ಪವನ್ To ಕಂಗನಾ.. ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಸಿನಿಮಾ ತಾರೆಯರು ಇವರೇ ನೋಡಿ..!
Actors won in lok sabha election 2024 : ಈ ಬಾರಿಯ ಚುನಾವಣೆಯಲ್ಲಿ ಹಲವು ಸಿನಿಮಾ ತಾರೆಯರು ಅದೃಷ್ಟ ಪರೀಕ್ಷೆಗಿಳಿದಿದ್ದರು. ಕೆಲವರು ಸಂಸತ್ ಸ್ಥಾನಗಳಿಗೆ ಸ್ಪರ್ಧಿಸಿದರೆ, ಇನ್ನು ಕೆಲವರು ವಿಧಾನಸಭೆ ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಈ ಮಹಾ ಚುನಾವಣೆಯಲ್ಲಿ ಗೆದ್ದವರು ಯಾರು.. ಸೋತರು ಯಾರು..? ತಿಳಿದುಕೊಳ್ಳೋಣ ಬನ್ನಿ..
Actors Who Won Lok Sabha Elections 2024: ಲೋಕಸಭೆ ಚುನಾವಣೆ 2014ರ ಫಲಿತಾಂಶವನ್ನು ಮಂಗಳವಾರ (ಜೂನ್ 04) ಪ್ರಕಟವಾಯಿತು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಳ ಬಹುಮತ ಪಡೆದು, ಸರ್ಕಾರ ರಚಿಸಲು ಮುಂದಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಹಲವು ಸಿನಿಮಾ ತಾರೆಯರು ಅದೃಷ್ಟ ಪರೀಕ್ಷೆಗಿಳಿದಿದ್ದರು. ಹಾಗಿದ್ರೆ, ಈ ಮಹಾಚುನಾವಣೆಯಲ್ಲಿ ಗೆದ್ದವರು.. ಸೋತ ನಟ ನಟಿಯರು ಯಾರು ಅಂತ ತಿಳಿದುಕೊಳ್ಳೋಣ.
ಪವನ್ ಕಲ್ಯಾಣ್ : ಎಪಿ ವಿಧಾನಸಭಾ ಚುನಾವಣೆಯಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್ ಅವರು ಪೀಠಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲದೆ, ಜನಸೇನಾ ಪಕ್ಷದ 21 ಅಭ್ಯರ್ಥಿಗಳೂ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ:Kalki 2898 AD : ಪ್ರಭಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ..! ಕಲ್ಕಿ ಟ್ರೇಲರ್ ರಿಲೀಸ್‌ಗೆ ಡೇಟ್ ಫಿಕ್ಸ್
ನಂದಮೂರಿ ಬಾಲಕೃಷ್ಣ : ನಂದಮೂರಿ ಬಾಲಕೃಷ್ಣ ಟಾಲಿವುಡ್‌ನ ಹಿರಿಯ ನಟ. ನಂದಮೂರಿ ಬಾಲಕೃಷ್ಣ ಹಿಂದೂಪುರಂನಿಂದ ಟಿಡಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಮೋಘ ಗೆಲುವು ಸಾಧಿಸಿದ್ದಾರೆ. ಇದು ಅವರಿಗೆ ಹ್ಯಾಟ್ರಿಕ್ ಗೆಲುವು.
ಕಂಗನಾ ರಣಾವತ್ : ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಕಳೆದ ಐದಾರು ವರ್ಷಗಳಿಂದ ಬಿಜೆಪಿ ಪರ ಧ್ವನಿ ಎತ್ತುತ್ತಿದ್ದರು. ಅದರ ಫಲವಾಗಿ ಈ ಬಾರಿ ಅವರಿಗೆ ಲೋಕಸಭೆ ಟಿಕೆಟ್ ನೀಡಲಾಗಿತ್ತು. ಕಂಗನಾ ಅವರು ಕಣಕ್ಕೆ ಇಳಿದ ಮೊದಲ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಕಂಗನಾ ಗೆದ್ದಿದ್ದಾರೆ.
ಸುರೇಶ್ ಗೋಪಿ : ಮಲಯಾಳಂ ನಟ ಸುರೇಶ್ ಗೋಪಿ ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಶ್ರೀಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದು ಕೇರಳದಲ್ಲಿ ಬಿಜೆಪಿಯ ಮೊದಲ ಗೆಲುವು. ಈ ಸಂದರ್ಭದಲ್ಲಿ ಸುರೇಶ್ ಗೋಪಿ ತಮ್ಮ ಯಶಸ್ಸನ್ನು ಮೋದಿಯವರಿಗೆ ಅರ್ಪಿಸಿದರು.
ಇದನ್ನೂ ಓದಿ:Allu arjun : ಇವರೇ ನೋಡಿ ʼಪುಷ್ಪರಾಜ್ʼ ನಟ ಅಲ್ಲು ಅರ್ಜುನ್ ಎರಡನೇ ಹೆಂಡತಿ..!
ರವಿಕಿಶನ್ : ಜನಪ್ರಿಯ ಭೋಜ್‌ಪುರಿ ನಟ ರವಿ ಕಿಶನ್ ಉತ್ತರ ಪ್ರದೇಶದ ಗೋರಖ್‌ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಸಂಸದರಾಗಿ ಇದು ಅವರಿಗೆ ಎರಡನೇ ಗೆಲುವು.
ಮನೋಜ್ ತಿವಾರಿ : ಭೋಜ್‌ಪುರಿ ಚಲನಚಿತ್ರೋದ್ಯಮದ ಖ್ಯಾತ ನಟ ಮತ್ತು ಗಾಯಕ ಮನೋಜ್ ತಿವಾರಿ ಈಶಾನ್ಯ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ವಿರುದ್ಧ ಜಯಗಳಿಸಿದ್ದಾರೆ. ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು.
ಅರುಣ್ ಗೋವಿಲ್ : ಜನಪ್ರಿಯ ಧಾರಾವಾಹಿ ‘ರಾಮಾಯಣ’ದಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಮೀರತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರುಣ್ ಗೋವಿಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ರಚನಾ ಬ್ಯಾನರ್ಜಿ : ತೆಲುಗು ಸಿನಿಮಾ ನಟಿ ರಚನಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಹೂಗ್ಲಿ ಕ್ಷೇತ್ರದಿಂದ ಟಿಎಂಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ರಚನಾ ಅವರು ಬಿಜೆಪಿಯ ಲಾಕೆಟ್ ಚಟರ್ಜಿ ವಿರುದ್ಧ ಸುಮಾರು 60 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ:ರಜನಿಕಾಂತ್ ಆ ಒಂದು ಮಾತು ಆಂಧ್ರ ಆಡಳಿತ ಸರ್ಕಾರದ ಪತನಕ್ಕೆ ಕಾರಣ..! ಹೇಗೆ ಗೊತ್ತಾ..?
ಶತ್ರುಜ್ಞ ಸಿನ್ಹಾ : ಈ ಹಿಂದೆ ಬಿಜೆಪಿಯಲ್ಲಿ ಜನಪ್ರಿಯ ನಟರಾಗಿದ್ದ ಶತ್ರುಜ್ಞ ಸಿನ್ಹಾ ಅವರು ಮೋದಿಯನ್ನು ಟೀಕಿಸಿ ಪಕ್ಷವನ್ನು ತೊರೆದಿದ್ದರು. ಈ ಚುನಾವಣೆಯಲ್ಲಿ ಅವರು ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಹೇಮಾ ಮಾಲಿನಿ : ಬಾಲಿವುಡ್ ನಟಿ ಹೇಮಾ ಮಾಲಿನಿ ಮಥುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತ್ತೊಮ್ಮೆ ಭಾರಿ ಬಹುಮತದೊಂದಿಗೆ ಗೆದ್ದಿದ್ದಾರೆ. ಈ ಹಿಂದೆಯೂ ಈ ಕ್ಷೇತ್ರದಿಂದ ಗೆದ್ದಿದ್ದರು. ಚುನಾವಣಾ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಟೀಕೆಗಳ ನಡುವೆಯೂ ಹೇಮಾ ಮತ್ತೊಮ್ಮೆ ಸಂಸದೆ ಪಟ್ಟ ಅಲಂಕರಿಸಿದ್ದಾರೆ.
ಸೋತವರು: ನಟ ಶಿವವರಾಜ್ ಕುಮಾರ್ ಪತ್ನಿ ಹಾಗೂ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಗೀತಾ ಪರವಾಗಿ ಶಿವಣ್ಣ ಸಕ್ರಿಯವಾಗಿ ಪ್ರಚಾರ ನಡೆಸಿದರೂ ಸಹ ಅವರಿಗೆ ಗೆಲುವು ಲಭಿಸಿಲ್ಲ. ಎಪಿ ವಿಧಾನಸಭಾ ಚುನಾವಣೆಯಲ್ಲಿ ನಗರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೋಜಾ ಕೂಡ ಸೋಲು ಕಂಡಿದ್ದಾರೆ. ಹಾಗೆಯೇ ಮತ್ತೊಬ್ಬ ಟಾಲಿವುಡ್ ನಾಯಕಿ ನವನೀತ್ ಕೌರ್ ಕೂಡ ಸೋತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.