ನವದೆಹಲಿ: ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ನಟ ರಂದೀಪ್ ಹೂಡಾ ಅವರನ್ನು ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇದಗಳ ಸಂರಕ್ಷಣೆ (ಸಿಎಮ್ಎಸ್) ರಾಯಭಾರಿಯಾಗಿ ತೆಗೆದುಹಾಕಲಾಗಿದೆ.


COMMERCIAL BREAK
SCROLL TO CONTINUE READING

ಸೋಶಿಯಲ್ ಮೀಡಿಯಾ ಬಳಕೆದಾರರು ಜಾತಿವಾದಿ ಮತ್ತು ಸೆಕ್ಸಿಸ್ಟ್ ಎಂದು ಕರೆಯಲ್ಪಡುವ  9 ವರ್ಷದ ಹಿಂದಿನ ವೀಡಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.2012 ರಲ್ಲಿ ಮೀಡಿಯಾ ಹೌಸ್ ಆಯೋಜಿಸಿದ್ದ ಈವೆಂಟ್‌ನ 43 ಸೆಕೆಂಡುಗಳ ಕ್ಲಿಪ್ ಹಂಚಿಕೊಂಡಿರುವ ವೀಡಿಯೊದಲ್ಲಿ ಹುಡಾ ಜೋಕ್ ಮಾಡುತ್ತಾ ಪ್ರೇಕ್ಷಕರೊಂದಿಗೆ ನಗುತ್ತಿದ್ದಾರೆ.


ಇದನ್ನೂ ಓದಿ- Corona Vaccination - 60 ದಿನಗಳಲ್ಲಿ 50 ಕೋಟಿ ಭಾರತೀಯರಿಗೆ ಲಸಿಕೆ ಹೇಗೆ ಸಾಧ್ಯ? ಇಲ್ಲಿದೆ Azim Premji Idea


ಈಗ ವಿಶ್ವ ಸಂಸ್ಥೆ ವೀಡಿಯೋದಲ್ಲಿನ ಹೇಳಿಕೆಗಳನ್ನು ಆಕ್ರಮಣಕಾರಿ ಎಂದು ಕಂಡುಕೊಂಡಿದೆ ಅವರು ಇನ್ನೂ ಮುಂದೆ ರಾಯಭಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಅದು ತನ್ನ ಪ್ರಕಟನೆಯಲ್ಲಿ ತಿಳಿಸಿದೆ,"ಸಿಎಮ್ಎಸ್ ಸೆಕ್ರೆಟರಿಯಟ್ ವೀಡಿಯೊದಲ್ಲಿ ಮಾಡಿದ ಕಾಮೆಂಟ್ಗಳನ್ನು ಆಕ್ರಮಣಕಾರಿ ಎಂದು ಕಂಡುಕೊಳ್ಳುತ್ತದೆ, ಮತ್ತು ಅವು ಸಿಎಮ್ಎಸ್ ಸೆಕ್ರೆಟರಿಯಟ್ ಅಥವಾ ವಿಶ್ವಸಂಸ್ಥೆಯ ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ,ಹೂಡಾ ಇನ್ನು ಮುಂದೆ ಸಿಎಮ್ಎಸ್ ರಾಯಭಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ" ಎಂದು ಅದು ಹೇಳಿದೆ.


ಇದನ್ನೂ ಓದಿ- Corona Vaccination ವಿಷಯದಲ್ಲಿ ದಾಖಲೆ ಬರೆದ ಭಾರತ


ಫೆಬ್ರವರಿ 2020 ರಲ್ಲಿ ಮೂರು ವರ್ಷಗಳ ಕಾಲ ವಲಸೆ ಪ್ರಭೇದಗಳ ಸಿಎಮ್ಎಸ್ ರಾಯಭಾರಿಯಾಗಿ  ರಣದೀಪ್ ಹೂಡಾ ಅವರನ್ನು ನೇಮಿಸಲಾಯಿತು.ಸಿಎಮ್ಎಸ್ ವಿಶ್ವಸಂಸ್ಥೆಯ ಒಪ್ಪಂದವಾಗಿದ್ದರೂ,ಯುಎನ್ ಸೆಕ್ರೆಟರಿಯಟ್ ಮತ್ತು ಯುಎನ್ ಎನ್ವಿರಾನ್ಮೆಂಟ್ ಪ್ರೋಗ್ರಾಂ ಎರಡರಿಂದಲೂ ಇದು ಪ್ರತ್ಯೇಕವಾಗಿದೆ ಮತ್ತು ಹೂಡಾ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆ ಸಲ್ಲಿಸಿದ ಏಕೈಕ ಘಟಕವೆಂದರೆ ಅದು ಸಿಎಮ್ಎಸ್.


ಈಗ ಹೂಡಾ ಹೇಳಿಕೆಗೆ ಸಾಮಾಜಿಕ ಮಾಧ್ಯಮದ ಹೊರಗಡೆಯೂ ಸಹಿತ ಸಾಕಷ್ಟು ಟೀಕೆಗಳು ಕೇಳಿಬಂದಿದ್ದು, ಹಲವರು ಕ್ಷಮೆಯಾಚಿಸುವಂತೆ ಕೇಳಿಕೊಂಡಿದ್ದಾರೆ.


ಇದನ್ನೂ ಓದಿ- ಇಂದಿನಿಂದ ದೇಶಾದ್ಯಂತ ಮೊದಲ ಹಂತದ Covid Vaccine ನೀಡುವ ಅಭಿಯಾನ ಆರಂಭ


44 ವರ್ಷದ ಈ ನಟನು ಅಂತರ್ಜಾಲದಲ್ಲಿ ಮತ್ತು ಹೊರಗೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾನೆ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ (Mayawati) ವಿರುದ್ಧ ಮಾಡಿದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಅನೇಕರು ಕೇಳಿಕೊಂಡಿದ್ದಾರೆ.ಟ್ವಿಟ್ಟರ್ ಬಳಕೆದಾರರು ನಟನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದರಿಂದ ಶುಕ್ರವಾರದಂದು #ಅರೆಸ್ಟ್ ರಣದೀಪ್ ಹುಡಾ ಟ್ರೆಂಡಿಂಗ್ ಆಗಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.