ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ಎಂದಿಗೂ ನಾನು ಸ್ವೀಕರಿಸುವುದಿಲ್ಲ : ನಟ ಸಿದ್ಧಾರ್ಥ್
Siddharth on Shivarajkumar : ರಾಜ್ಯದಲ್ಲಿ ಕಾವೇರಿ ವಿವಾದದ ಕಿಚ್ಚು ಹೆಚ್ಚಿದ ಸಂದರ್ಭದಲ್ಲಿ, ತಮಿಳು ನಟ ಸಿದ್ದಾರ್ಥ್ ಅವರು ಚಿಕ್ಕು ಸಿನಿಮಾದ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಕನ್ನಡ ಪರ ಹೋರಾಟಗಾರು ವಿರೋಧಿಸಿ ಸಿದ್ಧಾರ್ಥ ಸುದ್ದಿಗೋಷ್ಠಿಯನ್ನು ಸ್ಥಗಿತಗೊಳಿಸುವಂತೆ ಪ್ರತಿಭಟಿಸಿದರು. ಈ ಘಟನೆಗೆ ಕನ್ನಡಿಗರ ಪರ ನಟ ಡಾ. ಶಿವರಾಜಕುಮಾರ್ ಮತ್ತು ಪ್ರಕಾಶ್ ರೈ ಕ್ಷಮೆಯಾಚಿಸಿದ್ದರು.
Actor siddharth : ಕಾಲಿವುಡ್ ನಟ ಸಿದ್ದಾರ್ಥ್ ತಮ್ಮ ಚಿಕ್ಕು ಸಿನಿಮಾ ಪ್ರಮೋಷನ್‌ಗಾಗಿ ಬೆಂಗಳೂರಿಗೆ ಬಂದ್ದರು. ಈ ವೇಳೆ ಕೆಲ ಕನ್ನಡ ಪರ ಹೋರಾಟಗಾರರು ಅವರ ಸಿನಿಮಾ ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಅದಕ್ಕೆ ನಟ ಡಾ. ಶಿವರಾಜ್‌ಕುಮಾರ್ ಮತ್ತು ಪ್ರಕಾಶ್ ರಾಜ್ ಕನ್ನಡಿಗರ ಪರ ಕ್ಷಮೆ ಕೇಳಿದ್ದರು. ಸದ್ಯ ಇದಕ್ಕೆ ನಟ ಸಿದ್ದಾರ್ಥ್ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ಸಿದ್ದಾರ್ಥ್ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಾಗ ಕನ್ನಡ ಪರ ಹೋರಾಟಗಾರರು ಅವರಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಂಚುರಿ ಸ್ಟಾರ್ ಶಿವಣ್ಣ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ಬಹಿರಂಗವಾಗಿ ಕ್ಷಮೆ ಕೇಳಿದರು. ಇದಕ್ಕೆ ಇಲ್ಲಿಯವರೆಗೂ ಸಿದ್ದಾರ್ಥ್ ರೆಸ್ಪಾನ್ಸ್ ನೀಡಿರಲಿಲ್ಲ. ಸದ್ಯ ಚಿಕ್ಕು ಸಿನಿಮಾದ ಸಕ್ಸಸ್ ಇವೆಂಟ್ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ:ಜೀವಂತ ಸಮಾಧಿ ಸ್ಥಿತಿಯಲ್ಲಿ ನಟಿ ತಮನ್ನಾ : ಮಿಲ್ಕಿ ಬ್ಯೂಟಿ ಸ್ಥಿತಿ ನೋಡಿ ಫ್ಯಾನ್ಸ್ ಗಾಬರಿ
'ಚಿಕ್ಕು' ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ನಟ ಸಿದ್ಧಾರ್ಥ್ ಮಾತನಾಡುತ್ತ ಇದು ನಾನೇ ನಟಿಸಿ, ನಿರ್ಮಿಸಿದ ಸಿನಿಮಾ. ಎರಡು ವರ್ಷಗಳ ಶ್ರಮ. ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ವಾರದ ಬಳಿಕ ಎರಡನೇ ವಾರವೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಾನು ಇಲ್ಲಿ ಯಾವುದೇ ರಾಜಕೀಯ ಮಾತಾಡುವುದಕ್ಕೆ ಬಂದಿಲ್ಲ. ಕಾವೇರಿ ವಿಚಾರವಾಗಿ ನನ್ನನ್ನು ಕೇಳಬೇಡಿ. ನನಗೆ ನನ್ನ ಸಿನಿಮಾ ಮುಖ್ಯ ಎಂದರು.
ಅಲ್ಲದೆ, ಕರ್ನಾಟಕದಲ್ಲಿ ಚಿಕ್ಕು ಸಿನಿಮಾ ಪ್ರಚಾರ ಮಾಡಲಿ ಅನುಮತಿ ಪಡೆದಿದ್ದೆ. ಅಂದು ಅಲಲ್ಲಿ ಬಂದ್ ಇರಲಿಲ್ಲ. ಮರುದಿನ ಬಂದ್‌ಗೆ ಘೋಷಣೆ ಮಾಡಲಾಗಿತ್ತು. ಆದ್ದರಿಂದ ನಾನು ಪತ್ರಿಕಾಗೋಷ್ಠಿ ಮಾಡಿದೆ. ನಾನು ಮಾಡಿದ ಸಿನಿಮಾವನ್ನು ಜನರಿಗೆ ತಲುಪಿಸುವ ಕಾರಣದಿಂದ ನಾನು ಪ್ರೆಸ್‌ಮೀಟ್ ಮಾಡಿದೆ ಅಂತ ತಿಳಿಸಿದರು.
ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಂದ ‘ಲವ್ ಯೂ ಶಂಕರ್’ ಚಿತ್ರದ ‘ಓಂ ನಮಃ ಶಿವಾಯ’ ಹಾಡು ಬಿಡುಗಡೆ
ಈ ವೇಳೆ ಶಿವಣ್ಣ ಮತ್ತೆ ಪ್ರಕಾಶ್ ರಾಜ್ ಕ್ಷಮೆ ಕೇಳಿರುವುದರ ಬಗ್ಗೆ ಮಾತನಾಡಿ, ನಟ ಶಿವರಾಜ್‌ಕುಮಾರ್ ಸರ್, ಪ್ರಕಾಶ್ ರಾಜ್ ಸರ್ ದೊಡ್ಡವರು. ಅವರಿಗೂ ಈ ಘಟನೆಗೂ ಸಂಬಂಧವಿಲ್ಲ. ಅವರಿಬ್ಬರೂ ಕ್ಷಮೆ ಕೇಳುವ ಅಗತ್ಯವಿಲ್ಲ. ಶಿವರಾಜ್‌ಕುಮಾರ್ ಸರ್ ಹಾಗೂ ಪ್ರಕಾಶ್ ರಾಜ್ ಸರ್ ಕ್ಷಮೆಯನ್ನು ನಾನು ಎಂದಿಗೂ ಸ್ವೀಕರಿಸುವುದಿಲ್ಲ. ನನ್ನ ಸಿನಿಮಾವನ್ನು ಕನ್ನಡಿಗರು ಕೂಡ ವೀಕ್ಷಿಸಿ ಇಷ್ಟ ಪಡುತ್ತಿದ್ದಾರೆ. ಕನ್ನಡ ಸಿನಿಮಾರಂಗದಿಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಕೇವಲ ಸಂಘಟನೆಯ 10 ಮಂದಿ ಬಂದು ಬೆದರಿಕೆ ಹಾಕಿದ್ದಾರೆ. ಅದು ಅವರ ಸಮಸ್ಯೆ ಹೊರತು ಬೇರೇನೂ ಅಲ್ಲ ಎಂದು ನಟ ಸಿದ್ಧಾರ್ಥ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.