ನವದೆಹಲಿ: Corona Vaccination - ವಿಪ್ರೋದ (Wipro) ಸಂಸ್ಥಾಪಕ ಅಜೀಮ್ ಪ್ರೇಮ್‌ಜಿ (Azim Premji), ಕೋವಿಡ್ -19(Covid-19) ವಿರುದ್ಧದ ದೇಶದ ಮೆಗಾ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಅನುಮೋದಿಸಲು ಭಾರತ ಸರ್ಕಾರಕ್ಕೆ ಪ್ರಸ್ತಾಪಿಸಿದ್ದು, ಸರ್ಕಾರವು ಖಾಸಗಿ ವಲಯದೊಂದಿಗೆ ಸೇರಿಕೊಂಡರೆ ಮುಂದಿನ 60 ದಿನಗಳಲ್ಲಿ ಸುಮಾರು 50 ಕೋಟಿಗೂ ಅಧಿಕ ಜನರ ವ್ಯಾಕ್ಸಿನೇಷನ್ ನಡೆಸಬಹುದು ಎಂದು ಹೇಳಿದ್ದಾರೆ.
ಭಾರತದ ಲಸಿಕಾಕರಣ ಕಾರ್ಯಕ್ರಮದ ಶ್ಲಾಘನೆ
ಬೆಂಗಳೂರು ಚೇಂಬರ್ ಆಫ್ ಇಂಡಸ್ಟ್ರಿ ಅಂಡ್ ಕಾಮರ್ಸ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಜೀಮ್ ಪ್ರೇಮ್‌ಜಿ ಭಾರತದ ವ್ಯಾಕ್ಸಿನೇಷನ್ (Corona Vaccination) ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ ಮತ್ತು ಕೋವಿಡ್ -19 ಲಸಿಕೆಯನ್ನು ದಾಖಲೆಯ ಸಮಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇಂದು ಹೆಚ್ಚಿನ ಪ್ರಮಾಣದ ಲಸಿಕೆಯನ್ನು ಸಾರ್ವಜನಿಕರಿಗೆ ತಲುಪಿಸಲಾಗಿದೆ. ಜನಸಂಖ್ಯೆಯ ಹೆಚ್ಚಿನ ಭಾಗದ ಲಸಿಕೆ ಹೊರೆ ಹೊರಲು ಮೋದಿ ಸರ್ಕಾರ ಬಜೆಟ್‌ನಲ್ಲಿ 35,000 ಕೋಟಿ ರೂಪಾಯಿ ಖರ್ಚು ಮಾಡಲು ನಿರ್ಧರಿಸಿದೆ. ಈ ಹಂಚಿಕೆಯು ಸುಮಾರು 50 ಕೋಟಿ ಭಾರತೀಯರಿಗೆ ಲಸಿಕೆ ಹಾಕಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಲಸಿಕೆ ವೆಚ್ಚ ಮತ್ತು ಇತರ ವೆಚ್ಚಗಳು ಸೇರಿದಂತೆ ಪ್ರತಿ ವ್ಯಕ್ತಿಗೆ 700 ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.
ಸೀರಮ್ ಸಂಸ್ಥೆಗೆ ನಾವು ಪ್ರತಿ ಶಾಟ್‌ಗೆ ಸುಮಾರು 300 ರೂ. ಮತ್ತು ಆಸ್ಪತ್ರೆಗಳು ಮತ್ತು ಖಾಸಗಿ ನರ್ಸಿಂಗ್ ಹೋಂಗಳಿಗೆ ಪ್ರತಿ ಶಾಟ್‌ಗೆ 100 ರೂ. ನೀಡುವ ಸಾಧ್ಯತೆಯಿದೆ ಎಂದು ಪ್ರೇಮ್‌ಜಿ ಹಣಕಾಸು ಸಚಿವರಿಗೆ ತಿಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಹಳ ದೊಡ್ಡ ಜನಸಂಖ್ಯೆಗೆ ಪ್ರತಿ ಶಾಟ್‌ಗೆ 400 ರೂ.ಗಳಲ್ಲಿ ವ್ಯಾಕ್ಸಿನೇಷನ್ ನಡೆಸಬಹುದಾಗಿದೆ ಎಂದಿದ್ದಾರೆ. ಪ್ರೇಮ್‌ಜಿ ಪ್ರಕಾರ, ಸರ್ಕಾರವು ಖಾಸಗಿ ವಲಯವನ್ನು ತನ್ನೊಂದಿಗೆ ತೆಗೆದುಕೊಂಡರೆ, ದೇಶವು 60 ದಿನಗಳಲ್ಲಿ 50 ಕೋಟಿ ಜನರ ವ್ಯಾಕ್ಸಿನೇಷನ್ ನಡೆಸಬಹುದು. ಇದು ತುಂಬಾ ಪ್ರಾಯೋಗಿಕ ಮತ್ತು ಪ್ರಮುಖವಾಗಿದೆ ಎಂದು ಅವರು ಹೇಳಿದ್ದಾರೆ. ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆಗಾಗಿ ವ್ಯಾಕ್ಸಿನೇಷನ್ ಪ್ರಯತ್ನಗಳನ್ನು ಚುರುಕುಗೊಳಿಸಲು ಪ್ರೇಮ್ಜಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಸೇರಿದಂತೆ ಇತರ ಉದ್ಯಮದ ಈ ಸಂವಾದದಲ್ಲಿ ಶಾಮೀಲಾಗಿದ್ದರು. ಉದ್ಯಮದ ಲಾಬಿ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಕಾರ್ಪೊರೇಟ್ ವಲಯದ "ಪೂರ್ಣ ಭಾಗವಹಿಸುವಿಕೆ" ಯನ್ನು ಪ್ರತಿಪಾದಿಸಿದೆ.
ಇದನ್ನೂ ಓದಿ- ಶೀಘ್ರದಲ್ಲಿಯೇ ಶ್ರೀಸಾಮಾನ್ಯರ Vaccination ಅಭಿಯಾನ, ಈ ದಿನ ಶುರು ಆಗುವ ಸಾಧ್ಯತೆ
ಕೋವಿಡ್ -19 ರ ಕಾರಣದಿಂದಾಗಿ ಜಾರಿಗೆ ಬಂದ ಲಾಕ್‌ಡೌನ್‌ನ (Lockdown) ಮೊದಲ ಕೆಲವು ವಾರಗಳಲ್ಲಿ, ತಂತ್ರಜ್ಞಾನ ಉದ್ಯಮದಲ್ಲಿನ ಶೇ.90 ರಷ್ಟು ಜನರು ಮನೆಯಿಂದ ಕೆಲಸ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಮತ್ತು ಇಂದಿಗೂ ಶೇ. 90ಕ್ಕೂ ಹೆಚ್ಚು ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಮಿಶ್ರ ಮಾದರಿಯ ಪ್ರಯೋಜನಗಳನ್ನು ಸರ್ಕಾರ ಮತ್ತು ಐಟಿ ಉದ್ಯಮವು ಶಾಶ್ವತವಾಗಿ ಸ್ವೀಕರಿಸಿದೆ, ಹೀಗಾಗಿ ಜನರು ಸಾಂಕ್ರಾಮಿಕ (Corona Pandemic) ರೋಗದ ನಂತರವೂ ಕೂಡ ಕಚೇರಿ ಮತ್ತು ಮನೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಪ್ರೇಮ್ಜಿ ಹೇಳಿದ್ದಾರೆ. ಇಂದು ತಂತ್ರಜ್ಞಾನವು ನಮಗೆ ಜೀವಸೆಲೆಯಾಗುತ್ತಿದೆ. ಕೆಲವು ಲೋಕೋಪಕಾರಿ ಕೆಲಸಗಳಲ್ಲಿ ಜನರು ಭಾಗಿಯಾಗಬೇಕೆಂದು ಅವರು ಮನವಿ ಮನವಿ ಮಾಡಿದ್ದಾರೆ ಮತ್ತು ಲೋಕೋಪಕಾರವು ಯಾವಾಗಲೂ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯದ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- ಇಡೀ ವಿಶ್ವಾದ್ಯಂತ ಬಳಕೆಯಾಗಲಿದೆ ಭಾರತದ ಈ Corona Vaccine, ಸಿಕ್ತು WHO ಅನುಮತಿ
ಈ ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೇಂದ್ರ ಹಣಕಾಸು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಕೇಂದ್ರ ಬಜೆಟ್ 2021-22, ಆರ್ಥಿಕ ಅಭಿವೃದ್ಧಿಗೆ ಸರ್ಕಾರದ ಪರವಾಗಿ ಖಾಸಗಿ ವಲಯಕ್ಕೆ ಅನುಕೂಲ ಕಲ್ಪಿಸುವ ಬಜೆಟ್ ಆಗಿದೆ ಎಂದು ಹೇಳಿದ್ದಾರೆ. ಅದು ಇಲ್ಲದಿದ್ದರೆ ದೇಶವು ಒಂದು ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿತ್ತು. ಇಲ್ಲಿ ಪ್ರಮುಖ ಅಂಶ ಅಥವಾ ಇನ್ಪುಟ್ ಖಾಸಗಿ ವಲಯದ ಭಾಗವಹಿಸುವಿಕೆ ಎಂದು ಸೀತಾರಾಮನ್ ಹೇಳಿದ್ದಾರೆ. ಖಾಸಗಿ ವಲಯವು ಸಾಕಷ್ಟು ಸಕ್ರಿಯವಾಗಿಲ್ಲದಿದ್ದರೆ, ಸಮರ್ಪಕವಾಗಿ ಅನುಕೂಲವಾಗದ ಹೊರತು, ಭಾರತವು ಒಂದು ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದೆ. ಹಣಕಾಸು ಸಚಿವರ ಪ್ರಕಾರ, ಕೊರೊನಾವೈರಸ್ ಲಸಿಕೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ- 'Made In India' Covid-19 ಲಸಿಕೆಯ ಕ್ಯೂನಲ್ಲಿವೆ ವಿಶ್ವದ 25 ರಾಷ್ಟ್ರಗಳು: ಜಯಶಂಕರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.