ಭಾರತದ ಶ್ರೀಮಂತ ನಟಿ... ಪತಿಗಿಂತ ಮೂರು ಪಟ್ಟು ಹೆಚ್ಚು ಆಸ್ತಿ ಹೊಂದಿರುವ ಆ ಸ್ಟಾರ್‌ಹೀರೋಯಿನ್‌ ಇವರೇ.!

India richest actress: ಭಾರತದಲ್ಲಿ ಅನೇಕ ನಾಯಕಿಯರಿದ್ದಾರೆ. ಕೋಟಿ ಕೋಟಿ ಸಂಭಾವನೆ ಪಡೆಯುವ ಹೀರೋಯಿನ್‌ಗಳಿದ್ದಾರೆ. ಆದರೆ ಅದರಲ್ಲಿ ಶ್ರೀಮಂತ ನಾಯಕಿ ಯಾರು ಗೊತ್ತಾ? ಮದುವೆಯಾದ ಗಂಡನಿಗಿಂತ ಶ್ರೀಮಂತೆ ಈ ನಟಿ..

Written by - Chetana Devarmani | Last Updated : Jul 30, 2024, 04:48 PM IST
  • ಕೋಟಿ ಕೋಟಿ ಸಂಭಾವನೆ ಪಡೆಯುವ ಹೀರೋಯಿನ್‌
  • ಭಾರತದ ಶ್ರೀಮಂತ ನಾಯಕಿ ಯಾರು ಗೊತ್ತಾ?
  • ಮದುವೆಯಾದ ಗಂಡನಿಗಿಂತ ಶ್ರೀಮಂತೆ ಈ ನಟಿ
ಭಾರತದ ಶ್ರೀಮಂತ ನಟಿ... ಪತಿಗಿಂತ ಮೂರು ಪಟ್ಟು ಹೆಚ್ಚು ಆಸ್ತಿ ಹೊಂದಿರುವ ಆ ಸ್ಟಾರ್‌ಹೀರೋಯಿನ್‌ ಇವರೇ.!  title=

Richest actress in India: ಚಿತ್ರರಂಗದಲ್ಲಿ ನಾಯಕಿಯರ ಬೇಡಿಕೆ ಕೂಡ ಹೆಚ್ಚುತ್ತಿದೆ. ಸಂಭಾವನೆ ವಿಚಾರದಲ್ಲೂ ಅನೇಕ ನಟಿಯರು ನಟರನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ. ಸ್ಟಾರ್ ಹೀರೋಯಿನ್ ಗಳು 10 ರಿಂದ 20 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಕೋಟಿ ಕೋಟಿ ಆಸ್ತಿಯ ಒಡತಿಯಾಗುತ್ತಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಈ ನಟಿ ತನ್ನ ಗಂಡನಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ.   

ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್‌ ಭಾರತದ ಅತ್ಯಂತ ಶ್ರೀಮಂತ ನಟಿ. ಅಮಿತಾಬ್‌ ಬಚ್ಚನ್ ಅವರ ಸೊಸೆಯಾಗಿ, ಅಭಿಷೇಕ್ ಬಚ್ಚನ್‌ ಅವರ ಪತ್ನಿಯಾಗಿರುವ ಐಶ್ವರ್ಯಾ ರೈ ಕೋಟಿಗಟ್ಟಲೆ ಆಸ್ತಿಗೆ ಒಡತಿಯಾಗಿದ್ದಾರೆ.   

ಇದನ್ನೂ ಓದಿ: Janhvi Kapoor: "ನಾನು ಅಭಿಷೇಕ್ ಬಚ್ಚನ್ ಮೊದಲ ಪತ್ನಿ" ಎಂದ ನಟಿ ಜಾನ್ವಿ ಕಪೂರ್...‌ ಬಚ್ಚನ್ ನಿವಾಸದ ಎದುರು ಬಿಗ್‌ ಹಂಗಾಮ!

ಐಶ್ವರ್ಯಾ ರೈ ಅವರ ಒಟ್ಟು ಆಸ್ತಿ ಸುಮಾರು 900 ಕೋಟಿ ಎಂದು ಅಂದಾಜಿಸಲಾಗಿದೆ. ಭಾರತದ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಐಶ್ವರ್ಯಾ ರೈ ಬಚ್ಚನ್‌ ಅಗ್ರಸ್ಥಾನದಲ್ಲಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ  ಎರಡನೇ ಅತ್ಯಂತ ಶ್ರೀಮಂತ ನಟಿಯಾಗಿದ್ದು 700 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ನಟಿ ಆಲಿಯಾ ಭಟ್ ಸೀನಿಯರ್ ಹೀರೋಯಿನ್ ಗಳಿಗೆ ಪೈಪೋಟಿ ನೀಡುತ್ತಿದ್ದು, ಅವರ ಆಸ್ತಿ ಸುಮಾರು 600 ಕೋಟಿ ಆಗಿದೆ. ದೀಪಿಕಾ ಪಡುಕೋಣೆ 500 ಕೋಟಿ, ಕರೀನಾ ಕಪೂರ್ 485 ಕೋಟಿ, ಕತ್ರಿನಾ ಕೈಫ್ 300 ಕೋಟಿ, ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ನಿವ್ವಳ ಆಸ್ತಿ 200 ಕೋಟಿ ಆಸ್ತಿ ಹೊಂದಿದ್ದಾರೆ. 

ಐಶ್ವರ್ಯಾ ಚಿತ್ರಗಳ ಜೊತೆಗೆ ಬ್ರಾಂಡ್‌ಗಳನ್ನು ಪ್ರಚಾರ ಮಾಡುವ ಮೂಲಕ ಹಣ ಸಂಪಾದಿಸುತ್ತಾರೆ. ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡಲು ಅವರು ಒಂದೇ ಚಿತ್ರೀಕರಣಕ್ಕೆ 7 ಕೋಟಿಗಳವರೆಗೆ ಶುಲ್ಕ ವಿಧಿಸುತ್ತಾರೆ ಎಂದು ಹೇಳಲಾಗುತ್ತದೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಐಶ್ವರ್ಯಾ ರೈ ಅವರು ಬಾಲಿವುಡ್ ನಟ ಪತಿ ಅಭಿಷೇಕ್ ಬಚ್ಚನ್‌ಗಿಂತ ಮೂರು ಪಟ್ಟು ಹೆಚ್ಚು ಹಣವನ್ನು ಗಳಿಸಿದ್ದಾರೆ. ಅಭಿಷೇಕ್ ಹೆಸರಿನಲ್ಲಿ 300 ಕೋಟಿ ರೂ. ಆಸ್ತಿ ಇದೆ ಎನ್ನಲಾಗಿದ್ದು, ಆದರೆ ಐಶ್ವರ್ಯಾ ಆಸ್ತಿ 900 ಕೋಟಿ ರೂ. ಆಗಿದೆ. 

ಇದನ್ನೂ ಓದಿ: ನನ್ನ ಬಾಡಿ.. ನಾನು ಹೀಗೆಯೇ ಶೋ ಆಫ್‌ ಮಾಡ್ತೀನಿ: ನಟಿ ಅನಸೂಯ ಸೆನ್ಸೇಷನಲ್‌ ಕಾಮೆಂಟ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News