Genelia Dsouza childhood photos: ಇಲ್ಲೊಂದು ಫೋಟೋ ಇದೆ. ಆ ಫೋಟೋದಲ್ಲಿ ಕಾಣಿಸುತ್ತಿರುವ ಬಾಲಕಿ ಯಾರೆಂದು ನೀವು ಗುರುತಿಸಬಲ್ಲಿರಾ. ನಿಮಗೆ ಸುಳಿವನ್ನೂ ಸಹ ನಾವು ನೀಡುತ್ತೇನೆ. ಈಕೆ ಈಗ ಸ್ಟಾರ್ ಬಹುಭಾಷಾ ನಟಿ. ಕನ್ನಡದಲ್ಲಿ ಡಾ.ಶಿವರಾಜ್ ಕುಮಾರ್ ಜೊತೆಯೂ ನಟಿಸಿದ್ದಾರೆ. ಸದ್ಯ ದಕ್ಷಿಣ ಭಾರತ ಹಾಗೂ ಬಾಲಿವುಡ್’​ನಲ್ಲಿ ಸಖತ್ ಬೇಡಿಕೆಯೂ ಇದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 3ನೇ ಟಿ20ಗೆ ಭಾರತದ Playing 11 ರೆಡಿ: ಒಬ್ಬರಲ್ಲ, ಇಬ್ಬರಲ್ಲ… ನಾಲ್ಕು ಆಟಗಾರರು ತಂಡದಿಂದ ಔಟ್!


ತನ್ನ ತುಂಟ ನಟನೆ, ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಈ ನಟಿ, ಬಾಲಿವುಡ್ ನಟನ ಕೈಹಿಡಿದಿದ್ದಾರೆ. ಸದ್ಯ ಸುಖೀಜೀವನ ನಡೆಸುತ್ತಿರುವ ಈ ನಟಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಕೊನೆಗೂ ಈಕೆ ಯಾರೆಂದು ತಿಳಿದಿಲ್ಲವೇ.. ಹಾಗಾದ್ರೆ ನಾವೇ ಉತ್ತರ ಹೇಳುತ್ತೇವೆ ಕೇಳಿ,


ಈ ಬಹುಭಾಷಾ ನಟಿ ಬೇರಾರು ಅಲ್ಲ, ನಟಿ ಜೆನಿಲಿಯಾ ಡಿಸೋಜಾ (Genelia D’Souza). ‘ತುಜೆ ಮೇರಿ ಕಸಮ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಜೆನಿಲಿಯಾ ಈ ಸಿನಿಮಾದಿಂದಲೇ ಸಖತ್ ಖ್ಯಾತಿ ಪಡೆದರು. ಇನ್ನು ಈ ಚಿತ್ರ ತೆರೆಗೆ ಬಂದಿದ್ದು 2003ರಲ್ಲಿ.


ಜೆನಿಲಿಯಾ ಅವರು ಶಿವಣ್ಣ ಅಭಿನಯದ ‘ಸತ್ಯ ಇನ್ ಲವ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ 2008ರಲ್ಲಿ ರಿಲೀಸ್ ಆಗಿದ್ದು, ಇದುವೇ ಕನ್ನಡದಲ್ಲಿ ಜೆನಿಲಿಯಾ ನಟಿಸಿದ ಮೊದಲ ಸಿನಿಮಾ.


ಇನ್ನು ತೆಲುಗಿನಲ್ಲೂ ತನ್ನ ಕಮಾಲ್ ತೋರಿಸಿದ ಜೆನಿಲಿಯಾ ಸಿದ್ಧಾರ್ಥ್ ಅಭಿನಯದ ‘ಬೊಮ್ಮರಿಲ್ಲು’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸಖತ್ ಹಿಟ್ ಆಗಿದ್ದಲ್ಲದೆ, ತನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ್ದರು. ಜೆನಿಲಿಯಾ ತೆಲುಗು ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.


ಇದನ್ನೂ ಓದಿ: ಟಿ20 ಕ್ರಿಕೆಟ್’ನಲ್ಲಿ ಈ ವರ್ಷ ಅತಿ ಹೆಚ್ಚು ಶುಲ್ಕ ಪಡೆದ ಕ್ರಿಕೆಟಿಗ ಯಾರು? ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ


ಬಾಲಿವುಡ್ ಹೀರೋ ರಿತೇಶ್ ದೇಶ್​ಮುಖ್ ಜೊತೆ ಪ್ರೀತಿಯಲ್ಲಿ ಬಿದ್ದ ಜೆನಿಲಿಯಾ 2012ರಲ್ಲಿ ಅವರನ್ನು ವಿವಾಹವಾದರು. ಇದೀಗ ಈ ಮಾದರಿ ಜೋಡಿದೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇನ್ನು ರಿತೇಶ್ ಹಾಗೂ ಜೆನಿಲಿಯಾ ಸುಮಾರು 5 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ