ನಾನು ಹುಟ್ಟಿದ್ದೇ ತಮಿಳುನಾಡಿನಲ್ಲಿ, ಅಲ್ಲಿಯೇ ಬೆಳೆದೆ..! ಶಿವಣ್ಣ ಮಾತಿಗೆ ನೆಟ್ಟಿಗರು ಗರಂ
Actor Shivarajkumar spoke tamil in Shivamogga : ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ತಮ್ಮ ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಬರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಕ್ಕ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಈ ವೇಳೆ ತಮಿಳುನಲ್ಲಿ ಮಾತನಾಡಿದ್ದ ಶಿವಣ್ಣ ನಡೆದೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
Shivarajkumar : ಪತ್ನಿ ಪರ ನಟ ಶಿವರಾಜ್‌ಕುಮಾರ್ ಪ್ರಚಾರ ಪ್ರಾರಂಭಿಸಿದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ಎದುರಿಸುತ್ತಲೇ ಇದ್ದಾರೆ. ಇದೀಗ ಶಿವಣ್ಣ ತಮಿಳು ಭಾಷೆಯಲ್ಲಿ ಮತಯಾಚನೆ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು.. ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಪತ್ನಿ ಗೀತಾ ಶಿವರಾಜ್‌ಕುಮಾರ್ ಪರ ಬರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಕ್ಕ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಶಿವಣ್ಣ ಹೇಗಾದರೂ ಮಾಡಿ ಪತ್ನಿಯನ್ನು ಗೆಲ್ಲಿಸು ಛಲ ತೊಟ್ಟಿದ್ದು, ಹಗಲು ಇರುಳು ಎನ್ನದೇ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ:ಹುಟ್ಟೂರಿನಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ಬಂದು ವೋಟ್ ಹಾಕಿದ ನಟರಾಕ್ಷಸ!
ಇತ್ತೀಚೆಗೆ ನಟ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ತಮಿಳಿನಲ್ಲಿ ಮಾತನಾಡಿದ್ದು ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದೆ. ಇಲ್ಲಿ ತಮಿಳಿನವರು ಜಾಸ್ತಿ ಇದ್ದಾರೆ ಅಂತ ಗೊತ್ತಾಯ್ತು. ನಾನು ಚೆನ್ನೈನಲ್ಲಿ ಹುಟ್ಟಿದೆ, ಅಲ್ಲಿಯೇ ಬೆಳೆದಿದ್ದೇನೆ. ನನ್ನ ಎಜುಕೇಷನ್ ಸಹ ಅಲ್ಲಿಯೇ ಮುಗಿದಿದೆ. ಡಾ. ರಾಜ್ಕುಮಾರ್ ಮಕ್ಕಳೆಲ್ಲರೂ ಚೆನ್ನೈನಲ್ಲಿಯೇ ಹುಟ್ಟಿದೆವು. ನಮಗೆ ಅಲ್ಲಿ ಮನೆ ಇತ್ತು ಎಂದರು.
ಅಲ್ಲದೆ, ಎಲ್ಲರೂ ಕನ್ನಡ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ..? ಅಂತ ಅಲ್ಲಿದ್ದ ತಮಿಳಿಗರಿಗೆ ಶಿವಣ್ಣ ಪ್ರಶ್ನೆ ಮಾಡಿದರು. ಆಗ ಅಲ್ಲಿದ್ದ ಎಲ್ಲರೂ ಕನ್ನಡ ಮಾತನಾಡುತ್ತೇವೆ ಎಂದರು. ತಮಿಳುನಾಡಿನಲ್ಲಿ ಇದ್ದಾಗ ನಾವು ತಮಿಳು ಮಾತನಾಡುತ್ತೇವೆ, ನೀವು ಇಲ್ಲಿದ್ದೀರಾ ಕನ್ನಡ ಮಾತನಾಡುತ್ತೀರಿ, ಎಲ್ಲಿ ಹೋದರೂ ಅಲ್ಲಿಯ ಭಾಷೆ ಕಲಿಯಬೇಕು ಗೌರವಿಸಬೇಕು ಎಂದು ಶಿವಣ್ಣ ಹೇಳಿದರು.
ಇದನ್ನೂ ಓದಿ: ಮತದಾನ ಮಾಡಿ ಹಕ್ಕು ಚಲಾಯಿಸಿದ ಸಿನಿರಂಗದ ತಾರೆಯರು!! ಪೋಟೋಸ್ ಇಲ್ಲಿವೆ
ಇನ್ನು ತಮಿಳು ಭಾಷೆಯಲ್ಲಿ ಶಿವರಾಜ್‌ಕುಮಾರ್ ಮಾತನಾಡಿದ್ದಕ್ಕೆ ಕೆಲ ನೆಟ್ಟಿಗರು ಕಿಡಿಕಾರಿದ್ದಾರೆ. ನಿಮಗೆ ಗೌರವ ಕೊಡುತ್ತೇವೆ ಶಿವಣ್ಣ, ಆದರೆ ವೊಟ್ ಕೊಡೊದಿಲ್ಲ ಅಂತ ಹೇಳುತ್ತಿದ್ದಾರೆ. ಇನ್ನೂ ಕೆಲವರು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ನೆಟ್ಟಿಗರು ಇದು ತಮಿಳುನಾಡು ಅಲ್ಲ ಕರ್ನಾಟಕ, ಇಲ್ಲಿ ಕನ್ನಡದಲ್ಲಿ ಮಾತಾಡಬೆಕು ಅಂತ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಕೆಲವರು, ಎಲ್ಲರನ್ನೂ ನಮ್ಮವರನ್ನಾಗಿ ಕಾಣಬೇಕು, ಆಯಾ ಪ್ರಾಂತ್ಯದ ಭಾಷೆಗೆ ಗೌರವಕೊಡಬೇಕು ಅಂತ ಹೇಳಿಕೊಟ್ಟಿದ್ದಂತೆ ಧನ್ಯವಾದ ಶಿವಣ್ಣ ಅಂತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.