Tiger Prabhakar Wife Anju : ನಟಿ ಅಂಜು ಬಾಲ ಕಲಾವಿದೆಯಾಗಿ ನಟನಾ ವೃತ್ತಿಯನ್ನು ಆರಂಭಿಸಿದರು. ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿ ಅಂಜು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಬೋಲ್ಡ್ ಪಾತ್ರಗಳ ಮೂಲಕ ಜನರ ನಿದ್ದೆ ಕದ್ದಿದ್ದಾರೆ. ಆದರೆ 17 ನೇ ವಯಸ್ಸಿನಲ್ಲಿ ಅಂಜು ತೆಗೆದುಕೊಂಡ ಒಂದು ನಿರ್ಧಾರ ಜೀವನವನ್ನೇ ಬುಎಮೇಲು ಮಾಡಿತು. ತನಗಿಂತ 31 ವರ್ಷ ಹಿರಿಯ ನಟನ ಜೊತೆ ಅಂಜು ಮದುವೆಯಾದರು. ಇದೇ ತಾನು ಮಾಡಿದ ಬಹುದೊಡ್ಡ ತಪ್ಪು ಎಂದು ಅಂಜು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಮೀಡಿಯಾ ಚಾನೆಲ್ ಒಂದರ ಜೊತೆ ಮಾತನಾಡಿದ ನಟಿ ಅಂಜು, ಒಂದೂವರೆ ವರ್ಷದ ಮಗುವಿದ್ದಾಗಲೇ ನಿರ್ದೇಶಕ ಮಹೇಂದ್ರನ್ ಸರ್ ನನ್ನನ್ನು ಬಾಲನಟಿಯಾಗಿ ಸಿನಿಮಾಗಳಿಲ್ಲಿ ನಟಿಸಲು ಕರೆತಂದರು. ನನ್ನ ವೃತ್ತಿಜೀವನ ಅಲ್ಲಿಂದ ಶುರುವಾಯಿತು. ಈಗ ಟಿವಿಯಲ್ಲಿ ಧಾರಾವಾಹಿ ಮಾಡುತ್ತಿದ್ದೇನೆ. ನಾನು ಚಿತ್ರರಂಗಕ್ಕೆ ಬರುವುದು ಅಮ್ಮನಿಗೆ ಸುತಾರಾಮ ಇಷ್ಟವಿರಲಿಲ್ಲ ಎಂದು ಅಂಜು ಹೇಳಿದ್ದಾರೆ. 


ನನ್ನ ಮದುವೆ ಆಕಸ್ಮಿಕವಾಗಿ ನಡೆದ ಘಟನೆ. ಕನ್ನಡ ಸಿನಿಮಾ ಮಾಡಲು ಬೆಂಗಳೂರಿಗೆ ಹೋಗಿದ್ದೆ. ಆಗ ಕನ್ನಡದ ಸ್ಟಾರ್ ಹೀರೋ ಟೈಗರ್ ಪ್ರಭಾಕರ್ ನನ್ನನ್ನು ಇಷ್ಟಪಟ್ಟು ಪ್ರೀತಿಸಲು ಆರಂಭಿಸಿದರು. ತಮ್ಮನ್ನು ಮದುವೆ ಆಗ್ತೀಯಾ ಎಂದು ಕೇಳಿದ್ದರು. ಅವರಿಗೆ ಈಗಾಗಲೇ ಮದುವೆ ಆಗಿದೆ. ಪತ್ನಿ ಮತ್ತು ಮಕ್ಕಳಿದ್ದ ಎಂಬ ಎಲ್ಲ ವಿಚಾರಗಳನ್ನು ನನ್ನಿಂದ ಮರೆಮಾಚಿದರು ಎಂದು ಹೇಳಿದ್ದಾರೆ.


ಕೆಲವರು ಬಂದ ಕಷ್ಟಗಳನ್ನು ಎದುರಿಸಿ ಜೀವನ ಸಾಗಿಸುತ್ತಾರೆ. ಆದರೆ ಕೆಲವರು ಹಾಗೆ ಮಾಡುವುದಿಲ್ಲ. ನಾವು ತಪ್ಪು ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬ ಪಾಪಪ್ರಜ್ಞೆಯನ್ನು ಆ ಜೀವನ ನಮಗೆ ನೀಡುತ್ತದೆ ಎಂದು ಆಂಜು ಹೇಳಿದ್ದಾರೆ.


ಟೈಗರ್ ಪ್ರಭಾಕರ್ ಮೇಲಿನ ಪ್ರೀತಿ ನನಗೆ ಸಿಕ್ಕಿಲ್ಲ. ಆ ಸಮಯದಲ್ಲಿ ನಾನು ನನ್ನ ನಟನಾ ವೃತ್ತಿಯನ್ನು ಕೊನೆಗೊಳಿಸಲು ಯೋಚಿಸಿದೆ. ಆಗ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೆ. ಅದರಲ್ಲಿ ಟೈಗರ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ಟೈಗರ್ ಪ್ರಭಾಕರ್ ನನಗೆ ಕನ್ನಡ ಚಿತ್ರಗಳಲ್ಲಿ ನಟಿಸಲು ಆಸಕ್ತಿ ಇದೆಯೇ ಎಂದು ಕೇಳಿದರು. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದಿದ್ದೆ.


ಆಗ ಅವರು, ಮುಂದೆ ಕನ್ನಡ ಚಿತ್ರ ಮಾಡಲಿದ್ದೇನೆ ಎಂದರು. ಆ ಚಿತ್ರದಲ್ಲಿ ಒಟ್ಟು ಮೂವರು ನಾಯಕಿಯರಿದ್ದು, ಅದರಲ್ಲಿ ಒಬ್ಬ ನಾಯಕಿಯಾಗಿ ನೀವು ನಟಿಸುತ್ತಿದ್ದೀರಾ ಎಂದು ಹೇಳಿದರು. ಆ ಸಮಯದಲ್ಲಿ ನಾನು ಮಲಯಾಳಂ ಚಿತ್ರಕ್ಕೆ ಬುಕ್ ಮಾಡಿದ್ದೆ. ಆ ಚಿತ್ರದಲ್ಲಿ ನಾನು ಮತ್ತು ಖುಷ್ಬು ನಟಿಸಬೇಕಿತ್ತು. ಇದನ್ನು ಟೈಗರ್ ಪ್ರಭಾಕರ್ ಅವರಿಗೆ ಹೇಳಿದ್ದೆ. ತಕ್ಷಣ ನೀವೇ ನಿರ್ಧಾರ ತಗೊಳ್ಳಿ ಅಂತ ಹೇಳಿದರು.


ಇದನ್ನೂ ಓದಿ: ಬಿಗ್‌ಬಾಸ್ ಎಲಿಮಿನೇಷನ್ ನಲ್ಲಿ ಬಿಗ್‌ಟ್ವಿಸ್ಟ್; ಈ ವಾರ ಹೀನಾಯವಾಗಿ ಮನೆಯಿಂದ ಹೊರಹೋಗೋದು ಈ ಜನಪ್ರಿಯ ಸ್ಪರ್ಧಿ?!


ಹೀಗೆ ಕುಳಿತು ಯೋಚಿಸಿದಾಗ ಕನ್ನಡದಲ್ಲಿ ನಟಿಸಿದರೆ ಹೊಸ ಭಾಷೆಯಲ್ಲಿ ನಟಿಸುವ ಅವಕಾಶ ಸಿಗುತ್ತದೆ ಎಂದು ನಿರ್ಧರಿಸಿ ಈ ಅವಕಾಶವನ್ನು ಆಯ್ಕೆ ಮಾಡಿಕೊಂಡೆ. ಆ ಚಿತ್ರದಲ್ಲಿ ನನಗೆ ಅವರ ಪರಿಚಯವಾಯಿತು ಎಂದರು. 


ಆಗ ನನ್ನ ವಯಸ್ಸು ಕೇವಲ 17 ವರ್ಷ. ಮದುವೆಗೆ ನನ್ನ ಮನಸ್ಸು ಸಿದ್ಧವಿಲ್ಲ ಎಂದು ಹೇಳಿದೆ. ಆದರೆ ಅವರು ಬಿಡಲಿಲ್ಲ. ಪ್ರಭಾಕರ್ ಅವರ ವಯಸ್ಸು ಸುಮಾರು 50 ವರ್ಷ ಆಗಿತ್ತು. ಅವರನ್ನು ನೋಡಿದ ಅಮ್ಮ ಈ ಮದುವೆಗೆ ಒಪ್ಪಿಗೆ ನೀಡಲಿಲ್ಲ. ಆದರೆ ಅವರ ಮಾತು ಕೇಳದೆ ಮನೆಯಲ್ಲಿ ಹೇಳದೆ ಪ್ರಭಾಕರ ಬಳಿ ಹೋದೆ. ನಾನು ಅವರನ್ನು ತುಂಬಾ ನಂಬಿದ್ದೆ. ಅವರ ಮನೆಗೆ ಹೋದಾಗ ಪ್ರಭಾಕರ್ ಅವರಿಗೆ ಈಗಾಗಲೇ ಮೂರು ಮದುವೆಯಾಗಿದ್ದು, ಮಕ್ಕಳಿರುವುದು ಗೊತ್ತಾಗಿತ್ತು. ಆಗ ನನಗೆ ನಾನು ತಪ್ಪು ನಿರ್ಧಾರ ತೆಗೆದುಕೊಂಡೆ ಎನಿಸಿತು ಎಂದು ಹೇಳಿದ್ದಾರೆ. 


ಅದು ಗೊತ್ತಾದಾಗ ನನಗೆ ತುಂಬಾ ನೋವಾಯಿತು. ನಾನು ಇಡೀ ಮನೆಯವರ ವಿರುದ್ಧ ಅವರನ್ನು ಮದುವೆಯಾಗಿದ್ದೇನೆ. ಬಂದದ್ದು ಬಂದಿದೆ. ಏನೇ ಆಗಲಿ ನಾವು ನಿಭಾಯಿಸಿಕೊಂಡು ಬದುಕುತ್ತೇವೆ ಎಂದುಕೊಂಡೆ. ಆಗ ನಾನು ಗರ್ಭಿಣಿ ಆಗಿದ್ದೆ. ನಂತರ ನನ್ನ ಮಗ ಜನಿಸಿದನು. ಪ್ರಭಾಕರ್‌ ಜೊತೆ ಇರಲು ಇಷ್ಟವಿಲ್ಲದೇ ನಾನು ಬೇರ್ಪಟ್ಟೆ ಎಂದರು.  


ನೀನು ಸತ್ತರೂ ನಿನ್ನ ಮುಖ ನೋಡುವುದಿಲ್ಲ ಎಂದು ಕೊನೆಯ ಸಲ ಹೇಳಿದ್ದೆ. ಅದರ ನಂತರ ನಾನು ಬಹಳ ಕಾಲ ಖಿನ್ನತೆಗೆ ಒಳಗಾಗಿದ್ದೆ. ನಿಧಾನವಾಗಿ ಅದರಿಂದ ಚೇತರಿಸಿಕೊಂಡು ಮತ್ತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟೆ ಎಂದು ನಟಿ ಅಂಜು ತಮ್ಮ ನೋವಿನ ಕತೆಯನ್ನು ಹೇಳಿದ್ದಾರೆ.


ಇದನ್ನೂ ಓದಿ: ‘ನಾಯಿ ಇದೆ ಎಚ್ಚರಿಕೆ’ ಎನ್ನುತ್ತಾ ಸ್ಯಾಂಡಲ್‌ನಲ್ಲಿ ಮಿಂಚಲು ರೆಡಿಯಾದ ಡಾ.ಲೀಲಾ ಮೋಹನ್


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.