ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇದೇ ವಾರ ಸುದೀಪ್‌ ಸಿನಿಮಾ ರಿಲೀಸ್‌ ಅಗುತ್ತಿದೆ. ಸುದೀಪ್ ಅಭಿನಯದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದ್ದು, ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ. 


COMMERCIAL BREAK
SCROLL TO CONTINUE READING

ನಟ ಸುದೀಪ್‌ ಅವರನ್ನು ದೊಡ್ಡ ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಈಗ ಫುಲ್‌ ಥ್ರಿಲ್‌ ಆಗಿದ್ದಾರೆ. ಕೊನೆಗೂ ಬಹುದಿನಗಳ ಬಳಿಕ ಮತ್ತೆ ಸುದೀಪ್‌ ಸಿನಿಮಾ ಬೆಳ್ಳಿ ತೆರೆಗೆ ಬರುತ್ತಿದೆ. ಸುದೀಪ್‌ ಸಿನಿಮಾ ಅಂದಾಕ್ಷಣ ಮ್ಯಾಕ್ಸ್ ಎಂದುಕೊಂಡಿದ್ರೆ ನಿಮ್ಮ ಊಹೆ ತಪ್ಪು. ಈ ವಾರ ರಿಲೀಸ್‌ಆಗಲಿರುವ ಸುದೀಪ್‌ ಸಿನಿಮಾ ಮ್ಯಾಕ್ಸ್‌ ಅಲ್ಲ. 


ಇದನ್ನೂ ಓದಿ: Anchor Anushree Marriage: ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು ಗೊತ್ತೇ!


ಈ ಸಿನಿಮಾದಲ್ಲಿ ಸುದೀಪ್ ಹೇರ್ ಸ್ಟೈಲ್ ಸೂಪರ್ ಆಗಿತ್ತು.‌ ಅದೆಷ್ಟೋ ಜನ ಆ ಸಮಯದಲ್ಲಿ ಇದೇ ಸ್ಟೈಲ್‌ ಮಾಡಿಸಿಕೊಂಡಿದ್ದರು. 2017 ರಲ್ಲಿ ಬಂದಿದ್ದ ಈ ಚಿತ್ರವನ್ನ ಜನ ಮನಸಾರೆ ಮೆಚ್ಚಿಕೊಂಡಿದ್ದರು. ಸುದೀಪ್ ಈ ಸಿನಿಮಾದಲ್ಲಿ ಪ್ಯಾರಾ ಮಿಲಿಟರಿ ಕಮಾಂಡೋ ಆಗಿ ನಟಿಸಿದ್ದರು. 


ಇದೇ ಸಿನಿಮಾದಲ್ಲಿ ಸುದೀಪ್ ಅಣ್ಣನ ಪಾತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ನಟಿಸಿದ್ದರು. ಈ ಸಿನಿಮಾಗೆ ಡೈರೆಕ್ಟರ್ ಕೃಷ್ಣ ಆಕ್ಷನ್‌ ಕಟ್‌ ಹೇಳಿದ್ದರು. ಈ ಚಿತ್ರ 2017 ಫೆಬ್ರವರಿ 23 ರಂದು ರಿಲೀಸ್ ಆಗಿತ್ತು. ಈಗ ಗೊತ್ತಾಗಿರಬೇಕಲ್ಲ ಯಾವ ಸಿನಿಮಾ ಅಂತ.


ಇದನ್ನೂ ಓದಿ: ಭಾರತದ ಶ್ರೀಮಂತ ನಟಿ... ಪತಿಗಿಂತ ಮೂರು ಪಟ್ಟು ಹೆಚ್ಚು ಆಸ್ತಿ ಹೊಂದಿರುವ ಆ ಸ್ಟಾರ್‌ಹೀರೋಯಿನ್‌ 


ಹೌದು, ನಟ ಸುದೀಪ್‌ ಅಭಿನಯದ ಹೆಬ್ಬುಲಿ ಚಿತ್ರ ಇದೀಗ ಮತ್ತೆ ರಿಲೀಸ್‌ ಆಗುತ್ತಿದೆ. ಹೆಬ್ಬುಲಿ ಚಿತ್ರ ಬಂದು ಏಳು ವರ್ಷ ಕಳೆದಿವೆ. ಈ ಹಿನ್ನೆಲೆಯಲ್ಲಿ ಹೆಬ್ಬುಲಿ ಚಿತ್ರ ರೀ-ರಿಲೀಸ್ ಆಗಲಿದೆ. ಅದಕ್ಕೂ ಹೆಚ್ಚಾಗಿ ಕಿಚ್ಚ ಸುದೀಪ್ ಅಭಿನಯದ ಒಂದೇ ಒಂದು ಸಿನಿಮಾ ಕಳೆದ ಎರಡು ವರ್ಷದಿಂದ ರಿಲೀಸ್ ಆಗಿಯೆ ಇಲ್ಲ. ಇಂಥ ಸಮಯದಲ್ಲಿ ಹೆಬ್ಬುಲಿ ರೀ-ರಿಲೀಸ್ ಆಗುತ್ತಿರುವುದು ಅವರ ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ. ಹೆಬ್ಬುಲಿ ಸಿನಿಮಾ ಆಗಸ್ಟ್ 02 ರಂದು ರೀ-ರಿಲೀಸ್ ಆಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.