IND vs WI: ಚಾಹಲ್’ಗೆ ಬೌಲಿಂಗ್ ಕೊಡದ ಈತನೇ ಭಾರತದ ಸೋಲಿಗೆ ಕಾರಣ! Team India ಮಾಜಿ ವೇಗಿ ಹೇಳಿಕೆ

Venkatesh Prasad, Team India Cricket News: ಟೀಂ ಇಂಡಿಯಾದ ಕಳಪೆ ಪ್ರದರ್ಶನದ ಬಗ್ಗೆ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆಯೂ ವೆಂಕಟೇಶ್ ಪ್ರಸಾದ್ ಪ್ರಶ್ನೆ ಎತ್ತಿದ್ದಾರೆ.

Written by - Bhavishya Shetty | Last Updated : Aug 8, 2023, 07:19 AM IST
    • ತಂಡದ ಈ ಕಳಪೆ ಪ್ರದರ್ಶನದ ಬಗ್ಗೆ ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಪ್ರಶ್ನೆ
    • ಸಾಮಾಜಿಕ ಜಾಲತಾಣದಲ್ಲಿ ವೆಂಕಟೇಶ್ ಪ್ರಸಾದ್ ಈ ಬಗ್ಗೆ ಮಾತನಾಡಿದ್ದಾರೆ
    • ಟೀಮ್ ಇಂಡಿಯಾ ತನ್ನ ತಪ್ಪುಗಳಿಂದಾಗಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-2 ರಿಂದ ಹಿಂದಿದೆ.
IND vs WI: ಚಾಹಲ್’ಗೆ ಬೌಲಿಂಗ್ ಕೊಡದ ಈತನೇ ಭಾರತದ ಸೋಲಿಗೆ ಕಾರಣ! Team India ಮಾಜಿ ವೇಗಿ ಹೇಳಿಕೆ title=
Venkatesh Prasad

Team India Cricket News: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾದ ಕಳಪೆ ಪ್ರದರ್ಶನದ ಬಗ್ಗೆ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆಯೂ ವೆಂಕಟೇಶ್ ಪ್ರಸಾದ್ ಪ್ರಶ್ನೆ ಎತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ವಶಪಡಿಸಿಕೊಂಡ ಟೀಮ್ ಇಂಡಿಯಾ ತನ್ನ ತಪ್ಪುಗಳಿಂದಾಗಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-2 ರಿಂದ ಹಿಂದಿದೆ.

ಇದನ್ನೂ ಓದಿ: ಬೊಜ್ಜಿನ ಸಮಸ್ಯೆಯಿಂದ Team Indiaದಿಂದ ಹೊರಬಿದ್ದ ಸ್ಟಾರ್ ಕ್ರಿಕೆಟರ್’ಗೆ ಕಾಶ್ಮೀರಿ ಯುವತಿ ಜೊತೆ ಕಲ್ಯಾಣ!

ತಂಡದ ಈ ಕಳಪೆ ಪ್ರದರ್ಶನದ ನಂತರ ಭಾರತದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. “ತಂಡದ ಪ್ರಯತ್ನ ಅತ್ಯಂತ ಸಾಮಾನ್ಯ ಸ್ಥಿತಿಯಲ್ಲಿದೆ. ಗೆಲುವಿನ ಹಸಿವು ತಂಡದಲ್ಲಿ ಕಾಣುತ್ತಿಲ್ಲ” ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೆಂಕಟೇಶ್ ಪ್ರಸಾದ್ ಅವರು ಈ ಬಗ್ಗೆ ಮಾತನಾಡಿದ್ದು, “ಟೀಂ ಇಂಡಿಯಾದ ಪ್ರದರ್ಶನ ತುಂಬಾ ಸರಾಸರಿಯಾಗಿದೆ. 2007 ರ T20 ವಿಶ್ವಕಪ್ ನಂತರ, IPL ಪ್ರಾರಂಭವಾಯಿತು. ಅಂದಿನಿಂದ ನಾವು 7 ಪ್ರಯತ್ನಗಳಲ್ಲಿ T20 ವಿಶ್ವಕಪ್ ಗೆದ್ದಿಲ್ಲ. ಒಮ್ಮೆ ಮಾತ್ರ ಫೈನಲ್‌’ಗೆ ತಲುಪಿದೆ, ಏಕೆಂದರೆ ಗೆಲ್ಲುವ ಹಸಿವು ಮತ್ತು ಉತ್ಸಾಹವು ತಂಡದಲ್ಲಿ ಗೋಚರಿಸುವುದಿಲ್ಲ” ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಎರಡನೇ ಪಂದ್ಯದಲ್ಲಿ ಯುಜುವೇಂದ್ರ ಚಹಾಲ್‌’ಗೆ ಕೋಟಾದ ಕೊನೆಯ ಓವರ್‌ ನೀಡದಿದ್ದ ಭಾರತೀಯ ನಾಯಕನ ತಂತ್ರವನ್ನು ಪ್ರಸಾದ್ ಪ್ರಶ್ನಿಸಿದ್ದಾರೆ. “ ಚಹಾಲ್ 16ನೇ ಓವರ್‌’ನಲ್ಲಿ 2 ವಿಕೆಟ್ ಪಡೆದು ಭಾರತವನ್ನು ಮತ್ತೆ ಆಟಕ್ಕೆ ತಂದರು. ಆಗ ವೆಸ್ಟ್ ಇಂಡೀಸ್ 8 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ 9 ಮತ್ತು 10ನೇ ಬ್ಯಾಟ್ಸ್‌ಮನ್‌ ಎದುರು ಕೊನೆಯ ಓವರ್‌ ಮಾಡುವ ಅವಕಾಶ ಸಿಗಲಿಲ್ಲ. ಇದಾದ ಬಳಿಕ ವೇಗದ ಬೌಲರ್ ಗಳನ್ನು ಸುಲಭವಾಗಿ ಎದುರಿಸಿದ ವಿಂಡೀಸ್ ಬ್ಯಾಟ್ಸ್ ಮನ್ ಗಳು ಪಂದ್ಯ ಗೆದ್ದರು. ಪುಸ್ತಕದ ಜ್ಞಾನದಿಂದ ನಡೆಯದೆ, ಮನಸ್ಸಿನ ಮಾತನ್ನು ಕೇಳು ಮುನ್ನಡೆಯಿರಿ!” ಎಂದು ಮಾತಿನಲ್ಲೇ ಪಾಂಡ್ಯ ವಿರುದ್ಧ ತಿವಿದಿದ್ದಾರೆ.  

ಈ ಮೂಲಕ ಟೀಂ ಇಂಡಿಯಾ 2 ಪಂದ್ಯಗಳಲ್ಲೂ ಸೋಲು ಕಾಣಲು ನಾಯಕ ಪಾಂಡ್ಯರ ನಿರ್ಧಾರವೇ ಕಾರಣ ಎಂದು ವೆಂಕಟೇಶ್ ಪ್ರಸಾದ್ ಹೇಳಿದಂತಿದೆ. ಸದ್ಯ ಇನ್ನೂ ಮೂರು ಪಂದ್ಯಗಳಿದ್ದು ಸತತ ಗೆಲುವು ಸಾಧಿಸಿದರಷ್ಟೇ ಪಾಂಡ್ಯ ಪಡೆ ಟಿ20ಯಲ್ಲೂ ಗೆಲುವು ಸಾಧಿಸಲಿದೆ.

ಇದನ್ನೂ ಓದಿ: 2023ರ ವಿಶ್ವಕಪ್’ಗೆ ತಂಡ ಪ್ರಕಟ! ವಿರಾಟ್ ಕೊಹ್ಲಿ ಗೆಳೆಯನಿಗೆ ಸ್ಥಾನ ನೀಡದೆ ದೂರವಿಟ್ಟ ಆಯ್ಕೆ ಸಮಿತಿ

ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್!

ವೆಸ್ಟ್ ಇಂಡೀಸ್‌’ಗೆ 24 ಎಸೆತಗಳಲ್ಲಿ 24 ರನ್‌’ಗಳ ಅಗತ್ಯವಿದ್ದಾಗ ಹಾರ್ದಿಕ್ ತೆಗೆದುಕೊಂಡ ನಿರ್ಧಾರದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. 16ನೇ ಓವರ್‌’ನಲ್ಲಿ ಟೀಂ ಇಂಡಿಯಾದ ಚಹಲ್ ವಿಂಡೀಸ್’ಗೆ ಬಲಿಷ್ಠ ತಿರುಗೇಟು ನೀಡಿದರು. ಅವರಿಗೆ ಇನ್ನೂ ಒಂದು ಓವರ್ ಉಳಿದಿತ್ತು, ಆದರೆ ಪಾಂಡ್ಯ ಅವರನ್ನು 18 ನೇ ಓವರ್‌’ಗೆ ಬೌಲಿಂಗ್ ಮಾಡಲು ಬಿಡಲಿಲ್ಲ ಮತ್ತು ವೇಗದ ಬೌಲರ್‌’ಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಪಾಂಡ್ಯ ಅವರ ಈ ನಿರ್ಧಾರ ತಪ್ಪು ಎಂದು ಸಾಬೀತಾಯಿತು. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಪಾಂಡ್ಯರನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಮಾಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News