ಬೆಂಗಳೂರು: ಸೌರಭ್ ಕುಲಕರ್ಣಿ ನಿರ್ದೇಶನದ "ಸಿರಿ ಲಂಬೋದರ ವಿವಾಹ" (ಎಸ್ ಎಲ್ ವಿ) ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಖ್ಯಾತ ನಟ ರಮೇಶ್ ಅರವಿಂದ್ ಟೀಸರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟೀಸರ್ ವಿಭಿನ್ನವಾಗಿದ್ದು, A2 music ಮೂಲಕ ಬಿಡುಗಡೆಯಾಗಿದೆ.


COMMERCIAL BREAK
SCROLL TO CONTINUE READING

ಸೇರಿ ನಮ್ಮ ಚಿತ್ರದ ಮುಹೂರ್ತ ನೆರವೇರಿತು. ಈಗ ಚಿತ್ರೀಕರಣ ಪೂರ್ಣವಾಗಿ, ಮೊದಲಪ್ರತಿ ಸಿದ್ದವಾಗಿದೆ. "ಸಿರಿ ಲಂಬೋದರ ವಿವಾಹ" ಕಮರ್ಷಿಯಲ್ ಎಂಟರ್ಟೈನ್ಮೆಂಟ್ ವಿತ್ ಎ ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. ಸಿರಿ ಹಾಗೂ ಲಂಬೋದರ ಈ ಚಿತ್ರದ ನಾಯಕ, ನಾಯಕಿ ಅಲ್ಲ. ಮತ್ತೆ "ಸಿರಿ ಹಾಗೂ ಲಂಬೋದರ" ಯಾರು ಎಂದು ತಿಳಿಯಲು ಚಿತ್ರ ನೋಡಬೇಕು. ರಂಗಭೂಮಿ ಕಲಾವಿದರೇ ಹೆಚ್ಚಾಗಿ ಈತನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಟೀಸರ್ ಬಿಡುಗಡೆ ಮಾಡಿದ್ದೇವೆ. ಇನ್ನೆರಡು ತಿಂಗಳಲ್ಲಿ ಚಿತ್ರವನ್ನು ನಿಮ್ಮ ಮುಂದೆ ತರುತ್ತೇವೆ.  ಮತ್ತೊಂದು ಖುಷಿಯ ವಿಚಾರವೆಂದರೆ, ಡಿಸೆಂಬರ್ ನಲ್ಲಿ  ಓಮನ್ ಹಾಗೂ ದುಬೈ ದೇಶಗಳಲ್ಲಿ ನಮ್ಮ ಚಿತ್ರದ ಪ್ರೀಮಿಯರ್ ನಡೆಯಲಿದೆ.  ನಾನು ಸೇರಿದಂತೆ ಅನೇಕ ಸಿನಿಮಾಸಕ್ತರು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೀವಿ. ಟೀಸರ್ ಬಡುಗಡೆ ಮಾಡಿಕೊಟ್ಟ ರಮೇಶ್ ಅರವಿಂದ್ ಅವರಿಗೆ ಧನ್ಯವಾದ ಎಂದರು ಸೌರಭ್ ಕುಲಕರ್ಣಿ.


ಇದನ್ನೂ ಓದಿ: ಬಡ ಮಕ್ಕಳ ಹಾಲಿಗೂ ಕನ್ನ : ʼಕ್ಷೀರಭಾಗ್ಯʼ ಕಾಳಸಂತೆಯಲ್ಲಿ ಮಾರಾಟ..!


"ಸಿರಿ ಲಂಬೋದರ ವಿವಾಹ" ಸರಳ, ಸುಂದರ ಹಾಗೂ ಕುತೂಹಲ ಕಾಯ್ದುಕೊಳ್ಳುವ ಚಿತ್ರವೆಂದರು ನಟ ಸುಂದರ್ ವೀಣಾ.


ನಾವು ಇಡೀ ತಂಡ ಮೂಲತಃ ರಂಗಭೂಮಿ ಅವರು.‌ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಒಳ್ಳೆಯ ಚಿತ್ರ ಮಾಡಿರುವ ಖಷಿಯಿದೆ.  ನಾನು ಈ ಚಿತ್ರದಲ್ಲಿ ವೆಡ್ಡಿಂಗ್ ಪ್ಲಾನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಅಂಜನ್ ಎ ಭಾರದ್ವಾಜ್.


ನಾನು ಈ ಹಿಂದೆ ಬಿ.ಸುರೇಶ್ ಅವರ "ದೇವರ ನಾಡಲ್ಲಿ" ಚಿತ್ರದಲ್ಲಿ ಅಭಿನಿಯಿಸಿದ್ದೆ. ಆನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸೌರಭ್ ಹಾಗೂ ತಂಡದವರು ಮಾಡಿರುವ ಕಥೆ ಚೆನ್ನಾಗಿದೆ. ನನ್ನ ಪಾತ್ರಕೂಡ ಅಷ್ಟೆ ಚೆನ್ನಾಗಿದೆ ಎನ್ನುತ್ತಾರೆ ನಾಯಕಿ ದಿಶಾ ರಮೇಶ್.


ಇದನ್ನೂ ಓದಿ: ಹನಿ ಟ್ರಾಪ್ ಹನಿಗಳು ಸಿಎಂ ಕಚೇರಿಯಲ್ಲಿ ಬಿದ್ದಿದ್ದರ ಬಗ್ಗೆ ಸಿಎಂ ಬೊಮ್ಮಾಯಿ ಮಾತಾಡ್ಬೇಕು: ಕಾಂಗ್ರೆಸ್


ಛಾಯಾಗ್ರಾಹಕ ಕಿಟ್ಟಿ ಕೌಶಿಕ್ , ಸಂಗೀತ ನಿರ್ದೇಶಕ ಸಂಘರ್ಷ್ ಕುಮಾರ್ ಹಾಗೂ ಕಾರ್ಯಕಾರಿ ನಿರ್ಮಾಪಕಿ ನಮ್ರತಾ ಚಿತ್ರದ  ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಟ ಮಂಡ್ಯ ರಮೇಶ್ ಚಿತ್ರತಂಡಕ್ಕೆ ಶುಭ ಕೋರಿದರು.Versato ventures, pavamana creations, Fouress network selutions & Dhupada drushya ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ.


ಅಂಜನ್ ಎ ಭಾರದ್ವಾಜ್, ದಿಶಾ ರಮೇಶ್, ರಾಜೇಶ್ ನಟರಂಗ, ಸುಂದರ್ ವೀಣಾ, ಪಿ.ಡಿ.ಸತೀಶ್ ಚಂದ್ರ, ಮಜಾಭಾರತದ ಶಿವು ಹಾಗೂ ಸುಶ್ಮಿತ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ ಕಾಳೆ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.