ನವದೆಹಲಿ: ನಟ ವಿಕ್ಕಿ ಕೌಶಲ್ ಅವರು ಕತ್ರಿನಾ ಕೈಫ್ ಜೊತೆಗಿನ ನಿಶ್ಚಿತಾರ್ಥದ ವಿಚಾರವಾಗಿ ಕೊನೆಗೂ ಮೌನ ಮುರಿದಿದ್ದಾರೆ,ಈಗ ಅವರು ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.


COMMERCIAL BREAK
SCROLL TO CONTINUE READING

ವಿಜಿ ಕೌಶಲ್ (Vicky Kaushal) ಪ್ರಸ್ತುತ ಶೂಜಿತ್ ಸಿರ್ಕಾರ್ ನಿರ್ದೇಶನದ 'ಸರ್ದಾರ್ ಉಧಮ್' ನಲ್ಲಿ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್ ಪಾತ್ರದಲ್ಲಿ ಅವರ ಅತ್ಯುತ್ತಮ ಅಭಿನಯಕ್ಕಾಗಿ ಪ್ರಮುಖ ಸುದ್ದಿಯಲ್ಲಿದ್ದಾರೆ.


ಇದನ್ನೂ ಓದಿ: Katrina Kaif ಜೊತೆಗಿನ ನಿಶ್ಚಿತಾರ್ಥದ ಬಗ್ಗೆ Vicky Kaushal ತಂದೆ ಹೇಳಿದ್ದೇನು ಗೊತ್ತೇ ?


ಇತ್ತೀಚೆಗೆ, ವಿಕಿ ಅವರನ್ನು ಕತ್ರಿನಾ ಕೈಫ್ ಜೊತೆಗಿನ ತನ್ನ ರೊಕಾ ಸಮಾರಂಭದ ವದಂತಿಗಳ ಬಗ್ಗೆ ಕೇಳಲಾಯಿತು ಇದಕ್ಕೆ ಅವರು ಇದು ಎಲ್ಲಾ ಮಾಧ್ಯಮ ಸೃಷ್ಟಿ ಎಂದು ನಟ ಉತ್ತರಿಸಿದರು.ಪ್ರಮುಖ ದಿನಪತ್ರಿಕೆಯೊಂದಿಗೆ ಮಾತನಾಡುತ್ತಾ, ವಿಕಿ "ಈ ಸುದ್ದಿಯನ್ನು ನಿಮ್ಮ ಸ್ನೇಹಿತರು ಪ್ರಸಾರ ಮಾಡಿದ್ದಾರ.ಸಮಯ ಸಿಕ್ಕಾಗ ನಾನು ಬೇಗನೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆ.ಅದಕ್ಕೂ ಸಮಯ ಬರುತ್ತದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ICC T20 World Cup 2021: ಗವಾಸ್ಕರ್, ಕಪಿಲ್ ದೇವ್ ಗೆ ಮಸಾಜ್ ಮಾಡಿದ ಶೋಯಬ್ ಅಖ್ತರ್..!


ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ, ವಿಕಿ ಮತ್ತು ಕತ್ರಿನಾ ಎರಡು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ದಂಪತಿಗಳು ಸಾಮಾನ್ಯವಾಗಿ ಡಿನ್ನರ್  ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ. 2020 ರಲ್ಲಿ, ವಿಕಿ ಮತ್ತು ಕತ್ರಿನಾ ಒಟ್ಟಿಗೆ ದೀಪಾವಳಿಯನ್ನು ಆಚರಿಸಿದ್ದರು ಮತ್ತು ಕತ್ರೀನಾ ಅವರನ್ನು ವಿಕ್ಕಿಯ ನಿವಾಸದ ಹೊರಗೆ ಇರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.ಆದರೆ ವಿಕಿ ಅಥವಾ ಕತ್ರಿನಾ ಮಾತ್ರ ತಮ್ಮ ಸಂಬಂಧದ ಬಗ್ಗೆ ಇದುವರೆಗೂ ಬಹಿರಂಗವಾಗಿ ಧೃಡಪಡಿಸಿಲ್ಲ.


ಇದನ್ನೂ ಓದಿ :ನ್ಯೂಜಿಲೆಂಡ್ ಪಾಕಿಸ್ತಾನದ ಕ್ರಿಕೆಟ್ ನ್ನು ಕೊಲೆಗೈದಿದೆ- ಶೋಯಬ್ ಅಖ್ತರ್


ಕೆಲವು ತಿಂಗಳ ಹಿಂದೆ, ವಿಕ್ಕಿಯ ಸಹೋದರ ಸನ್ನಿ ಕೌಶಲ್ ತನ್ನ ಅಣ್ಣನ ನಿಶ್ಚಿತಾರ್ಥದ ಕುರಿತು ಮಾತನಾಡುತ್ತಾ. "ವಿಕಿ ವದಂತಿಗಳು ಬರಲು ಆರಂಭಿಸಿದಾಗ ಬೆಳಿಗ್ಗೆ ವಿಕಿ ಜಿಮ್‌ಗೆ ಹೋಗಿದ್ದರು ಎಂದು ನನಗೆ ನೆನಪಿದೆ. ಹಾಗಾಗಿ, ಅವರು ಮನೆಗೆ ಹಿಂದಿರುಗಿದಾಗ, ತಾಯಿ ಮತ್ತು ತಂದೆ ತಮಾಷೆಯಾಗಿ ಅವರನ್ನು‘ಅರೆ ಯಾರ್, ತೇರಿ ನಿಶ್ಚಿತಾರ್ಥ ಹೋ ಗಯಿ, ಮಿಥಾಯಿ ತೋ ಖಿಲಾ ದೇ ಎಂದು ಕೇಳಿದ್ದರು ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ


 


.