳು ಇರಲಿವೆ. ಇದರಿಂದಾಗಿ ನೀವು ಚಿತ್ರಮಂದಿರದಲ್ಲಿ ನೋಡಿದರ ರೊಮ್ಯಾಂಟಿಕ್ ದೃಶ್ಯಗಳನ್ನು ಒಟಿಟಿಯಲ್ಲಿ ನೋಡಬಹದು. ರಣಬೀರ್ ಮತ್ತು ರಶ್ಮಿಕಾ ಅವರ ಲಿಪ್ಲಾಕ್ ದೃಶ್ಯಗಳು ಕೂಡ ಇರಲಿವೆ.

ಇದನ್ನೂ ಓದಿ:ಓ ಮೈ ಗಾಡ್..! ಎನ್‌ಟಿಆರ್ ಜೊತೆ ನಟಿಸೋಕೆ ಜಾನ್ವಿ ಕಪೂರ್ ಇಷ್ಟು ಕೋಟಿ ಹಣ ಬೇಡಿಕೆ ಇಟ್ಟಿದ್ದಾರಾ?

ರಣಬೀರ್ ಕಪೂರ್ ನಾಯಕನಾಗಿ ಮತ್ತು ರಶ್ಮಿಕಾ ಮಂದನಾ ನಾಯಕಿಯಾಗಿರುವ ಈ ಸಿನಿಮಾದಲ್ಲಿ ಬಾಬಿ ಡಿಯೋಲ್ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ತಂದೆಯ ಪಾತ್ರವನ್ನು ಅನಿಲ್ ಕಪೂರ್ ಕಾಣಿಸಿಕೊಂಡಿದ್ದಾರೆ. ತ್ರಿಪ್ತಿ ಡಿಮ್ರಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂದೀಪ್ ವಂಗ ಅವರ ಸಹೋದರ ಪ್ರಣಯ್ ವಂಗ ಈ ಚಿತ್ರವನ್ನು ಟಿ-ಸೀರೀಸ್ ನಾಯಕ ಭೂಷಣ್ ಕುಮಾರ್ ಜೊತೆಗೆ ನಿರ್ಮಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News