Katrina Kaif ಜೊತೆಗಿನ ನಿಶ್ಚಿತಾರ್ಥದ ಬಗ್ಗೆ Vicky Kaushal ತಂದೆ ಹೇಳಿದ್ದೇನು ಗೊತ್ತೇ ?

ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರ ನಿಶ್ಚಿತಾರ್ಥದ ವದಂತಿ ಬಗ್ಗೆ ಅಂತರ್ಜಾಲವು ಹಾಸ್ಯಮಯವಾದ ಮೀಮ್‌ ಗಳಿಂದ ತುಂಬಿದೆ.

Written by - Zee Kannada News Desk | Last Updated : Aug 19, 2021, 04:40 PM IST
  • ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರ ನಿಶ್ಚಿತಾರ್ಥದ ವದಂತಿ ಬಗ್ಗೆ ಅಂತರ್ಜಾಲವು ಹಾಸ್ಯಮಯವಾದ ಮೀಮ್‌ ಗಳಿಂದ ತುಂಬಿದೆ.
  • ಕತ್ರಿನಾ ಈ ಹಿಂದೆ ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ಮೂಲಕ ಸುದ್ದಿಯಲ್ಲಿದ್ದರು.
  • ಆದರೆ ಈಗ ಅವರು ವಿಕ್ಕಿ ಕೌಶಾಲ್ (Vicky Kaushal) ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ.
Katrina Kaif ಜೊತೆಗಿನ ನಿಶ್ಚಿತಾರ್ಥದ ಬಗ್ಗೆ Vicky Kaushal ತಂದೆ ಹೇಳಿದ್ದೇನು ಗೊತ್ತೇ ? title=

ಮುಂಬೈ: ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರ ನಿಶ್ಚಿತಾರ್ಥದ ವದಂತಿ ಬಗ್ಗೆ ಅಂತರ್ಜಾಲವು ಹಾಸ್ಯಮಯವಾದ ಮೀಮ್‌ ಗಳಿಂದ ತುಂಬಿದೆ.

ಕತ್ರಿನಾ ಈ ಹಿಂದೆ ಸಲ್ಮಾನ್ ಖಾನ್ ಜೊತೆಗಿನ ಡೇಟಿಂಗ್ ಮೂಲಕ ಸುದ್ದಿಯಲ್ಲಿದ್ದರು.ಆದರೆ ಈಗ ಅವರು ವಿಕ್ಕಿ ಕೌಶಾಲ್ (Vicky Kaushal) ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ. ಆದರೆ ಈಗ ಕತ್ರಿನಾ ತಂಡವು ಯಾವುದೇ ರಹಸ್ಯ ರೋಕಾ ಸಮಾರಂಭದ ವರದಿಗಳನ್ನು ನಿರಾಕರಿಸಿದೆ.ಇನ್ನೊಂದೆಡೆಗೆ ವಿಕ್ಕಿ ತಂದೆ ಶಾಮ್ ಕೌಶಾಲ್ ಕೂಡ ಈ ಸುದ್ದಿಯನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ:-ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಮೂರು ಲಕ್ಷ ದಂಡ ಹಾಕಿದ SEBI

ನಟ- ನತಿಯರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾಕಷ್ಟು ರಹಸ್ಯವಾಗಿದ್ದರೂ, ಹಿಂದಿನ ವರದಿಗಳು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ಇಬ್ಬರೂ ಕಾತರದಿಂದ ಕಾಯುತ್ತಿದ್ದಾರೆ ಎಂದು ಸೂಚಿಸಿತ್ತು.ಈ ವರ್ಷದ ಅಂತ್ಯದ ವೇಳೆಗೆ ಕತ್ರಿನಾ ಮತ್ತು ವಿಕಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Watch: Super Dancer Chapter 4 ಸೆಟ್ ಗೆ ಎಂಟ್ರಿ ಕೊಟ್ಟ ಶಿಲ್ಪಾಶೆಟ್ಟಿ ..!

ಸೋನಮ್ ಕಪೂರ್ ಸಹೋದರ ಮತ್ತು ನಟ ಹರ್ಷ ವರ್ಧನ್ ಕಪೂರ್ ಕತ್ರಿನಾ ಮತ್ತು ವಿಕ್ಕಿಯ ಸಂಬಂಧದ ಬಗ್ಗೆ ಧೃಢಪಡಿಸಿದಾಗ ಅವರ ಈ ಮದುವೆ ಕುರಿತಾದ ವದಂತಿಗಳು ಹರಡಿದವು.ಜೂಮ್ಸ್ ಬೈ ಇನ್ವೈಟ್ ಓನ್ಲಿ ನಲ್ಲಿ ಹರ್ಷವರ್ಧನ್ ಅವರು ಯಾವ ಬಾಲಿವುಡ್ ಸಂಬಂಧದ ವದಂತಿಯನ್ನು ನಿಜವೆಂದು ನಂಬುತ್ತಾರೆ ಎಂದು ಪ್ರಶ್ನಿಸಿದರು, ಅದಕ್ಕೆ ಅವರು  "ವಿಕ್ಕಿ ಮತ್ತು ಕತ್ರಿನಾ ಒಟ್ಟಿಗೆ ಇದ್ದಾರೆ, ಅದು ನಿಜ ... ನಾನು ತೊಂದರೆಗೆ ಸಿಲುಕಲಿದ್ದೇನೆ ಇದನ್ನು ಹೇಳಿದ್ದಕ್ಕಾಗಿ? ನನಗೆ ಗೊತ್ತಿಲ್ಲ. ಅವರು ಅದರ ಬಗ್ಗೆ ಸಾಕಷ್ಟು ಮುಕ್ತರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದರು.ಆದಾಗ್ಯೂ, ಈ ವದಂತಿಯ ಬಗ್ಗೆ ಲವ್ ಬರ್ಡ್ಸ್ ಮಾಧ್ಯಮಗಳಿಗೆ ತಮ್ಮ ಸಂಬಂಧದ ಸ್ಥಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-ಜಮೀನು ಖರೀದಿ ವಿಚಾರದಲ್ಲಿ ಶಿಲ್ಪಾ ಶೆಟ್ಟಿ ತಾಯಿಗೂ ಮೋಸ; ಕೋರ್ಟ್ ಮೆಟ್ಟಿಲೇರಿದ ಸುನಂದಾ ಶೆಟ್ಟಿ

ಏತನ್ಮಧ್ಯೆ, ಕತ್ರಿನಾ ಮತ್ತು ಸಲ್ಮಾನ್ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಳಿಸಲಾದ ಸ್ಪೈ ಥ್ರಿಲ್ಲರ್ ಟೈಗರ್ 3 ರ  ಚಿತ್ರೀಕರಣಕ್ಕಾಗಿ ರಷ್ಯಾಕ್ಕೆ ಹಾರಿದ್ದಾರೆ. ಸಲ್ಮಾನ್ ಮತ್ತು ಕತ್ರಿನಾ ಆಸ್ಟ್ರಿಯಾ ಮತ್ತು ಟರ್ಕಿ ಸೇರಿದಂತೆ ಕನಿಷ್ಠ 5 ಅಂತರಾಷ್ಟ್ರೀಯ ಸ್ಥಳಗಳಲ್ಲಿನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಇನ್ನೊಂದೆಡೆಗೆ ವಿಕ್ಕಿ ಮುಂಬರುವ ಚಿತ್ರಗಳಲ್ಲಿ ಶಶಾಂಕ್ ಖೈತಾನ್ ಅವರ ಮಿಸ್ಟರ್ ಲೆಲೆ, ಶೂಜಿತ್ ಸಿರ್ಕಾರ್ ಅವರ ಸರ್ದಾರ್ ಉಧಮ್ ಸಿಂಗ್, ಕರಣ್ ಜೋಹರ್ ಅವರ ತಖ್ತ್, ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್ ಮತ್ತು ಆದಿತ್ಯ ಧರ್ ಅವರ ನಿರ್ದೇಶನದ ಅಶ್ವತ್ಥಾಮನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

Trending News