ಯೌವನದಿಂದ ಇರಲು ಸ್ವಂತ ಮಗನ ʼಆ ದ್ರವʼವನ್ನೇ ಬಳಸಿಕೊಂಡ ತಾಯಿ..! ಇಂತವರೂ ಇರ್ತಾರಾ ಗುರು..

Marcela Iglesias : ಯೌವನದಿಂದ ಇರಲು ಮಹಿಳೆಯೊಬ್ಬರು ಮಾಡಿದ ಕೃತ್ಯ ಆಘಾತಕಾರಿಯಾಗಿದೆ. 47 ವರ್ಷದ ಮಹಿಳೆಯೊಬ್ಬರು ವಯಸ್ಸಾದರೂ ಸುಂದರವಾಗಿ ಕಾಣಲು ತನ್ನ ಮಗನ ದೇಹವನ್ನು ಬಳಸಿಕೊಂಡಿದ್ದಾಳೆ.. ಈ ಕುರಿತ ಶಾಕಿಂಗ್‌ ವರದಿ ಇಲ್ಲಿದೆ..

1 /9

ಲಾಸ್ ಏಂಜಲೀಸ್‌ನ ಮಹಿಳೆಯೊಬ್ಬಳು ಸದಾ ಯೌವನವಾಗಿರಲು ತನ್ನ ಮಗನ ರಕ್ತವನ್ನು ವರ್ಗಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಅದೇನೆಂದರೆ ಮಗನ ರಕ್ತವನ್ನು ತನ್ನ ದೇಹಕ್ಕೆ ವರ್ಗಾವಾಣೆ ಮಾಡಿಸಿಕೊಳ್ಳುವುದಾಗಿ ಹೇಳಿದ್ದಾರೆ.   

2 /9

ಹೌದು.. ಮಹಿಳೆಯರು ತಮ್ಮ ತ್ವಚೆಯನ್ನು ಯೌವನವಾಗಿ ಕಾಣುವಂತೆ ಮತ್ತು ಹೊಳೆಯುವಂತೆ ಮಾಡಲು ಹೆಚ್ಚಿನ ಪ್ರಯತ್ನ ಮಾಡುತ್ತಾರೆ. ಅಂಗಡಿಗಳಲ್ಲಿ ಮಾರಾಟವಾಗುವ ಕ್ರೀಮ್ ಗಳನ್ನು ಬಳಸಿ ತ್ವಚೆಯ ಆರೈಕೆ ಮಾಡುತ್ತಾರೆ. ಇದಲ್ಲದೇ ಮುಖದ ಸೌಂದರ್ಯ ಚಿಕಿತ್ಸೆಯನ್ನೂ ಮಾಡುತ್ತಿದ್ದಾರೆ.   

3 /9

ಆದರೆ ಈ ಮಹಿಳೆ ಯೌವನ ಕಾಯ್ದುಕೊಳ್ಳಲು ತನ್ನ ಸ್ವಂತ ಮಗನ ರಕ್ತವನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ದೇಹವನ್ನು ಯೌವನ ಮತ್ತು ಕಾಂತಿಯುತವಾಗಿರಿಸಲು ರಕ್ತವನ್ನು ಬಳಸಬಹುದು ಎಂದು ವರದಿಯಾಗಿದೆ.  

4 /9

47 ವರ್ಷದ ಮಾರ್ಸೆಲಾ ಇಗ್ಲೇಷಿಯಾ ಲಾಸ್ ಏಂಜಲೀಸ್‌ನಲ್ಲಿ ವಾಸಿಸುತ್ತಿದ್ದಾರೆ. ಈಕೆ ತಮ್ಮ ಚರ್ಮ ಮತ್ತು ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇದುವರೆಗೆ ಅವರು ಮೇಕಪ್‌ಗಾಗಿ $99,000 ವರೆಗೆ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಅಲ್ಲದೆ, ಅವರು ತಮ್ಮ ದೇಹವನ್ನು ಆಕಾರದಲ್ಲಿಡಲು ಪ್ರತಿದಿನ ಒಂದು ಗಂಟೆ ವ್ಯಾಯಾಮ ಮತ್ತು ಎಂಟು ಗಂಟೆಗಳ ನಿದ್ರೆ ಮಾಡುತ್ತಾರಂತೆ.   

5 /9

ಅಲ್ಲದೆ, ಸಕ್ಕರೆ ಪಾನೀಯಗಳು, ಸೋಯಾ ಉತ್ಪನ್ನಗಳು ಅಥವಾ ಆಲ್ಕೋಹಾಲ್ ಸೇವಿಸುವುದಿಲ್ಲ, ಮೀನು ಮಾತ್ರ ತಿನ್ನುತ್ತಿದ್ದಾರೆ. ಸೌಂದರ್ಯಕ್ಕಾಗಿ ವಿಟಮಿನ್ ಚುಚ್ಚುಮದ್ದು ಸೇರಿದಂತೆ ವಿವಿಧ ಚರ್ಮದ ಚಿಕಿತ್ಸೆಗಳಿಗೆ $1,000 ಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ.  

6 /9

ಇದೀಗ ಚರ್ಮದ ಆರೈಕೆಯನ್ನು ತೀವ್ರವಾಗಿ ತೆಗೆದುಕೊಳ್ಳುತ್ತಿರುವ ಮಾರ್ಸೆಲಾ ಇಗ್ಲೇಷಿಯಾ ಈಗ ಹೊಸ ಹಾದಿ ಬಳಸುತ್ತಿದ್ದಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವಳು ಯೌವನವಾಗಿರಲು ತನ್ನ 23 ವರ್ಷದ ಮಗ ರೊಡ್ರಿಗೋ ರಕ್ತವನ್ನು ತನ್ನ ದೇಹಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ..  

7 /9

ರಕ್ತ ವರ್ಗಾವಣೆ ಸಾಧ್ಯವೇ? : ಸೌಂದರ್ಯವನ್ನು ಕಾಪಾಡಿಕೊಳ್ಳಲು ನಾನು ರಕ್ತ ವರ್ಗಾವಣೆಗೆ ಒಳಗಾಗುತ್ತೇನೆ ಎಂದು ಮಾರ್ಸೆಲಾ ಹೇಳಿದರು. ನನ್ನ ಮಗ ನನಗೆ ರಕ್ತ ಕೊಡಲಿದ್ದಾನೆ. ಈ ಚಿಕಿತ್ಸೆಯನ್ನು ಮಾಡಲು ನಾನು ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ವೈದ್ಯರನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ..  

8 /9

ರಕ್ತ ವರ್ಗಾವಣೆ.. ಇದು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಕೆಂಪು ರಕ್ತ ಕಣಗಳ ವರ್ಗಾವಣೆಯಾಗಿದೆ. ಅಲ್ಲದೆ ಐವಿ ಇಂಜೆಕ್ಷನ್ ಮೂಲಕ ರಕ್ತ ನೀಡಲಾಗುವುದು ಎಂದು ಹೇಳಲಾಗಿದೆ. ರಕ್ತವನ್ನು ದೇಹಕ್ಕೆ ಚುಚ್ಚಲು ಕನಿಷ್ಠ 5 ಗಂಟೆಗಳು ಬೇಕಾಗಬಹುದು ಎಂದು ಹೇಳಲಾಗುತ್ತದೆ.   

9 /9

ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ 2019 ರಲ್ಲಿ ರಕ್ತ ವರ್ಗಾವಣೆಯು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವರದಿ ಮಾಡಿದೆ. ಖಿನ್ನತೆ, ಜ್ಞಾಪಕ ಶಕ್ತಿ ನಷ್ಟ, ಪಾರ್ಕಿನ್ಸನ್ ಕಾಯಿಲೆ, ಆಲ್ಝೈಮರ್ ಕಾಯಿಲೆ, ಹೃದ್ರೋಗ ಇತ್ಯಾದಿಗಳು ಬರುತ್ತವೆ ಎಂದು ಹೇಳಲಾಗುತ್ತದೆ.