Shivarajkumar: `ನನ್ನ ಪತ್ನಿ ಸಂಸದೆ ಆಗಬೇಕು ಎಂಬ ಆಸೆಯಿದೆ`: ಸೆಂಚುರಿ ಸ್ಟಾರ್ ಮಾತು!
Shivarajkumar In Pressmeet: ಸ್ಯಾಂಡಲ್ವುಡ್ ಸೆಮಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಸಂಸದೆ ಆಗಬೇಕು ಎಂಬ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.
Shivarajkumar Talks About Politics: ಚಂದನವನದ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಸಚಿವ ಮಧು ಬಂಗಾರಪ್ಪ ಹುಟ್ಟು ಹಬ್ಬ ಹಿನ್ನೆಲೆ ಶಿವಮೊಗ್ಗಕ್ಕೆ ಭೇಟಿ ನೀಡಿ, ಅಲ್ಲಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಶಿವಣ್ಣ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿನ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಅದೇ ಸಮಯದಲ್ಲಿ ಶಿವಣ್ಣ ತಮ್ಮ ಹೆಂಡತಿ ಗೀತಾ ರಾಜಕೀಯವಾಗಿ ಬೆಳೆಯಬೇಕು. ಪತ್ನಿ ಸಂಸದೆ ಆಗಬೇಕು. ನನ್ನ ಪತ್ನಿ ಎಂಪಿ ಆಗಲಿ, ಎಂಎಲ್‌ಎ ಆಗಲಿ ಎಂಬ ಆಸೆಯಿದೆ ಎಂದು ತಮ್ಮ ಹೆಂಡತಿ ಗೀತಾ ಶಿವರಾಜ್‌ಮುಮಾರ್ ಬೆಂಬಲಿಸಿ ಮಾತನಾಡಿದ್ದಾರೆ.
ಇದನ್ನೂ ಓದಿ: Ram Charan: ವಿಮಾನದಲ್ಲಿ ಸುಸ್ತಾಗಿ ಮಲಗಿದ್ದ ಮಡದಿ ಕಾಲು ಒತ್ತಿದ ಗೇಮ್ ಚೇಂಜರ್: ವೈರಲ್ ವಿಡಿಯೋ !!
ಮತ್ತೆ ಶಿವರಾಜ್‌ಕುಮಾರ್ ರಾಜಕೀಯದ ಬಗ್ಗೆ ಮಾತನಾಡುತ್ತಾ ನಾನು ರಾಜಕೀಯಕ್ಕೆ ಬರುವುದಿಲ್ಲ. ಒಬ್ಬ ಗಂಡನಾಗಿ ನಾನು ಗೀತಾಗೆ ಬೆಂಬಲಿಸುತ್ತೇನೆ. ಗೀತಾ ಈಗಾಗಗಲೇ ಶಿವಮೊಗ್ಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಪ್ರಚಾರದ ಕಡೆ ಗಮನ ನೀಡಿಲ್ಲ. ತಮ್ಮ ಪತ್ನಿ ಉತ್ತಮ ಕೆಲಸಗಳ ಮೂಲಕ ಜನರೊಂದಿಗೆ ಇದ್ದರೆ ಸಾಕು ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.
ಇನ್ನೂ ಸೆಂಚುರಿ ಸ್ಟಾರ್ ಮಡದಿ ಗೀತಾ ಶಿವರಾಜ್ ಕುಮಾರ್ ಇವರ ಹೆಸರು ಸೇರಿದಂತೆ ಅನೇಕರ ಹೆಸರು ಪ್ರಸ್ತಾಪದಲ್ಲಿದ್ದು, ಈಗಗಲೇ ಇವರು ಪಕ್ಷದ ಕಾರ್ಯಕರ್ತೆಯಾಗಿದ್ದಾರೆ. ಕೇಂದ್ರದ ನಾಯಕರು ಅಭ್ಯರ್ಥಿಗಳ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಈ ಬಾರಿಯ ಚುನಾವಣೆ ನಿರ್ಣಾಯಕವಾಗಲಿದೆ. ಧರ್ಮ ಏನಿದ್ದರೂ ಮನೆಯಲ್ಲಿ ಇರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.