Jayamalini on silk smitha death : ಬಹುಭಾಷಾ ನಟಿ ಸಿಲ್ಕ್‌ ಸ್ಮಿತಾ ಸಾವಿನ ಕಾರಣ ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಕೆಲವೊಂದಿಷ್ಟು ಜನ ಆತ್ಮಹತ್ಯೆ ಅಂತ ಹೇಳಿದರೆ ಇನ್ನೂ ಕೆಲವರು ಅವರ ಮೇಲೆ ಜರುಗಿದ ಅತ್ಯಾಚಾರದಿಂದ ಮನನೊಂದು ಸಾವಿಗೆ ಶರಣಾಗಿದ್ದಾರೆ ಅಂತ ಹೇಳ್ತಾರೆ.. ಆದ್ರೆ ಇದೀಗ ಖ್ಯಾತ ಹಿರಿಯ ನಟಿಯೊಬ್ಬರು ಸಿಲ್ಕ್‌ ಸಾವಿನ ರಹಸ್ಯ ಬಿಚ್ಚಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. 80ರ ದಶಕದಲ್ಲಿ ಮಿಂಚಿ ಮರೆಯಾದ ನಟಿ ಸಿಲ್ಕ್​ ಸ್ಮಿತಾ ಸಾವು ಇಂದಿಗೂ ದುರಂತ. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್​ ಕಂಡುಬಂದಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಯಿತು. ಆದರೆ ಇದು ಇಂದಿಗೂ ನಂಬಲಾರದ ಸತ್ಯವಾಗಿದೆ.


ಇದನ್ನೂ ಓದಿ:ಅಪ್ಪು ಮಡದಿ ಕುರಿತ ಪೋಸ್ಟ್‌, ಕಿಡಿಗೇಡಿಗಳ ವಿರುದ್ಧ ಸಮರ ಸಾರಿದ ಅಪ್ಪು ಫ್ಯಾನ್ಸ್‌..! ದೂರು ದಾಖಲು


ಅಂದಿನ ಕಾಲದ ಸಿನಿಮಾಗಳು ಸಿಲ್ಕ್‌ ಐಟಂ ಡಾನ್ಸ್‌ ಇಲ್ಲ ಅಂದ್ರೆ ಅಪೂರ್ಣವಾಗುತ್ತಿದ್ದವು.  ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಹೀಗೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೆ, ಸಿಲ್ಕ್‌ ಸ್ಮಿತಾಗೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಅಭಿಮಾನಿಗಳಿದ್ದಾರೆ.


ಇದೀಗ ಸಿಲ್ಕ್​ ಸ್ಮಿತಾ ಕುರಿತು ಹಿರಿಯ ನಟಿ ಜಯಮಾಲಿನಿ ಹೇಳಿರುವ ಮಾತುಗಳು ಸೋಷಿಯ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಯೂಟ್ಯೂಬ್​ ನೀಡಿದ ಸಂದರ್ಶನವೊಂದರಲ್ಲಿ ಸಿಲ್ಕ್‌ ಬಗ್ಗೆ ಇದುವರೆಗೆ ಯಾರಿಗೂ ಗೊತ್ತಿರದ ವಿಚಾರವೊಂದನ್ನು ಜಯಮಾಲಿನಿಯವರು ಬಹಿರಂಗಪಡಿಸಿದ್ದಾರೆ.


ಇದನ್ನೂ ಓದಿ:ಸುದೀಪ್‌-ಅಪ್ಪು ಪ್ಯಾನ್ಸ್‌ ನಡುವೆ ಜಗಳ ಹಚ್ಚುವ ಕೆಲಸ ಮಾಡಿದ ಕಿಡಿಗೇಡಿಗಳು..! ಅಷ್ಟಕ್ಕೂ ಆಗಿದ್ದೇನು..?


ಸಿಲ್ಕ್‌ ಚಿತ್ರೀಕರಣದ​ ವೇಳೆ ನಮ್ಮ ಜತೆ ಮಾತನಾಡುತ್ತಿರಲಿಲ್ಲ. ಅವರ ಜೊತೆ ನಾನು ಒಂದು ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದೇನೆ. ಆದರೆ ಸಿನಿರಂಗದಲ್ಲಿ ಅವರ ಹೆಸರು ಕೇಳಿ ಬರುತ್ತಿರುವಾಗಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ದುಃಖಕರ ಸಂಗತಿ ಅಂತ ಜಯಮಾಲಿನಿ ಭಾವುಕರಾದರು.


ಅಲ್ಲದೆ, ಸಿಲ್ಕ್‌ ಸ್ಮಿತಾ ಅವರ ಸಾವಿಗೆ ಕಾರಣ ಅವರ ಕರ್ಮದ ಫಲ. ಪ್ರೀತಿ ಮಾಡೋದು ತಪ್ಪಲ್ಲ ಆದರೆ ತಂದೆ-ತಾಯಿಯನ್ನು ಅವರು ತೊರೆಯಬಾರದಿತ್ತು. ರಕ್ತ ಸಂಬಂಧವೇ ಅಲ್ಲದವರನ್ನು ನಂಬಿ ತನ್ನವರನ್ನು ಬಿಟ್ಟು ಹೋಗಿದ್ದರು. ಇದೇ ನೋವಿನಲ್ಲಿ ಸ್ಮಿತಾ ಸಾವಿಗೆ ಶರಣಾಗಿರಬಹುದು ಎಂದು ನಟಿ ಜಯಮಾಲಿನಿ ಹೇಳಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ