Kajol Using N-Word Video Viral : ಕಾಜೋಲ್ ಅವರು ಜನಾಂಗೀಯ ನಿಂದನೆ ಮಾಡುವಂತಹ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಭಾರೀ ಟೀಕೆಗೆ ಗುರಿಯಾಗುತ್ತಿದೆ. ಈಗ ರೆಡ್ಡಿಟ್‌ನಲ್ಲಿ ವೈರಲ್ ಆಗುತ್ತಿರುವ ಆಪಾದಿತ ವಿಡಿಯೋದಲ್ಲಿ ನಟಿ ಕಾಜೋಲ್ ಜನಾಂಗೀಯ ನಿಂದನೆ ಪದ (N - Word) ಬಳಸುವುದನ್ನು ಕೇಳಬಹುದು. ಇದು ಕಪ್ಪು ಜನರ ವಿರುದ್ಧ, ವಿಶೇಷವಾಗಿ ಆಫ್ರಿಕನ್ ಅಮೆರಿಕನ್ನರ ವಿರುದ್ಧ ಬಳಸಲಾಗುವ ಜನಾಂಗೀಯ ನಿಂದನೆಯಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bhagya Lakshmi: 'ಭಾಗ್ಯಲಕ್ಷ್ಮಿ' ಸೀರಿಯಲ್ ನಟನ ಕಾರು ಅಪಘಾತ


ರೆಡ್ಡಿಟ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ತಕ್ಷಣ, ನೆಟಿಜನ್‌ಗಳು ಕಾಜೋಲ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಒಬ್ಬ ಬಳಕೆದಾರರು ಹೇಳಿದರು, “ಇದು ತುಂಬಾ ಭಯಂಕರವಾಗಿದೆ. ನಾನು ಸೆಕೆಂಡ್ ಹ್ಯಾಂಡ್ ಮುಜುಗರದಿಂದ ಸಾಯಬಹುದು." ಇನ್ನೊಬ್ಬರು, "ಕಳೆದ ಎರಡು ದಿನಗಳಿಂದ ಏಕೆ ಹುಚ್ಚನಂತೆ ವರ್ತಿಸುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.  


ಇದಲ್ಲದೇ, ಶಾರುಖ್ ಖಾನ್ ಅವರ ಪಠಾಣ್‌ ಬಾಕ್ಸ್ ಆಫೀಸ್ ಕಲೆಕ್ಷನ್‌ ಅನ್ನು ಪ್ರಶ್ನಿಸಿದ ವಿಚಾರವಾಗಿಯೂ ಕಾಜೋಲ್ ಟ್ರೋಲ್‌ ಆಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ನೀವು ಶಾರುಖ್‌ಗೆ ಯಾವ ಪ್ರಶ್ನೆ ಕೇಲಲು ಬಯಸುವಿರಿ ಎಂದಾಗ, ಕಾಜೋಲ್‌ ನಗುತ್ತಲೇ "ಪಠಾಣ್‌ ನಿಜವಾಗಿಯೂ ಅಷ್ಟೊಂದು ಕಲೆಕ್ಷನ್‌ ಮಾಡಿತಾ?" ಎಂದಿದ್ದಾರೆ. ಕಾಜೋಲ್‌ ತಮಾಷೆ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಕೆಲವರು ಅವರ ಹಾಸ್ಯವನ್ನು ತಪ್ಪಾಗಿ ಅರ್ಥೈಸಿಕೊಂಡರು ಮತ್ತು ಅವರು ಪಠಾಣ್‌ನ ಬಾಕ್ಸ್ ಆಫೀಸ್ ಸಂಖ್ಯೆಯನ್ನು ಪ್ರಶ್ನಿಸುತ್ತಿದ್ದಾರೆಂದು ಭಾವಿಸಿದರು. ಆದರೆ, ಆಕೆಯ ಅಭಿಮಾನಿಗಳು ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.


ಇದನ್ನೂ ಓದಿ: ಸಂಕಷ್ಟದಲ್ಲಿ ರಜನಿ 'ಜೈಲರ್'.. ಟೈಟಲ್ ಬದಲಾಯಿಸಲು ಕೋರ್ಟ್ ಮೊರೆ ಹೋದ ಡೈರೆಕ್ಟರ್‌!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.