ಬೆಂಗಳೂರು : ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅದರಲ್ಲೂ ನಟಿ ಅಮೂಲ್ಯ ಅಭಿಮಾನಿಗಳ ಪಾಲಿಗೆ ಇದು ಡಬಲ್ ಧಮಾಕ ಅಂತಾನೆ ಹೇಳಬಹುದು. ಒಂದು ಕಡೆ ಶಿವರಾತ್ರಿ ಸಂಭ್ರಮ ಮೇಳೈಸುತ್ತಿದ್ದರೆ, ಮತ್ತೊಂದು ಕಡೆ ನಟಿ ಅಮೂಲ್ಯ (Amulya) ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಟಿ ಅಮೂಲ್ಯ (Actress Amulya) ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ವಿಚಾರವನ್ನು ಅಮೂಲ್ಯ ಪತಿ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ (Social media) ಶೇರ್ ಮಾಡಿದ್ದಾರೆ. ಇಂದು ಬೆಳಗ್ಗೆ 11.45ಕ್ಕೆ ನಟಿ ಅಮೂಲ್ಯ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡೆಲಿವರಿ ಆಗಿದ್ದು, ತಾಯಿ ಮತ್ತು ಮಕ್ಕಳು ಅರೋಗ್ಯವಾಗಿದ್ದಾರೆ (Amulya Delivery).


ಇದನ್ನು ಕುಡಿದು ಆರಾಮಾಗಿರಿ ಎಂದ ಕಿರಿಕ್​ ಬೆಡಗಿ.. ಮದ್ವೆ ಟ್ರೋಲ್ಸ್​ಗೆ ರಶ್ಮಿಕಾ ಕೊಟ್ರಾ ರಿಯಾಕ್ಷನ್!?


ಬಾಲ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ನಟಿ ಅಮೂಲ್ಯ, ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದರು. ಎಸ್.ನಾರಾಯಣ್ ನಿರ್ದೇಶನದ 'ಚೆಲುವಿನ ಚಿತ್ತಾರ' ಸಿನಿಮಾ ಮೂಲಕ ಫುಲ್ ಟೈಂ ನಾಯಕಿಯಾಗಿ ಕನ್ನಡ ಸಿನಿಮಾ ರಂಗಕ್ಕೆ (Kannada film industry) ರೀ ಎಂಟ್ರಿಕೊಟ್ಟ ಅಮೂಲ್ಯ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ತಮ್ಮ ಅತ್ಯುತ್ತಮ ಅಭಿನಯ ಹಾಗೂ ಗ್ಲ್ಯಾಮರ್ ನಿಂದ ಕೋಟಿ ಕೋಟಿ ಪ್ರೇಕ್ಷಕರ ಮನ ಗೆದ್ದಿದ್ದರು.


ಇದೀಗ ನಟಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು ಅವರ ಅಭಿಮಾನಿ ಬಳಗಕ್ಕೆ ಸಂಭ್ರಮ ತಂದಿದೆ. ಹಾಗೇ ಶಿವರಾತ್ರಿಯ (Shivaratri) ಈ ಶುಭ ಸಂದರ್ಭದಲ್ಲೇ ಅಮೂಲ್ಯ ಅವರ ಮನೆಗೆ ಹೊಸ ಸದಸ್ಯರ ಎಂಟ್ರಿಯಾಗಿದೆ.


ಇದನ್ನೂ ಓದಿ : James Trademark Song: ಪವರ್ ಸ್ಟಾರ್ ಸಾಂಗ್, ಪವರ್ ಫುಲ್ ರಿಲೀಸ್..! ಹೇಗಿದೆ 'ಜೇಮ್ಸ್' ಹಾಡು..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.