ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ.. Baby bump ಪೋಟೋ ಹಂಚಿಕೊಂಡ ತಾರೆ

Amulya: ಚೆಲುವಿನ ಚಿತ್ತಾರ ಖ್ಯಾತಿಯ ಕನ್ನಡ ನಟಿ ಅಮೂಲ್ಯ ( Amulya) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸುದ್ದಿಯನ್ನು ಅಭಿಮಾನಿಗಳಿಗೆ ಇನ್ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

Edited by - ZH Kannada Desk | Last Updated : Dec 2, 2021, 12:21 PM IST
  • ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ
  • ಪತಿ ಜಗದೀಶ್​ ಜತೆ ವಿಶೇಷ ಫೋಟೋಶೂಟ್
  • Baby bump ಪೋಟೋ ಹಂಚಿಕೊಂಡ ತಾರೆ
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ.. Baby bump ಪೋಟೋ ಹಂಚಿಕೊಂಡ ತಾರೆ

ಚೆಲುವಿನ ಚಿತ್ತಾರ ಖ್ಯಾತಿಯ ಕನ್ನಡ ನಟಿ ಅಮೂಲ್ಯ ( Amulya) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪತಿ ಜಗದೀಶ್​ (Amulya husband Jagadish) ಜತೆ ಒಂದು ವಿಶೇಷ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ. 

ಈ ಕುರಿತು ಸುದ್ದಿಯನ್ನು ಅಭಿಮಾನಿಗಳಿಗೆ ಇನ್ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ. "ಈಗ ನಾವಿಬ್ಬರು ಮಾತ್ರವಲ್ಲ. Due this summer 2022. ಕುಟುಂಬ ಬೆಳೆಯುತ್ತಿದೆ, ಎಜೆ ಹ್ಯಾಪಿನೆಸ್" ಎಂದು ಬರೆದುಕೊಂಡಿದ್ದಾರೆ.  ಅಲ್ಲದೆ, ವಿಭಿನ್ನ ಫೋಟೋಶೂಟ್ ಮೂಲಕ ಕುಟುಂಬಕ್ಕೆ ಹೊಸ ಅತಿಥಿ ಬರುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Amulya (@nimmaamulya)

 

ವೈಟ್ ಟೀ-ಶರ್ಟ್ ಮತ್ತು ವೈಟ್ ಹ್ಯಾಟ್ ಧರಿಸಿರುವ ಅಮೂಲ್ಯ ತಮ್ಮ ಬೇಬಿ ಬಂಪ್ (Baby Bump) ತೋರಿಸಿಕೊಂಡು, ಚಿಪ್ಸ್ ತಿನ್ನುತ್ತಿದ್ದಾರೆ. ಪಕ್ಕದಲ್ಲಿ ಪತಿ ಜಗದೀಶ್ ಕೈಯಲ್ಲಿ ಕೋಕ್ ಮತ್ತು ಕೆಎಫ್‌ಸಿ ಚಿಕನ್ (Chicken) ಹಿಡಿದುಕೊಂಡು ನಗುತ್ತಿದ್ದಾರೆ. ಈ ಫೋಟೋ ಹಾಗೂ ಸಿಹಿ ಸುದ್ದಿಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಸಿನಿಮಾ ತಾರೆಯರು ಕಾಮೆಂಟ್ಸ್ ಮೂಲಕ ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. 

ಬಾಲ ನಟಿ ಬಳಿಕ ನಾಯಕ ನಟಿಯಾಗಿ ಸಾಕಷ್ಟು ಹೆಸರು ಮಾಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಸ್ಟಾರ್​ ಹೀರೋಯಿನ್​ ಆಗಿ ಮಿಂಚಿದರು. ಅಮೂಲ್ಯ 2017ರಲ್ಲಿ ಜಗದೀಶ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ಮದುವೆ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡ ನಟಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿದ್ದರು. ಅಮೂಲ್ಯ-ಜಗದೀಶ್ ಮದುವೆಯಾಗಿ ನಾಲ್ಕು ವರ್ಷದ ಸಂಭ್ರಮದಲ್ಲಿ ಈ ಹೊಸ ಸುದ್ದಿ ನೀಡಿದ್ದಾರೆ.  

More Stories

Trending News